ಬೇಸಿಗೆಯ ಬಿಸಿಲಿಗೆ 'ಕೂಲ್' ಮದ್ದು: ಈ 5 ಆಹಾರಗಳು ನಿಮ್ಮ ದೇಹಕ್ಕೆ ಎಸಿ ಇದ್ದಂತೆ! 
ಫೋಟೋ ಗ್ಯಾಲರಿ

ಬೇಸಿಗೆಯ ಬಿಸಿಲಿಗೆ 'ಕೂಲ್' ಮದ್ದು: ಈ 5 ಆಹಾರಗಳು ನಿಮ್ಮ ದೇಹಕ್ಕೆ ಎಸಿ ಇದ್ದಂತೆ!

ವಿಶ್ವಾಸ್​ ಎನ್​ ಜೋಳದಾಳು

ಬೇಸಿಗೆಯ ಬಿಸಿಲಿಗೆ 'ಕೂಲ್' ಮದ್ದು: ಈ 5 ಆಹಾರಗಳು ನಿಮ್ಮ ದೇಹಕ್ಕೆ ಎಸಿ ಇದ್ದಂತೆ!

ದೇಶದ್ಯಂತ ಸೂರ್ಯನ ಪ್ರತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮನುಷ್ಯನ ದೇಹದ ಉಷ್ಣತೆ ಗಗನಕ್ಕೇರುತ್ತಿದ್ದು, ನಿರ್ಜಲೀಕರಣ ಮತ್ತು ಹೀಟ್ ಸ್ಟ್ರೋಕ್ ಸಂಭವಿಸುವ ಭೀತಿ ಎದುರಾಗಿದೆ. ಕೇವಲ ನೀರು ಕುಡಿಯುವುದು ಮಾತ್ರವಲ್ಲದೆ, ನಾವು ಸೇವಿಸುವ ಆಹಾರವೂ ದೇಹವನ್ನು ಒಳಗಿನಿಂದ ತಂಪಾಗಿಸುವುದು ಈ ಸಮಯದಲ್ಲಿ ಅತ್ಯಗತ್ಯ.

1. ಕಲ್ಲಂಗಡಿ ಹಣ್ಣು

ಕಲ್ಲಂಗಡಿಯಲ್ಲಿ ಶೇ. 92ರಷ್ಟು ನೀರಿನಾಂಶವಿರುತ್ತದೆ. ಇದರಲ್ಲಿರುವ ಲೈಕೋಪೀನ್ ಎಂಬ ಆಂಟಿ-ಆಕ್ಸಿಡೆಂಟ್ ಚರ್ಮವನ್ನು ಸೂರ್ಯನ ಕಿರಣಗಳಿಂದ ರಕ್ಷಿಸುತ್ತದೆ. ಇದು ಕೇವಲ ಬಾಯಾರಿಕೆ ತಣಿಸುವುದು ಮಾತ್ರವಲ್ಲದೆ, ದೇಹಕ್ಕೆ ತಕ್ಷಣದ ಎಲೆಕ್ಟ್ರೋಲೈಟ್ಸ್ ಒದಗಿಸುತ್ತದೆ.

2. ಸೌತೆಕಾಯಿ

ಕೂಲ್ ಆಸ್ ಎ ಕುಕುಂಬರ್ ಎಂಬ ಮಾತು ಸುಮ್ಮನೆ ಬಂದಿದ್ದಲ್ಲ. ಸೌತೆಕಾಯಿಯಲ್ಲಿ ಶೇ. 95ರಷ್ಟು ನೀರಿದೆ. ಇದು ದೇಹದ ಒಳಗಿನ ಕಸವನ್ನು ಹೊರಹಾಕಲು ಸಹಾಯ ಮಾಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಸಲಾಡ್ ಅಥವಾ ಜ್ಯೂಸ್ ರೂಪದಲ್ಲಿ ಇದನ್ನು ಪ್ರತಿದಿನ ಸೇವಿಸಿ.

3. ಎಳನೀರು

ನೈಸರ್ಗಿಕ ಶಕ್ತಿ ಪಾನೀಯವೆಂದರೆ ಅದು ಎಳನೀರು. ಇದರಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಸೋಡಿಯಂ ಸಮೃದ್ಧವಾಗಿದೆ. ಬೇಸಿಗೆಯಲ್ಲಿ ಬೆವರಿನ ಮೂಲಕ ಹೊರಹೋಗುವ ಲವಣಾಂಶಗಳನ್ನು ಮರುಪೂರಣ ಮಾಡಲು ಎಳನೀರಿಗಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ.

4. ಮೊಸರು ಮತ್ತು ಮಜ್ಜಿಗೆ

ಭಾರತೀಯ ಮನೆಮದ್ದುಗಳಲ್ಲಿ ಮಜ್ಜಿಗೆಗೆ ಅಗ್ರಸ್ಥಾನ. ಮೊಸರು ಹೊಟ್ಟೆಯನ್ನು ತಂಪಾಗಿರಿಸುವುದಲ್ಲದೆ, ಅದರಲ್ಲಿರುವ ಪ್ರೋಬಯಾಟಿಕ್ಸ್ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಒಂದು ಲೋಟ ಮಜ್ಜಿಗೆಗೆ ಸ್ವಲ್ಪ ಜೀರಿಗೆ ಪುಡಿ ಸೇರಿಸಿ ಕುಡಿದರೆ ಗ್ಯಾಸ್ಟ್ರಿಕ್ ಸಮಸ್ಯೆಯೂ ದೂರವಾಗುತ್ತದೆ.

5. ಪುದೀನಾ

ಪುದೀನಾ ಎಲೆಗಳು ನೈಸರ್ಗಿಕವಾಗಿಯೇ ತಂಪು ಗುಣವನ್ನು ಹೊಂದಿವೆ. ಇದು ಶ್ವಾಸಕೋಶ ಮತ್ತು ಹೊಟ್ಟೆಯನ್ನು ಶುದ್ಧೀಕರಿಸುತ್ತದೆ. ನಿಂಬೆ ಹಣ್ಣಿನ ರಸಕ್ಕೆ ಪುದೀನಾ ಸೇರಿಸಿ ಕುಡಿಯುವುದು ಬೇಸಿಗೆಯ ಅತ್ಯುತ್ತಮ ಪಾನೀಯಗಳಲ್ಲಿ ಒಂದು.