ಗೆಣಸಿನ ಹಲ್ವಾ 
ಫೋಟೋ ಗ್ಯಾಲರಿ

ಚಳಿಗಾಲದಲ್ಲಿ ನೀವು ಸವಿಯಲೇ ಬೇಕಾದ 5 ಸಿಹಿ ಗೆಣಸಿನ ಖಾದ್ಯಗಳು

ವಿನಾಯಕ ನಾಯಕ

ಗೆಣಸಿನ ಹಲ್ವಾ

ಗೆಣಸನ್ನು ಬೇಯಿಸಿ, ಸಿಪ್ಪೆ ಸುಲಿದು ಮ್ಯಾಶ್ ಮಾಡಿಕೊಳ್ಳಿ. ಬಾಣಲೆಯಲ್ಲಿ ತುಪ್ಪ ಹಾಕಿ, ಗೆಣಸಿನ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಹುರಿಯಿರಿ. ನಂತರ ಸಕ್ಕರೆ ಅಥವಾ ಬೆಲ್ಲ, ಏಲಕ್ಕಿ ಪುಡಿ ಮತ್ತು ಗೋಡಂಬಿ-ದ್ರಾಕ್ಷಿ ಸೇರಿಸಿದರೆ ರುಚಿಯಾದ ಹಲ್ವಾ ಸಿದ್ಧ.

ಗೆಣಸಿನ ಪಲ್ಯ

ಗೆಣಸನ್ನು ಸಣ್ಣಗೆ ಹೆಚ್ಚಿ, ಸಾಸಿವೆ, ಜೀರಿಗೆ, ಹಸಿಮೆಣಸಿನಕಾಯಿ ಮತ್ತು ಕರಿಬೇವು ಹಾಕಿ ಒಗ್ಗರಣೆ ಕೊಡಿ. ನಂತರ ಗೆಣಸನ್ನು ಸೇರಿಸಿ ಉಪ್ಪು ಮತ್ತು ಅರಿಶಿನ ಹಾಕಿ ಬೇಯಿಸಿ. ಕೊನೆಯಲ್ಲಿ ಕಾಯಿತುರಿ ಸೇರಿಸಿದರೆ ಚಪಾತಿ ಅಥವಾ ಅನ್ನದ ಜೊತೆ ಸವಿಯಲು ಪಲ್ಯ ಸಿದ್ಧವಾಗುತ್ತದೆ.

ಸುಟ್ಟ ಗೆಣಸಿನ ಚಾಟ್

ಗೆಣಸನ್ನು ಕೆಂಡದಲ್ಲಿ ಅಥವಾ ಓವನ್‌ನಲ್ಲಿ ಸುಟ್ಟು, ಸಣ್ಣ ತುಂಡುಗಳನ್ನಾಗಿ ಮಾಡಿ. ಅದಕ್ಕೆ ಉಪ್ಪು, ಕೆಂಪು ಮೆಣಸಿನ ಪುಡಿ, ಚಾಟ್ ಮಸಾಲಾ ಮತ್ತು ಸ್ವಲ್ಪ ನಿಂಬೆ ರಸ ಸೇರಿಸಿ. ಸಂಜೆ ಹೊತ್ತಿನ ತಿಂಡಿಯಾಗಿ ಇದು ಅತ್ಯುತ್ತಮ.

ಗೆಣಸಿನ ಪಾಯಸ

ಗೆಣಸನ್ನು ತುರಿದು ತುಪ್ಪದಲ್ಲಿ ಹುರಿಯಿರಿ. ನಂತರ ಹಾಲನ್ನು ಸೇರಿಸಿ ಚೆನ್ನಾಗಿ ಕುದಿಸಿ. ಗೆಣಸು ಬೆಂದ ಮೇಲೆ ಬೆಲ್ಲ ಅಥವಾ ಸಕ್ಕರೆ ಸೇರಿಸಿ. ಕೇಸರಿ ಮತ್ತು ಏಲಕ್ಕಿ ಪುಡಿ ಹಾಕಿದರೆ ಘಮಘಮಿಸುವ ಪಾಯಸ ಸಿದ್ಧವಾಗುತ್ತದೆ.

ಗೆಣಸಿನ ಪರೋಟ

ಬೇಯಿಸಿದ ಗೆಣಸನ್ನು ಚೆನ್ನಾಗಿ ಕಿವುಚಿ, ಅದಕ್ಕೆ ಗೋಧಿ ಹಿಟ್ಟು, ಉಪ್ಪು, ಖಾರದ ಪುಡಿ ಮತ್ತು ಅಜ್ವೈನ್ ಸೇರಿಸಿ ಹಿಟ್ಟು ಕಲಸಿಕೊಳ್ಳಿ. ನಂತರ ಸಾಧಾರಣ ಪರೋಟದಂತೆ ಲಟ್ಟಿಸಿ ತುಪ್ಪದಲ್ಲಿ ಬೇಯಿಸಿ. ಮೊಸರು ಅಥವಾ ಉಪ್ಪಿನಕಾಯಿಯೊಂದಿಗೆ ಇದು ಅದ್ಭುತ ರುಚಿ ನೀಡುತ್ತದೆ.