ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಗರಿಷ್ಠ ವೈಯಕ್ತಿಕ ಮೊತ್ತ
ಪ್ರಿಯಾಂಶ್ ಆರ್ಯ ಗಳಿಸಿದ 181 ರನ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಇತಿಹಾಸದಲ್ಲೇ ದಾಖಲಾದ ಅತ್ಯಧಿಕ ವೈಯಕ್ತಿಕ ಸ್ಕೋರ್ ಆಗಿದೆ.
ಟೀಮ್ ಇಂಡಿಯಾ ಬ್ಯಾಟರ್ನ ಗರಿಷ್ಠ ಟಿ-20 ಸ್ಕೋರ್
ಹಿರಿಯ ಟಿ-20 ಕ್ರಿಕೆಟ್ನಲ್ಲಿ ಭಾರತೀಯ ಆಟಗಾರನೊಬ್ಬ ಗಳಿಸಿದ ಅತ್ಯಧಿಕ ವೈಯಕ್ತಿಕ ಮೊತ್ತ ಇದಾಗಿದೆ. 2026ರ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕೆ.ಎಲ್. ರಾಹುಲ್ ಗಳಿಸಿದ್ದ ಅಜೇಯ 152 ರನ್ಗಳ ದಾಖಲೆಯನ್ನು ಪ್ರಿಯಾಂಶ್ ಹಿಂದಿಕ್ಕಿದ್ದಾರೆ.ಪುರುಷರ ಟಿ-20 ಕ್ರಿಕೆಟ್ನಲ್ಲಿ ಎರಡನೇ ಗರಿಷ್ಠ ಸ್ಕೋರ್
ಪ್ರಿಯಾಂಶ್ ಆರ್ಯ ಅವರ 181 ರನ್ ಪುರುಷರ ಟಿ-20 ಇತಿಹಾಸದಲ್ಲಿ ಎರಡನೇ ಅತ್ಯಧಿಕ ವೈಯಕ್ತಿಕ ಮೊತ್ತವಾಗಿದೆ. ದಕ್ಷಿಣ ಆಫ್ರಿಕಾದ ಲುವಾನ್-ಡ್ರೆ ಪ್ರಿಟೋರಿಯಸ್ ಅವರು ಟೈಟಾನ್ಸ್ ಪರ ನೈಟ್ಸ್ ವಿರುದ್ಧ 79 ಎಸೆತಗಳಲ್ಲಿ ಗಳಿಸಿದ್ದ ಅಜೇಯ 188 ರನ್ ವಿಶ್ವದಾಖಲೆಯಾಗಿ ಉಳಿದಿದೆ.
ನಾಯಕನಾಗಿ ಗರಿಷ್ಠ ಟಿ-20 ಮೊತ್ತ
ಟಿ-20 ಪಂದ್ಯವೊಂದರಲ್ಲಿ ನಾಯಕನಾಗಿ ದಾಖಲಾದ ಅತ್ಯಧಿಕ ವೈಯಕ್ತಿಕ ಸ್ಕೋರ್ ಇದಾಗಿದೆ. 2018ರಲ್ಲಿ ಜಿಂಬಾಬ್ವೆ ವಿರುದ್ಧ ಆಸ್ಟ್ರೇಲಿಯಾದ ಆರೋನ್ ಫಿಂಚ್ ಗಳಿಸಿದ್ದ 172 ರನ್ಗಳ ದಾಖಲೆಯನ್ನು ಅವರು ಮುರಿದರು.ವೇಗದ ಶತಕ
ಪ್ರಿಯಾಂಶ್ ಕೇವಲ 36 ಎಸೆತಗಳಲ್ಲಿ ಶತಕ ಪೂರೈಸಿದ್ದು, ಇದು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಇತಿಹಾಸದಲ್ಲಿ ಜಂಟಿ ಆರನೇ ಅತಿ ವೇಗದ ಶತಕವಾಗಿದೆ.
ಒಂದೇ ಟಿ-20 ಇನ್ನಿಂಗ್ಸ್ನಲ್ಲಿ ಗರಿಷ್ಠ ಸಿಕ್ಸರ್ ವಿಶ್ವದಾಖಲೆಗೆ ಸರಿಸಮ
19 ಸಿಕ್ಸರ್ಗಳನ್ನು ಬಾರಿಸುವ ಮೂಲಕ ಟಿ-20 ಇನ್ನಿಂಗ್ಸ್ವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆಯನ್ನು ಪ್ರಿಯಾಂಶ್ ಸರಿಗಟ್ಟಿದರು. ಮೇಜರ್ ಲೀಗ್ ಕ್ರಿಕೆಟ್ನಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್ ಪರ ನ್ಯೂಜಿಲೆಂಡ್ನ ಫಿನ್ ಅಲೆನ್ 19 ಸಿಕ್ಸರ್ ಸಿಡಿಸಿದ್ದ ಸಾಧನೆಯೊಂದಿಗೆ ಅವರು ಸಮಬಲ ಸಾಧಿಸಿದರುಭಾರತದ ನೆಲದಲ್ಲಿ ಗರಿಷ್ಠ ಟಿ-20 ವೈಯಕ್ತಿಕ ಮೊತ್ತ
ಭಾರತದ ನೆಲದಲ್ಲಿ ಟಿ-20 ಪಂದ್ಯದಲ್ಲಿ ದಾಖಲಾದ ಅತ್ಯಧಿಕ ವೈಯಕ್ತಿಕ ಸ್ಕೋರ್ ಇದಾಗಿದೆ. 2013ರ ಐಪಿಎಲ್ನಲ್ಲಿ ಆರ್ಸಿಬಿ ಪರ ಕ್ರಿಸ್ ಗೇಲ್ ಗಳಿಸಿದ್ದ ಅಜೇಯ 175 ರನ್ಗಳ ದಾಖಲೆಯನ್ನು ಪ್ರಿಯಾಂಶ್ ಮೀರಿಸಿದ್ದಾರೆ.
ಭಾರತೀಯನಿಂದ ಗರಿಷ್ಠ ಸಿಕ್ಸರ್ ಹಾಗೂ ನಾಯಕನಾಗಿ ಹೆಚ್ಚು ಸಿಕ್ಸರ್
ಟಿ-20 ಇನ್ನಿಂಗ್ಸ್ವೊಂದರಲ್ಲಿ ಭಾರತೀಯ ಆಟಗಾರ ಬಾರಿಸಿದ ಅತಿ ಹೆಚ್ಚು ಸಿಕ್ಸರ್ಗಳ ದಾಖಲೆಯನ್ನು (ಪುನಿತ್ ಬಿಷ್ತ್ ಅವರ 17 ಸಿಕ್ಸರ್ಗಳ ದಾಖಲೆ) ಪ್ರಿಯಾಂಶ್ ಮುರಿದಿದ್ದು, ನಾಯಕನಾಗಿ ಟಿ-20 ಪಂದ್ಯವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆಯನ್ನೂ ತಮ್ಮದಾಗಿಸಿಕೊಂಡಿದ್ದಾರೆ.