2 ಸೂಪರ್​ಹಿಟ್, ಡಬಲ್​ ಸಂಭಾವನೆ 
ಫೋಟೋ ಗ್ಯಾಲರಿ

ಡಬಲ್ ಆಯ್ತು ‘ಡ್ಯೂಡ್​’​ ಸಂಭಾವನೆ

ಮೋಹನ್​ ಶೆಟ್ಟಿ

2 ಸೂಪರ್​ಹಿಟ್, ಡಬಲ್​ ಸಂಭಾವನೆ

ತಮಿಳಿನ ಸೂಪರ್​ಹಿಟ್ ಲವ್​ ಟುಡೇ,​ ‘ಡ್ರ್ಯಾಗನ್’ ಚಿತ್ರಗಳ ಮೂಲಕ ಯುವ ಪ್ರೇಕ್ಷಕರ ಮನ ಗೆದ್ದಿರುವ ಹಾಗೂ ಯಶಸ್ಸು ಕಂಡಿರುವ ನಟ ಪ್ರದೀಪ್​ ರಂಗನಾಥನ್ ಈಗ ಸ್ಟಾರ್​ ನಟರಲ್ಲಿ ಒಬ್ಬರಾಗಿದ್ದಾರೆ.

ಸಿಂಪಲ್​ ಲುಕ್​, ಸಾಧಾರಣ ಮೈಕಟ್ಟು

ಸಾಧಾರಣ ಮೈಕಟ್ಟು, ಸಿಂಪಲ್​ ಲುಕ್​ ಮತ್ತು ಅಭಿನಯದಿಂದಲೇ ಇಂದು ಅಪಾರ ಸಿನಿಪ್ರಿಯರನ್ನು ಸಂಪಾದಿಸಿರುವ ಪ್ರದೀಪ್​, ಇದೀಗ ತಮ್ಮ ಸಂಭಾವನೆಯನ್ನು ದುಪ್ಪಟ್ಟು ಮಾಡಿಕೊಂಡಿದ್ದಾರೆ. ಅದು ಕೇವಲ ಎರಡ್ಮೂರು ಚಿತ್ರಗಳಿಂದ ಎಂಬುದು ಗಮನಾರ್ಹ.

ಪ್ರದೀಪ್​ ಪಡೆಯುತ್ತಿರುವ ಸಂಭಾವನೆ ಎಷ್ಟು?

2022ರಲ್ಲಿ, ಪ್ರದೀಪ್ ‘ಲವ್ ಟುಡೇ’ ಎಂಬ ಚಿತ್ರದ ಮುಖೇನ ಕಾಲಿವುಡ್​ಗೆ ಪಾದಾರ್ಪಣೆ ಮಾಡಿದರು. ವಿಶೇಷವಾಗಿ ಈ ಸಿನಿಮಾದ ಕಥೆಯನ್ನು ಸ್ವತಃ ಪ್ರದೀಪ್​ ಅವರೇ ಬರೆದು, ನಿರ್ದೇಶಿಸಿದರು. 5 ಕೋಟಿ ರೂ. ಬಜೆಟ್​ನಲ್ಲಿ ನಿರ್ಮಾಣಗೊಂಡ ಈ ಚಿತ್ರವು, ಬಾಕ್ಸ್ ಆಫೀಸ್​ನಲ್ಲಿ 100 ಕೋಟಿ ರೂ.ಗೂ ಅಧಿಕ ಲಾಭ ಕಂಡಿತು. ಇದರೊಟ್ಟಿಗೆ ಬ್ಲಾಕ್‌ಬಸ್ಟರ್ ಸಾಲಿಗೆ ಸೇರಿತು.

ಆರಂಭದಲ್ಲಿ 70 ಲಕ್ಷ ರೂ. ಸಂಭಾವನೆ

ಲವ್​ ಟುಡೇ ಚಿತ್ರಕ್ಕೆ ಆರಂಭದಲ್ಲಿ ಪ್ರದೀಪ್‌ ಪಡೆದಿದ್ದು, 70 ಲಕ್ಷ ರೂ. ಸಂಭಾವನೆ. ಸಿನಿಮಾದ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಪೇಮೆಂಟ್​ ಕೋಟಿ ರೂ.ಗೆ ಏರಿಕೆಯಾಗಿದೆ.

ಬ್ಯಾಟ್ ಟು ಬ್ಯಾಕ್​ ಹಿಟ್​

ಲವ್​ ಟುಡೇ ಬಳಿಕ ಡ್ರ್ಯಾಗನ್​ ಚಿತ್ರವು ಸೂಪರ್​ಹಿಟ್​ ಆಯಿತು. ಇದು ಜಾಗತಿಕವಾಗಿ 150 ಕೋಟಿ ರೂ.ಗೂ ಹೆಚ್ಚು ಲಾಭ ಗಳಿಸಿತು. ಪ್ರಸ್ತುತ, ಪ್ರದೀಪ್ ರಂಗನಾಥನ್​ ಅವರ ಮುಂಬರುವ ‘ಲವ್​ ಇನ್ಶೂರೆನ್ಸ್ ಕಂಪನಿ’ ಹಾಗೂ ಇನ್ನೊಂದು​​ ಯೋಜನೆ ಸೇರಿ ಒಟ್ಟು ಸಂಭಾವನೆ ಸುಮಾರು 17 ಕೋಟಿ ರೂ.ಗೆ ಏರಿದೆ ಎಂದು ವರದಿಗಳು ಸೂಚಿಸಿವೆ.