101 ಅಂತಸ್ತಿನ ಕಟ್ಟಡ
ಅಮೇರಿಕನ್ ಕ್ಲೈಂಬರ್ ಎಂದೇ ಖ್ಯಾತಿ ಗಳಿಸಿರುವ ಆ್ಯಲೆಕ್ಸ್ ಹೊನ್ನಾಲ್ಡ್ ಎಂಬಾತ ಆಕಾಶಕ್ಕೆ ಮುತ್ತಿಡುವ ತೈವಾನ್‌ನ ತೈಪೆ 101 ಅಂತಸ್ತಿನ ಕಟ್ಟಡವನ್ನು ಯಾವುದೇ ಹಗ್ಗ, ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದೆ ಹತ್ತಿರುವುದು ಇದೀಗ ನೋಡುಗರ ಹುಬ್ಬೇರಿಸಿದೆ2004ರಿಂದ 2010 ರವರೆಗೆ ಜಗತ್ತಿನ ಅತಿ ಎತ್ತರದ ಕಟ್ಟಡ
2004ರಿಂದ 2010 ರವರೆಗೆ ಜಗತ್ತಿನ ಅತಿ ಎತ್ತರದ ಕಟ್ಟಡ ಇದಾಗಿತ್ತು. ಆದರೀಗ ಸದ್ಯ ದುಬೈನಲ್ಲಿರುವ ಬುರ್ಜ್ ಖಲೀಫಾ ಜಗತ್ತಿನ ಅತ್ತಿ ಎತ್ತರದ ಕಟ್ಟಡ ಎಂಬ ಪಟ್ಟ ಪಡೆದುಕೊಂಡಿದೆ. 'ತೈಪೆ 101' ಎಂದು ಹೆಸರಿಸಲಾದ ಈ ಕಟ್ಟಡವು 508 ಮೀ (1,667 ಅಡಿ) ಎತ್ತರವಿದ್ದು, ಉಕ್ಕು, ಗಾಜು ಮತ್ತು ಕಾಂಕ್ರೀಟ್‌ನಿಂದ ವಿಶೇಷ ವಿನ್ಯಾಸದಲ್ಲಿ ರೂಪಿಸಲಾಗಿದೆ.1 ಗಂಟೆ 31 ನಿಮಿಷಗಳಲ್ಲಿ
ನೋಡಲು ಆಕರ್ಷವಾಗಿರುವ ಈ ಕಟ್ಟಡ ಮೇಲಿನಿಂದ ಅಷ್ಟೇ ಡೇಂಜರೆಸ್ ಆಗಿ ಕಾಣುತ್ತದೆ. ಈ ಸಾಹಸಕ್ಕೆ ಮುಂದಾದ ಆ್ಯಲೆಕ್ಸ್, ಇಷ್ಟು ಎತ್ತರ ಬಿಲ್ಡಿಂಗ್ ಅನ್ನು ಕೇವಲ 1 ಗಂಟೆ 31 ನಿಮಿಷಗಳಲ್ಲಿ ಹತ್ತಿದ್ದಾರೆ ಎಂಬುದು ನಿಜಕ್ಕೂ ಅಚ್ಚರಿ. ಕಟ್ಟಡದ ತುತ್ತ ತುದಿ ತಲುಪಿದಾಗ ಅವರ ಹೃದಯ 1 ನಿಮಿಷಕ್ಕೆ 165 ಬಡಿತದಲ್ಲಿತ್ತು ಎನ್ನಲಾಗಿದೆ.ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರ
ಕ್ಯಾಲಿಫೋರ್ನಿಯಾದ ಯೊಸೆಮೈಟ್ ನ್ಯಾಷನಲ್ ಪಾರ್ಕ್ನಲ್ಲಿರುವ ಲಂಬವಾದ ಗ್ರಾನೈಟ್ ಬಂಡೆಯಾದ ಎಲ್ ಕ್ಯಾಪಿಟನ್ ಅನ್ನು ಏರಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಹೊನ್ನಾಲ್ಡ್, ಈ ಕಟ್ಟಡದ 101 ಮಹಡಿಯನ್ನು ಹತ್ತಿರುವುದು ನಿಜಕ್ಕೂ ಎಂಥವರ ಮೈನಡುಗಿಸುತ್ತದೆ. ಇದರ ವಿಡಿಯೋ ನೆಟ್ಫ್ಲಿಕ್ಸ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆಅಲೈನ್ ರಾಬರ್ಟ್ ದಾಖಲೆ ಬ್ರೇಕ್
ತೈವಾನ್‌ನ ರಾಜಧಾನಿಯಲ್ಲಿ ಅವರ ಈ ಸಾಹಸಮಯ ದೃಶ್ಯವನ್ನು ನೆಟ್‌ಫ್ಲಿಕ್ಸ್‌ನಲ್ಲಿ ನೇರ ಪ್ರಸಾರ ಮಾಡಲಾಯಿತು. ಅಸಲಿಗೆ, ತೈಪೆ 101 ಕಟ್ಟಡವನ್ನು ಕೇವಲ 1 ಗಂಟೆ 31 ನಿಮಿಷಗಳಲ್ಲಿ ಹತ್ತುವ ಮೂಲಕ "ಸ್ಪೈಡರ್‌ಮ್ಯಾನ್" ಎಂದೇ ಗುರುತಿಸಿಕೊಂಡಿರುವ ಫ್ರೆಂಚ್ ಮೂಲದ ಅಲೈನ್ ರಾಬರ್ಟ್ ಅವರ ದಾಖಲೆಯನ್ನು ಆ್ಯಲೆಕ್ಸ್ ಮುರಿದಿದ್ದಾರೆ.ನಾಲ್ಕು ಗಂಟೆಗಳಲ್ಲಿ ಹತ್ತಿದ್ದರು
ಆ ಸಮಯದಲ್ಲಿ ವಿಶ್ವದ ಅತಿ ಎತ್ತರದ ಕಟ್ಟಡವಾಗಿದ್ದ ತೈಪೆ ತುದಿಯನ್ನು ಅಲೈನ್ ನಾಲ್ಕು ಗಂಟೆಗಳಲ್ಲಿ ಹತ್ತಿದ್ದರು. ಆದರೆ, ಅವರು ಹಗ್ಗ ಸೇರಿದಂತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಮೂಲಕ ಈ ದಾಖಲೆ ನಿರ್ಮಿಸಿದ್ದರು ಎಂಬುದು ಗಮನಾರ್ಹ.