ಸೊಪ್ಪು
ಮಳೆಗಾಲದ ತೇವಾಂಶ ಮತ್ತು ಮಣ್ಣಿನಿಂದಾಗಿ ಸೊಪ್ಪುಗಳಲ್ಲಿ ಕಣ್ಣಿಗೆ ಕಾಣದ ಸಣ್ಣ ಬ್ಯಾಕ್ಟೀರಿಯಾ, ಕ್ರಿಮಿಕೀಟಗಳು ಬೇಗನೆ ಬೆಳೆಯುತ್ತವೆ. ಇವುಗಳನ್ನು ಸಂಪೂರ್ಣವಾಗಿ ತೊಳೆಯುವುದು ಕಷ್ಟ.ರಸ್ತೆ ಬದಿಯ ಫಾಸ್ಟ್ ಫುಡ್ & ಕರಿದ ತಿಂಡಿಗಳು
ತೆರೆದಿಟ್ಟ ವಾತಾವರಣದಲ್ಲಿ ಸಿಗುವ ಪಾನಿಪುರಿ, ಸಮೋಸಾಗಳು ತೇವಾಂಶ ಮತ್ತು ಕಲುಷಿತ ನೀರಿಗೆ ಬೇಗನೆ ತೆರೆದುಕೊಳ್ಳುವುದರಿಂದ ಹೊಟ್ಟೆಯ ಸೋಂಕು ಹೆಚ್ಚಾಗುತ್ತದೆ.ಸಮುದ್ರಾಹಾರ (ಸೀಫುಡ್)
ಮಳೆಗಾಲವು ಮೀನು ಮತ್ತು ಸೀಗಡಿಗಳ ಸಂತಾನೋತ್ಪತ್ತಿಯ ಅವಧಿಯಾಗಿದೆ. ಈ ಸಮಯದಲ್ಲಿ ಸೀಫುಡ್ ಸೇವಿಸುವುದರಿಂದ ಆಹಾರ ವಿಷಪೂರಿತವಾಗುವ ಸಾಧ್ಯತೆ ಹೆಚ್ಚು.ಮೊದಲೇ ಹೆಚ್ಚಿಟ್ಟ ಹಣ್ಣುಗಳು & ಹಸಿ ಸಲಾಡ್‌ಗಳು
ಹೆಚ್ಚಿಟ್ಟ ಹಣ್ಣುಗಳನ್ನು ಗಾಳಿಯಲ್ಲಿ ತೆರೆದಿಟ್ಟಾಗ ಬ್ಯಾಕ್ಟೀರಿಯಾಗಳು ಬೇಗನೆ ಆಕರ್ಷಿತವಾಗುತ್ತವೆ. ಹಣ್ಣುಗಳನ್ನು ಹೆಚ್ಚಿದ ಕೂಡಲೇ ಸೇವಿಸುವುದು ಸುರಕ್ಷಿತ.ತಂಪು ಪಾನೀಯಗಳು
ತಂಪಾದ ಬಾಟಲಿ ಪಾನೀಯಗಳು ದೇಹದ ತಾಪಮಾನವನ್ನು ಕಡಿಮೆ ಮಾಡಿ ಜೀರ್ಣಕ್ರಿಯೆಯನ್ನು ಮಂದಗೊಳಿಸುತ್ತವೆ.