ಉಗುರುಬೆಚ್ಚಗಿನ ನೀರು ಮತ್ತು ನಿಂಬೆ ರಸ
ಉಗುರುಬೆಚ್ಚಗಿನ ನೀರು ಮತ್ತು ನಿಂಬೆ ರಸ
ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯುವುದು ತುಂಬಾ ಒಳ್ಳೆಯದು. ಇದರಲ್ಲಿರುವ ವಿಟಮಿನ್ ಸಿ ಚರ್ಮದ ಮೇಲಿನ ಕಪ್ಪು ಕಲೆಗಳನ್ನು ಕಡಿಮೆ ಮಾಡಿ, ಒಳಗಿನಿಂದ ಕಾಂತಿಯನ್ನು ನೀಡುತ್ತದೆ.ಗಜ್ಜರಿ ಮತ್ತು ಬೀಟ್‌ರೂಟ್ ಜ್ಯೂಸ್
ಇದನ್ನು ಮ್ಯಾಜಿಕ್ ಡ್ರಿಂಕ್ ಎಂದು ಸಹ ಕರೆಯಬಹುದು, ಬೀಟ್‌ರೂಟ್ ರಕ್ತವನ್ನು ಶುದ್ಧೀಕರಿಸಿದರೆ, ಗಜ್ಜರಿಯಲ್ಲಿರುವ ಬೀಟಾ-ಕ್ಯಾರೋಟಿನ್ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಇದು ಮುಖದ ಮೇಲೆ ಕೆಂಪು ಕಳೆ ಬರಲು ಸಹಾಯ ಮಾಡುತ್ತದೆ.ಎಳನೀರು
ಎಳನೀರು ಚರ್ಮಕ್ಕೆ ಅತ್ಯುತ್ತಮ ಹೈಡ್ರೇಶನ್ ನೀಡುತ್ತದೆ. ಇದರಲ್ಲಿರುವ ಪೊಟ್ಯಾಸಿಯಮ್ ಮತ್ತು ಆಂಟಿ-ಆಕ್ಸಿಡೆಂಟ್‌ಗಳು ಚರ್ಮದ ಸುಕ್ಕುಗಳನ್ನು ತಡೆಯುತ್ತವೆ ಮತ್ತು ಚರ್ಮವು ಮೃದುವಾಗಿ, ತಾಜಾವಾಗಿ ಕಾಣುವಂತೆ ಮಾಡುತ್ತದೆ.ಗ್ರೀನ್ ಟೀ
ಗ್ರೀನ್ ಟೀಯಲ್ಲಿ ಆಂಟಿ-ಆಕ್ಸಿಡೆಂಟ್‌ಗಳು ಹೇರಳವಾಗಿವೆ. ಇದು ಚರ್ಮದ ಉರಿಯೂತ ಮತ್ತು ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದಿನಕ್ಕೆ ಒಂದು ಕಪ್ ಗ್ರೀನ್ ಟೀ ಕುಡಿಯುವುದರಿಂದ ಚರ್ಮವು ಆರೋಗ್ಯಕರವಾಗಿರುತ್ತದೆ.ಅಲೋವೆರಾ ಜ್ಯೂಸ್
ಅಲೋವೆರಾ ಜ್ಯೂಸ್ ಚರ್ಮದ ಹೈಡ್ರೇಶನ್‌ಗೆ ಬೆಸ್ಟ್. ಇದು ಚರ್ಮದ ಕೋಶಗಳನ್ನು ಪುನರುಜ್ಜೀವನಗೊಳಿಸುತ್ತದೆ ಮತ್ತು ಮೊಡವೆಗಳ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ದಿನವೂ ಸ್ವಲ್ಪ ಪ್ರಮಾಣದಲ್ಲಿ ಇದನ್ನು ಕುಡಿಯುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.