ಸಕ್ಕರೆಯ ಅಂಶ
ಒಂದು ಕಪ್ ಬಬಲ್ ಟೀಯಲ್ಲಿ ಅತಿಯಾದ ಸಕ್ಕರೆ ಇರುತ್ತದೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ದಿಢೀರ್ ಹೆಚ್ಚಿಸಿ, ಮಧುಮೇಹದ ಅಪಾಯವನ್ನು ತಂದೊಡ್ಡಬಹುದು.ಕ್ಯಾಲೋರಿಗಳ ಬಾಂಬ್
ಇದರಲ್ಲಿ ಬಳಸುವ ಸಿರಪ್ ಮತ್ತು ಹಾಲಿನಿಂದಾಗಿ ಕ್ಯಾಲೋರಿಗಳು ಹೆಚ್ಚಿರುತ್ತವೆ. ಇದನ್ನು ನಿಯಮಿತವಾಗಿ ಕುಡಿಯುವುದರಿಂದ ದೇಹದ ತೂಕ ವೇಗವಾಗಿ ಹೆಚ್ಚಾಗಬಹುದು.ಜೀರ್ಣಕ್ರಿಯೆಯ ಸಮಸ್ಯೆ
ಇದರಲ್ಲಿರುವ ಟಪಿಯೋಕಾ ಪರ್ಲ್ಸ್ ಅಥವಾ ಬಬಲ್ಸ್ ಜೀರ್ಣಿಸಿಕೊಳ್ಳಲು ಕಷ್ಟವಾಗಬಹುದು. ಇದು ಮಲಬದ್ಧತೆ ಮತ್ತು ಹೊಟ್ಟೆಯ ಉಬ್ಬರಕ್ಕೆ ಕಾರಣವಾಗಬಹುದು.ಹೃದಯದ ಆರೋಗ್ಯಕ್ಕೆ ಧಕ್ಕೆ
ಬಬಲ್ ಟೀಯಲ್ಲಿರುವ ಕೃತಕ ಫ್ಲೇವರ್‌ಗಳು ಮತ್ತು ಟ್ರಾನ್ಸ್ ಫ್ಯಾಟ್‌ಗಳು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಿ, ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತವೆ.ಪೋಷಕಾಂಶಗಳ ಕೊರತೆ
ಇದರಲ್ಲಿ ಕೇವಲ ಕಾರ್ಬೋಹೈಡ್ರೇಟ್ಸ್ ಮತ್ತು ಸಕ್ಕರೆ ಇರುತ್ತದೆಯೇ ಹೊರತು, ದೇಹಕ್ಕೆ ಅಗತ್ಯವಾದ ಪ್ರೋಟೀನ್, ವಿಟಮಿನ್ ಅಥವಾ ಫೈಬರ್ ಇರುವುದಿಲ್ಲ. ಇದನ್ನು ಖಾಲಿ ಕ್ಯಾಲೋರಿ ಎನ್ನಲಾಗುತ್ತದೆ.