ಬಾಲನಟಿಯಾಗಿ ಚಿತ್ರರಂಗ ಪ್ರವೇಶ 
ಫೋಟೋ ಗ್ಯಾಲರಿ

ಸ್ವಿಮ್​ಸೂಟ್​ನಲ್ಲಿ ಅನಿಕಾ... ಮಾದಕ ಫೋಟೋಗಳನ್ನು ಹರಿಬಿಟ್ಟ ಸೌತ್​ ಸುಂದರಿ! Anikha Surendran

ರಮೇಶ್​ ಕುಮಾರ್​​ ಬಿ ಎಡಮೋಳೆ

ಬಾಲನಟಿಯಾಗಿ ಚಿತ್ರರಂಗ ಪ್ರವೇಶ

ತಲಾ ಅಜಿತ್​ ಅಭಿನಯದ ಕಾಲಿವುಡ್​ ಸೂಪರ್​ ಡೂಪರ್​ “ಯೆನ್ನೈ ಅರಿಂದಾಲ್​” ಮತ್ತು “ವಿಶ್ವಾಸಂ” ಚಿತ್ರಗಳಲ್ಲಿ ಮಗಳ ಪಾತ್ರದಲ್ಲಿ ಬಾಲ ನಟಿಯಾಗಿ ನಟಿಸುವ ಮೂಲಕ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ್ದ ಅನಿಕಾ ಸುರೇಂದ್ರನ್, ಇದೀಗ ನಾಯಕಿಯಾಗಿ ಅನೇಕ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಸ್ಟಾರ್​ ನಟಿಯಾಗುವ ಲಕ್ಷಣ

ಸದ್ಯ ಅನಿಕಾ ಅವರ ವಯಸ್ಸು 21. ದಕ್ಷಿಣ ಭಾರತದ ಭರವಸೆಯ ನಾಯಕಿಯಾಗುವ ಎಲ್ಲ ಲಕ್ಷಣಗಳು ಅನಿಕಾರಲ್ಲಿದೆ. ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವ ಅನಿಕಾ, ಆಗಾಗ ತಮ್ಮ ಸ್ಟೈಲಿಶ್​ ಹಾಗೂ ಹಾಟ್​ ಫೋಟೋಗಳನ್ನು ಹರಿಬಿಡುವ ಮೂಲಕ ಅಭಿಮಾನಿಗಳ ಮನತಣಿಸುತ್ತಿರುತ್ತಾರೆ.

ಹೊಸ ಸಿನಿಮಾಗೆ ಸಜ್ಜು

ಕಳೆದ ವರ್ಷ ನಟ ಧನುಷ್​ ನಿರ್ದೇಶನದ ನೀಲವುಕು ಎನ್ ಮೆಲ್ ಎನ್ನಡಿ ಕೊಬಮ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಅನಿಕಾ ಸುರೇಂದ್ರನ್, ಈಗ ತಮ್ಮ ಮುಂಬರುವ ತಮಿಳು ಚಿತ್ರ ವಾಸುವಿನ್ ಗರ್ಬಿನಿಗಲ್‌ಗಾಗಿ ಸಜ್ಜಾಗುತ್ತಿದ್ದಾರೆ.

ವಿರಾಮ ಸಿಕ್ಕಾಗಲೆಲ್ಲ ಪ್ರವಾಸ

ತಮ್ಮ ಬಿಜಿಯಾದ ವೇಳಾಪಟ್ಟಿಯ ನಡುವೆಯೂ, ಸಮಯ ಸಿಕ್ಕಾಗಲೆಲ್ಲ ಪ್ರವಾಸದ ಮೋಜು-ಮಸ್ತಿಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಇತ್ತೀಚೆಗೆ ಹಸಿರು ಬೆಟ್ಟಗಳ ನಡುವಿನ ಉತ್ತಮ ವಿಹಾರದ ಫೋಟೋಗಳನ್ನು ಅನಿಕಾ ಹಂಚಿಕೊಂಡಿದ್ದಾರೆ.

ಮೊನೊಕಿನಿಯಲ್ಲಿ ಸೌಂದರ್ಯ ರಾಶಿ

ಈ ರಜೆಯ ನಡುವೆ ಬಿಳಿ ಪಟ್ಟೆಯುಳ್ಳ ಮೊನೊಕಿನಿಯನ್ನು ಧರಿಸಿ ನೀರಿನಲ್ಲಿ ಮಿಂದೆದ್ದಿದ್ದಾರೆ ಅನಿಕಾ. ಮೊನೊಕಿನಿ ಧರಿಸಿ, ಮೈಮೇಲೆ ಒಂದು ಟವಲ್ ಹೊದ್ದುಕೊಂಡು, ಕನ್ನಡಕ ಧರಿಸಿ, ಮಾದಕವಾಗಿ ಕ್ಯಾಮೆರಾಗೆ ಪೋಸ್​ ನೀಡಿದ್ದಾರೆ.

ಸಂಪೂರ್ಣ ಶಾಂತಿ

ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೋಗಳಿಗೆ ಎರಡು ದಿನದ ಸಂಪೂರ್ಣ ಶಾಂತಿ ಅಥವಾ ನೆಮ್ಮದಿ ಎಂಬ ಅಡಿಬರವನ್ನು ಅನಿಕಾ ಬರೆದುಕೊಂಡಿದ್ದಾರೆ.

ಅನಿಕಾ ಮೈಮಾಟಕ್ಕೆ ಪಟ್ಟೆ ಹುಡುಗರು ಫಿದಾ

20 ಗಂಟೆಗಳ ಹಿಂದೆ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೋಗೆ ಈಗಾಗಲೇ 1 ಲಕ್ಷ 75 ಸಾವಿರಕ್ಕೂ ಅಧಿಕ ಮಂದಿ ಲೈಕ್​ ಮಾಡಿದ್ದಾರೆ. ಸಾವಿರಾರು ನೆಟ್ಟಿಗರು ಕಾಮೆಂಟ್​ ಮಾಡಿದ್ದು, ಅನಿಕಾರ ಮೈಮಾಟ ನೋಡಿ ಫಿದಾ ಆಗಿದ್ದಾರೆ.