ಕಾಲಿವುಡ್ ಬ್ಯೂಟಿ ಯಶಿಕಾ
ಕಾಲಿವುಡ್ನ “ಇರುಟ್ಟು ಅರಯಿಲ್ ಮುರಟ್ಟು ಕುತ್ತು” ಹೆಸರಿನ ವಯಸ್ಕರ ಕಾಮಿಡಿ ಚಿತ್ರ ಹಾಗೂ ಬಿಗ್ಬಾಸ್ ಶೋ ಮೂಲಕ ಖ್ಯಾತಿ ಪಡೆದಿರುವ ನಟಿ ಯಶಿಕಾ ಆನಂದ್, ಭೀಕರ ಕಾರು ಅಪಘಾತದ ಬಳಿಕ ಚೇತರಿಸಿಕೊಂಡು ಸಂಪೂರ್ಣ ಸಹಜ ಜೀವನಕ್ಕೆ ಮರಳಿದ್ದಾರೆ.ಪಂಜಾಬಿ ಹುಡುಗಿ
ತಮಿಳು ಚಿತ್ರಗಳಲ್ಲಿ ನಟಿಸುವ ಇವರು, 1999ರ ಆಗಸ್ಟ್ 4ರಂದು ನವದೆಹಲಿಯಲ್ಲಿ ಪಂಜಾಬಿ ಹಿಂದೂ ಕುಟುಂಬದಲ್ಲಿ ಜನಿಸಿದರು. ನಂತರ ಕುಟುಂಬ ಚೆನ್ನೈಗೆ ಸ್ಥಳಾಂತರಗೊಂಡಿತು. ಇವರು ಚೆನ್ನೈನ ಶೆರ್ವುಡ್ ಹಾಲ್ ಶಾಲೆಯಲ್ಲಿ ಶಿಕ್ಷಣ ಪಡೆದರು.ಸ್ನೇಹಿತೆ ಸಾವು
2021, ಜುಲೈನಲ್ಲಿ ಮಧ್ಯರಾತ್ರಿ ಪಾರ್ಟಿ ಮುಗಿಸಿಕೊಂಡು ಬರುವಾಗ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯಶಿಕಾ ಆನಂದ್ ದೀರ್ಘ ಕಾಲ ಆಸ್ಪತ್ರೆಯಲ್ಲೇ ಉಳಿದು ಚಿಕಿತ್ಸೆ ಪಡೆಯಬೇಕಾಯಿತು. ಎದ್ದು ನಡೆದಾಡಲು ಸಹ ಅವರಿಗೆ ಆಗುತ್ತಿರಲಿಲ್ಲ. ಅಪಘಾತದಲ್ಲಿ ಯಶಿಕಾ ಅವರ ಆಪ್ತ ಸ್ನೇಹಿತೆ ವಲ್ಲಿಚೆಟ್ಟಿ ಭವಾನಿ ಅವರು ಸ್ಥಳದಲ್ಲೇ ಸಾವಿಗೀಡಾಗಿದರು.ಸಾವಿನ ದವಡೆಯಿಂದ ಪಾರು
ಸಾವಿನ ಹೊಸ್ತಿಲಿಗೆ ಹೋಗಿ ಅದೃಷ್ಟವಶಾತ್ ಬದುಕಿ ಬಂದಿರುವ ಯಶಿಕಾ, ಹಿಂದಿನ ನೋವೆಲ್ಲ ಮರೆತು ಮತ್ತೆ ಗ್ಲಾಮರ್ ಲೋಕದ ಕ್ಷಣಗಳನ್ನು ಸವಿಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಿದ್ದ ಯಶಿಕಾ, ಅಪಘಾತದ ನಂತರ ಸಾಕಷ್ಟು ದಿನಗಳ ಕಾಲ ಜಾಲತಾಣದಿಂದ ದೂರ ಉಳಿದಿದ್ದರು.ಜಾಲತಾಣದಲ್ಲಿ ಆ್ಯಕ್ಟೀವ್
ಸಂಪೂರ್ಣ ಗುಣಮುಖರಾಗಿ ಸಹಜ ಜೀವನಕ್ಕೆ ಮರಳಿರುವ ಯಶಿಕಾ ಮತ್ತೆ ಜಾಲತಾಣದಲ್ಲಿ ಆ್ಯಕ್ಟೀವ್ ಆಗಿದ್ದು, ಗ್ಲಾಮರಸ್ ಫೋಟೋಗಳನ್ನು ಹರಿಬಿಡುವ ಸಂಚಲನ ಸೃಷ್ಟಿಸುತ್ತಿದ್ದಾರೆ. ಆಗಾಗಾ ಅಭಿಮಾನಿಗಳ ಜತೆ ಸಂವಹನವನ್ನು ನಡೆಸುತ್ತಿರುತ್ತಾರೆ.ಬೋಲ್ಡ್ ಫೋಟೋಗಳ ರಾಶಿ
ಇದೀಗ ಯಶಿಕಾ ಅವರು ಮತ್ತಷ್ಟು ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಶ್ವೇತವರ್ಣದ ಪಾರದರ್ಶಕ ಉಡುಪಿನಲ್ಲಿ ವಿವಿಧ ಭಂಗಿಗಳಲ್ಲಿ ಯಶಿಕಾ ಪೋಸ್ ನೀಡಿದ್ದಾರೆ. ಬೀಚ್ ಪ್ಲೀಸ್ ಐ ಆ್ಯಮ್ ಇನ್ ಪ್ಯಾರಡೈಸ್ ( ಬೀಚ್ ದಯವಿಟ್ಟು ನಾನು ಸ್ವರ್ಗದಲ್ಲಿದ್ದೇನೆ) ಎಂದು ಅಡಿಬರಹ ಬರೆದುಕೊಂಡಿದ್ದಾರೆ.ಮೈಮಾಟಕ್ಕೆ ಫಿದಾ
ಹಾಟ್ ಬ್ಯೂಟಿ ಯಶಿಕಾರ ಮೈಮಾಟಕ್ಕೆ ಅಭಿಮಾನಿಗಳು ಕೂಡ ಫಿದಾ ಆಗಿದ್ದಾರೆ. ವೈರಲ್ ಆಗಿರುವ ಫೋಟೋಗಳಿಗೆ 2 ಲಕ್ಷಕ್ಕೂ ಅಧಿಕ ಲೈಕ್ಗಳು ಬಂದಿದ್ದು, ಸಾವಿರಾರು ಕಾಮೆಂಟ್ಗಳು ಹರಿದುಬಂದಿವೆ.