ಪ್ರಕೃತಿಯು ಮನಸ್ಸು ಮತ್ತು ಆಲೋಚನೆಯನ್ನು ಸುಧಾರಿಸುವ ಶಕ್ತಿ ಹೊಂದಿದೆ
ಪ್ರಕೃತಿಯು ಮನಸ್ಸು ಮತ್ತು ಆಲೋಚನೆಯನ್ನು ಸುಧಾರಿಸುವ ಶಕ್ತಿ ಹೊಂದಿದೆ
nature; ಇತ್ತೀಚಿನ ದಿನಗಳಲ್ಲಿ ಜನರು ಪ್ರಕೃತಿಯ ನಡುವೆ ವಾಸಿಸುವುದಕ್ಕಿಂತ ಹೆಚ್ಚಾಗಿ ಮೊಬೈಲ್, ಲ್ಯಾಪ್‌ಟಾಪ್‌ಗಳು ಹಾಗೂ ಟಿವಿ ಪರದೆಗಳಲ್ಲಿ ಮುಳುಗಿ ಹೋಗಿದ್ದಾರೆ. ಇದು ನಿರಂತರ ಆತಂಕ, ಸಂಚಾರ ಆಯಾಸ ನಮ್ಮ ಆರೋಗ್ಯದ ಮೇಲೆ ನೇರ ಪರಿಣಾಮವನ್ನು ಬೀರುತ್ತಿದೆ. ಪ್ರಕೃತಿಯು ನಮ್ಮ ಮನಸ್ಸು, ದೇಹ ಮತ್ತು ಆಲೋಚನೆಯನ್ನು ಸುಧಾರಿಸುವ ಶಕ್ತಿಯನ್ನು ಹೊಂದಿದೆ.ದೈಹಿಕ ಆರೋಗ್ಯ ಸುಧಾರಣೆ
ಪಾರ್ಕ್‌ನಲ್ಲಿ ನಡಿಗೆ, ಓಟ, ಅಥವಾ ಲಘು ವ್ಯಾಯಾಮ ಮಾಡಿದರೆ ರಕ್ತಸಂಚಾರ ಸುಧಾರಿಸುತ್ತದೆ, ಹೃದಯದ ಆರೋಗ್ಯ ಉತ್ತಮಗೊಳ್ಳುತ್ತದೆ ಮತ್ತು ದೇಹದ ತೂಕ ನಿಯಂತ್ರಣದಲ್ಲಿರುತ್ತದೆ. ತಾಜಾ ಗಾಳಿ ಮತ್ತು ಆಕ್ಸಿಜನ್ ಸೇವನೆಯಿಂದ ದೇಹಕ್ಕೆ ಶಕ್ತಿ ದೊರೆಯುತ್ತದೆ.ಮಾನಸಿಕ ಆರೋಗ್ಯದ ಲಾಭ
ಪ್ರಕೃತಿಯ ನಡುವೆ ಸಮಯ ಕಳೆಯುವುದರಿಂದ ಕಾರ್ಟಿಸಾಲ್ (ಒತ್ತಡದ ಹಾರ್ಮೋನ್) ಮಟ್ಟ ಕಡಿಮೆಯಾಗುತ್ತದೆ. ಹಸಿರು ವಾತಾವರಣ ಮತ್ತು ಪಕ್ಷಿಗಳ ಕಲರವ ಮನಸ್ಸಿಗೆ ಶಾಂತಿ ನೀಡುತ್ತದೆ. ಇದು ಧ್ಯಾನದಂತೆ ಕೆಲಸ ಮಾಡುತ್ತದೆ.ಸಾಮಾಜಿಕ ಸಂಪರ್ಕ:
ಪಾರ್ಕ್‌ನಲ್ಲಿ ಇತರರೊಂದಿಗೆ ಭೇಟಿಯಾಗುವ ಅವಕಾಶವಿದೆ. ಇದು ಸಾಮಾಜಿಕ ಬಾಂಧವ್ಯವನ್ನು ಬಲಪಡಿಸುತ್ತದೆ ಮತ್ತು ಒಂಟಿತನವನ್ನು ಕಡಿಮೆ ಮಾಡುತ್ತದೆ. ಪಾರ್ಕ್‌ಗಳು ಸಾಮಾಜಿಕ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತವೆ. ಅಲ್ಲಿ ವಿವಿಧ ವಯಸ್ಸಿನ ಮತ್ತು ಹಿನ್ನೆಲೆಯ ಜನರು ಒಟ್ಟಿಗೆ ಸೇರುತ್ತಾರೆ. ನಡಿಗೆ, ವ್ಯಾಯಾಮ, ಅಥವಾ ವಿಶ್ರಾಂತಿಯ ಸಮಯದಲ್ಲಿ ಅಪರಿಚಿತರೊಂದಿಗೆ ಸಂಭಾಷಣೆ ಆರಂಭಿ