ಹಾಟ್ ಬ್ಯೂಟಿ ಆಶಿಕಾ
ಪ್ರಸ್ತುತ ಸ್ಯಾಂಡಲ್ವುಡ್ನಲ್ಲಿ ಇರುವ ಸ್ಟಾರ್ ನಟಿಯರಲ್ಲಿ ಆಶಿಕಾ ರಂಗನಾಥ್ ಕೂಡ ಒಬ್ಬರು. ಕೌಟುಂಬಿಕ ಪಾತ್ರಗಳಿಗೂ ಸೈ ಹಾಗೂ ಮೈಮಾಟ ಪ್ರದರ್ಶಿಸುವ ಬೋಲ್ಡ್ ಪಾತ್ರಗಳಿಗೂ ಸೈ ಎನ್ನುವ ಆಶಿಕಾ, ಚಂದನವನದ ಬಹು ಬೇಡಿಕೆ ನಟಿಯಾಗಿದ್ದಾರೆ.ಹಾಸನ ಕುವರಿ
ಆಶಿಕಾ ರಂಗನಾಥ್ ಅವರು 1996ರ ಆಗಸ್ಟ್ 5ರಂದು ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ಜನಿಸಿದರು. ಪ್ರಸ್ತುತ ಅಂದರೆ, 2026ರಲ್ಲಿ ಅವರ ವಯಸ್ಸು ಸುಮಾರು 29 ರಿಂದ 30 ವರ್ಷ. ಅವರ ತಂದೆ ಎನ್. ರಂಗನಾಥ್ ಸಿವಿಲ್ ಕಾಂಟ್ರಾಕ್ಟರ್ ಮತ್ತು ತಾಯಿ ಬಿ. ಸುಧಾ ರಂಗನಾಥ್ ಗೃಹಿಣಿ. ಅಕ್ಕ ಅನುಷಾ ರಂಗನಾಥ್ ಕೂಡ ಕನ್ನಡ ಚಿತ್ರರಂಗ ಮತ್ತು ಸೀರಿಯಲ್‌ಗಳಲ್ಲಿ ನಟಿ.ಕ್ರೇಜಿ ಬಾಯ್ ಮೂಲಕ ಎಂಟ್ರಿ
ಆಶಿಕಾ ಅವರು Clean and Clear Fresh Face Bangalore ಸ್ಪರ್ಧೆಯಲ್ಲಿ ರನರ್-ಅಪ್ ಆಗಿ ಗಮನ ಸೆಳೆದರು. ನಂತರ ನಿರ್ದೇಶಕ ಮಹೇಶ್ ಬಾಬು ಅವರಿಂದ 'ಕ್ರೇಜಿ ಬಾಯ್' (2016) ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.ಸಾಲು ಸಾಲು ಸಿನಿಮಾಗಳು
ಕ್ರೇಜಿ ಬಾಯ್ ಬಳಿಕ ರ್ಯಾಂಬೋ, ಮದಗಜ, ಮುಗುಳು ನಗೆ, ರಾಜು ಕನ್ನಡ ಮೀಡಿಯಂ, ತಾಯಿಗೆ ತಕ್ಕ ಮಗ, ಅವತಾರ ಪುರುಷ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಆಶಿಕಾ ನಟಿಸಿದ್ದಾರೆ ಮತ್ತು ಇಂದಿಗೂ ಸಕ್ರಿಯರಾಗಿದ್ದಾರೆ.ಕನ್ನಡಕ್ಕೆ ಮಾತ್ರ ಸೀಮಿತವಲ್ಲ
ಆಶಿಕಾ ಅವರು ಕೇವಲ ಕನ್ನಡ ಭಾಷೆಗೆ ಸೀಮಿತವಾಗಿಲ್ಲ. ಇದೀಗ ಅವರು ಪ್ಯಾನ್ ಇಂಡಿಯಾ ನಟಿ ಎಂಬ ಗರಿ ಪಡೆದುಕೊಂಡಿದ್ದಾರೆ. ತಮಿಳಿನಲ್ಲಿ ಪಟ್ಟತು ಅರಸನ್ ಮತ್ತು ತೆಲಗಿನಲ್ಲಿ ಅಮಿಗೋಸ್ ಹಾಗೂ ನಾ ಸಾಮಿ ರಂಗ ಸಿನಿಮಾಗಳಲ್ಲಿ ನಟಿಸಿದ್ದಾರೆ.ರವಿ ತೇಜ ಜತೆ ಇತ್ತೀಚಿನ ಸಿನಿಮಾ
ಟಾಲಿವುಡ್ ಮಾಸ್ ಮಹಾರಾಜ ರವಿತೇಜ ನಟನೆಯ 'ಭರ್ತ ಮಹಾಸಾಯುಲಕು ವಿಜ್ಞಪ್ತಿ' ಎಂಬ ಸಿನಿಮಾದಲ್ಲಿ ಆಶಿಕಾ ಅವರು ನಟಿಸಿದ್ದಾರೆ. ಈ ಸಿನಿಮಾ ಜನವರಿ 13ರಂದು ಬಿಡುಗಡೆಯಾಗಲಿದೆ.ಹಾಟ್ ಅವತಾರದಲ್ಲಿ ಆಶಿಕಾ
ಭರ್ತ ಮಹಾಸಾಯುಲಕು ವಿಜ್ಞಪ್ತಿ ಚಿತ್ರದಲ್ಲಿ ಆಶಿಕಾ ಹಾಟ್ ಅವತಾರ ತಾಳಿದ್ದಾರೆ. ಸ್ವಿಮ್ಶೂಟ್ನಲ್ಲಿ ಕಾಣಿಸಿಕೊಂಡಿರುವ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇಡೀ ಟ್ರೈಲರ್ ಪೂರ್ತಿ ಆಶಿಕಾ ಅವರ ಬೋಲ್ಡ್ ಅವತಾರಗಳಿವೆ. ಆಶಿಕಾ ಮೈಮಾಟಕ್ಕೆ ಪಡ್ಡೆ ಹುಡುಗರು ಫಿದಾ ಆಗಿದ್ದು, ಬೆಳ್ಳಿ ಪರದೆಯ ಮೇಲೆ ಆಶಿಕಾರನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ.