ಶುದ್ಧ ನೀರು ಕುಡಿಯಿರಿ 
ಫೋಟೋ ಗ್ಯಾಲರಿ

ಮಳೆಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ 5 ಸೂಪರ್ ಟಿಪ್ಸ್! | Monsoon Tips

ಮಣಿಕಂಠ ಪಾ ಹಿರೇಮಠ

ಶುದ್ಧ ನೀರು ಕುಡಿಯಿರಿ

ಮಳೆಗಾಲದಲ್ಲಿ ರೋಗಗಳು ಹೆಚ್ಚು. ಆದ್ದರಿಂದ ಕುಡಿಯುವ ನೀರನ್ನು ಕಾಯಿಸಿ ಆರಿಸಿ ಬಳಸಿ ಅಥವಾ ಉತ್ತಮ ಫಿಲ್ಟರ್ ಬಳಸಿ. ಇದರಿಂದ ಹಾನಿಕಾರಕ ಬ್ಯಾಕ್ಟೀರಿಯಾಗಳು ನಾಶವಾಗಿ ಆರೋಗ್ಯ ಸುರಕ್ಷಿತವಾಗಿರುತ್ತದೆ.

ರಸ್ತೆ ಬದಿಯ ಆಹಾರವನ್ನು ತಪ್ಪಿಸಿ

ತೆರೆದ ಜಾಗದಲ್ಲಿಡುವ ರಸ್ತೆ ಬದಿಯ ತಿಂಡಿ ಹಾಗೂ ಚಾಟ್ಸ್‌ಗಳಿಂದ ದೂರವಿರಿ. ಮಳೆಗಾಲದ ಗಾಳಿಯಲ್ಲಿನ ತೇವಾಂಶವು ಬ್ಯಾಕ್ಟೀರಿಯಾಗಳನ್ನು ಬೇಗನೆ ಆಕರ್ಷಿಸುವುದರಿಂದ ಹೊಟ್ಟೆಯ ಸೋಂಕು ಮತ್ತು ಅಜೀರ್ಣ ಕಾಡಬಹುದು.

ಕೈಗಳ ನೈರ್ಮಲ್ಯ ಕಾಪಾಡಿಕೊಳ್ಳಿ

ಆಹಾರ ಸೇವಿಸುವ ಮುನ್ನ ಮತ್ತು ಹೊರಗಿನಿಂದ ಬಂದ ತಕ್ಷಣ ಕೈಗಳನ್ನು ಸೋಪಿನಿಂದ ಚೆನ್ನಾಗಿ ತೊಳೆಯಿರಿ. ಇದು ಶೀತ, ಕೆಮ್ಮು ಹಾಗೂ ಇತರೆ ವೈರಲ್ ಸೋಂಕುಗಳು ದೇಹ ಸೇರದಂತೆ ತಡೆಯುವ ಸುಲಭ ಉಪಾಯ.

ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

ಹಸಿರು ಚಹಾ (Green Tea) ಮತ್ತು ಗಿಡಮೂಲಿಕೆ ಚಹಾಗಳು ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿವೆ. ಇವು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಮಳೆಗಾಲದ ಶೀತ-ಕೆಮ್ಮನ್ನು ತಡೆಯುತ್ತವೆ.

ಜ್ವರ ಬಂದರೆ ನಿರ್ಲಕ್ಷ್ಯ ಬೇಡ

ಮಳೆಗಾಲದಲ್ಲಿ ಹಠಾತ್ ಜ್ವರ, ಮೈಕೈ ನೋವು ಕಾಣಿಸಿಕೊಂಡರೆ ನೀವಾಗಿಯೇ ಮಾತ್ರೆಗಳನ್ನು ತೆಗೆದುಕೊಳ್ಳಬೇಡಿ. ತಕ್ಷಣವೇ ಹತ್ತಿರದ ವೈದ್ಯರನ್ನು ಭೇಟಿಯಾಗಿ ರಕ್ತ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ.