ರಕ್ತಹೀನತೆಗೆ ರಾಮಬಾಣ 
ಫೋಟೋ ಗ್ಯಾಲರಿ

ಪುಟ್ಟ ಒಣ ದ್ರಾಕ್ಷಿಯಲ್ಲಿದೆ ಆರೋಗ್ಯದ ಗಣಿ

ಮಣಿಕಂಠ ಪಾ ಹಿರೇಮಠ

ರಕ್ತಹೀನತೆಗೆ ರಾಮಬಾಣ

ಒಣ ದ್ರಾಕ್ಷಿಯಲ್ಲಿ ಕಬ್ಬಿಣಾಂಶ ಹೇರಳವಾಗಿದ್ದು, ಇದು ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪ್ರತಿದಿನ ನೆನೆಸಿದ ಒಣ ದ್ರಾಕ್ಷಿ ತಿನ್ನುವುದರಿಂದ ರಕ್ತಹೀನತೆ ದೂರವಾಗುತ್ತದೆ.

ಜೀರ್ಣಕ್ರಿಯೆ ಸುಧಾರಣೆ

ಇದು ನಾರಿನಂಶದಿಂದ ಸಮೃದ್ಧವಾಗಿರುವುದರಿಂದ, ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಿ, ಜೀರ್ಣಾಂಗ ವ್ಯವಸ್ಥೆಯು ಸುಗಮವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.

ಮೂಳೆಗಳ ಬಲವರ್ಧನೆ

ಒಣ ದ್ರಾಕ್ಷಿಯಲ್ಲಿ ಕ್ಯಾಲ್ಸಿಯಂ ಮತ್ತು ಬೋರಾನ್ ಎಂಬ ಪೋಷಕಾಂಶಗಳಿವೆ. ಇವು ಮೂಳೆಗಳನ್ನು ಗಟ್ಟಿಯಾಗಿಸಲು ಮತ್ತು ಕೀಲು ನೋವಿನಂತಹ ಸಮಸ್ಯೆಗಳನ್ನು ತಡೆಗಟ್ಟಲು ಸಹಕಾರಿ.

ದೃಷ್ಟಿ ದೋಷಕ್ಕೆ ಪರಿಹಾರ

ಇದರಲ್ಲಿರುವ ವಿಟಮಿನ್ ಎ ಮತ್ತು ಬೀಟಾ ಕ್ಯಾರೋಟಿನ್ ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ವಯಸ್ಸಾದಂತೆ ಬರುವ ದೃಷ್ಟಿ ದೋಷವನ್ನು ಕಡಿಮೆ ಮಾಡುತ್ತದೆ.

ಶಕ್ತಿಯ ಸಂವರ್ಧಕ

ಕ್ರೀಡಾಪಟುಗಳು ಅಥವಾ ದಣಿದವರಿಗೆ ಒಣ ದ್ರಾಕ್ಷಿ ತಕ್ಷಣದ ಶಕ್ತಿ ನೀಡುತ್ತದೆ. ಇದರಲ್ಲಿರುವ ನೈಸರ್ಗಿಕ ಸಕ್ಕರೆ ಅಂಶವು ದೇಹಕ್ಕೆ ತಕ್ಷಣದ ಎನರ್ಜಿ ನೀಡಲು ನೆರವಾಗುತ್ತದೆ.