Eggs vs Soya Chunks Protein 
ಆಹಾರ

ಮೊಟ್ಟೆ ವರ್ಸಸ್ ಸೋಯಾ ಚಂಕ್ಸ್: ಆರೋಗ್ಯಕ್ಕೆ ಯಾವುದು ಬೆಸ್ಟ್?..Eggs vs Soya Chunks

ಮಮತಾ

ಪ್ರಮುಖ ಮುಖ್ಯಾಂಶಗಳು

  • ಮೊಟ್ಟೆ ಮತ್ತು ಸೋಯಾ ಚಂಕ್ಸ್ ಯಾವುದರಲ್ಲಿ ಹೆಚ್ಚು ಪ್ರೋಟೀನ್ ಇರಲಿದೆ? .
  • ಒಣ ಸೋಯಾ ಚಂಕ್ಸ್‌ನಲ್ಲಿ 100ಗ್ರಾಂಗೆ ಸುಮಾರು 52 ಗ್ರಾಂ ಪ್ರೊಟೀನ್ ಇದ್ದರೆ, ಮೊಟ್ಟೆಯಲ್ಲಿ 13 ಗ್ರಾಂ ಪ್ರೊಟೀನ್ ಇರುತ್ತದೆ.
  • ಮೊಟ್ಟೆ ಮತ್ತು ಸೋಯಾದಿಂದ ಕಾಡುವ ಅನುಕೂಲಗಳು ಹಾಗೂ ಅನಾನುಕೂಲಗಳ ಬಗ್ಗೆ ಮಾಹಿತಿ.

Eggs vs Soya Chunks Protein: 

ಪ್ರೋಟೀನ್​ ನಮ್ಮ ದೇಹಕ್ಕೆ ಹೆಚ್ಚು ಬೇಕಾಗಿರುವ ಅಂಶ  ಇದು ಜೀವಕೋಶಗಳ ಜೋಡಣೆಗೆ ಹಾಗೂ ದೇಹದ ಅಂಗಾಂಶಗಳ  ಬೆಳವಣಿಗೆಗೆ ಅತ್ಯಗತ್ಯವಾಗಿದೆ. ಪ್ರೊಟೀನ್ ಪಡೆಯಲು ಮೊಟ್ಟೆ ಮತ್ತು ಸೋಯಾ ಚಂಕ್ಸ್ ಅತ್ಯಂತ ಜನಪ್ರಿಯ ಹಾಗೂ ಕೈಗೆಟುಕುವ ದರದಲ್ಲಿ ಸಿಗುವ ಆಹಾರವಾಗಿದೆ. ಇವೆರಡರಲ್ಲಿರುವ ಪ್ರೊಟೀನ್ ಅಂಶ ಮತ್ತು ವ್ಯತ್ಯಾಸಗಳ ಬಗ್ಗೆ ಮಾಹಿತಿ ಈಲೇಖನದಲ್ಲಿ ಇದೆ.

 ಸೋಯಾ ಚಂಕ್ಸ್​​​ನಲ್ಲಿರುವ ಪ್ರೋಟಿನ್ ಬಗ್ಗೆ

ಸೋಯಾ ಚಂಕ್ಸ್ ಕೊಬ್ಬು ರಹಿತ   ಸೋಯಾ ಹಿಟ್ಟಿನಿಂದ ತಯಾರಿಸಿದ ಸಂಸ್ಕರಿಸಿದ ಉತ್ಪನ್ನವಾಗಿದೆ. ಮೊಟ್ಟೆಗಳಿಗಿಂತ ಹೆಚ್ಚಿನ ಪ್ರೋಟೀನ್ ಅಂಶವನ್ನು ಸೋಯಾ ಹೊಂದಿರುತ್ತವೆ ಎನ್ನಲಾಗಿದೆ. ಸೋಯಾ ಚಂಕ್ಸ್ ಕೊಲೆಸ್ಟ್ರಾಲ್ ಕಡಿಮೆ ಮತ್ತು ಫೈಬರ್ ಅಧಿಕವಾಗಿರುವುದರಿಂದ ಆರೋಗ್ಯಕ್ಕೆ ಹೆಚ್ಚು ಲಾಭ ಸಿಗುತ್ತದೆ,

ಸೋಯಾ ಎಷ್ಟು ಪ್ರೋಟಿನ್ ನೀಡತ್ತೆ

100 ಗ್ರಾಂಗೆ,  52 ಗ್ರಾಂ ಪ್ರೊಟೀನ್ ಹೊಂದಿದ್ದರೆ, ಇಡೀ ಹಸಿ ಅಥವಾ ಬೇಯಿಸಿದ ಮೊಟ್ಟೆಯು 100 ಗ್ರಾಂಗೆ ಸುಮಾರು 13 ಗ್ರಾಂ ಪ್ರೊಟೀನ್ ಒದಗಿಸುತ್ತದೆ. ಸೋಯಾದಲ್ಲಿ ಪ್ರೋಟಿನ್ ಇರೋದು ನಿಜ ಆದರೆ 52 ಗ್ರಾಂ ಸೋಯಾ ತಿಂದರೆ ಮಾತ್ರ ಅದು ನಿಮ್ಮ ದೇಹಕ್ಕೆ ಪ್ರೋಟಿನ್​ ಒದಗಿಸುತ್ತದೆ.
ಇದನ್ನು ನೆನೆಸಿ, ನೀರಿನಲ್ಲಿ ಕುದಿಸಿ, ಹಿಂಡಿ ನೀರನ್ನು ತೆಗೆದು ಆಹಾರ ಮಾಡಿಕೊಳ್ಳಬಹುದು. 100 ಗ್ರಾಂ ಬೇಯಿಸಿದ ಸೋಯಾ ಚಂಕ್ಸ್ ತಿಂದಾಗ ನಮಗೆ ಸಿಗುವುದು ಕೇವಲ 13 ರಿಂದ 15 ಗ್ರಾಂ ಪ್ರೊಟೀನ್ ಮಾತ್ರ. ಅಲ್ಲದೆ, ಅತಿ ಹೆಚ್ಚು ಸೋಯಾ ಚಂಕ್ಸ್ ಸೇವನೆಯು ಹೊಟ್ಟೆ ಉಬ್ಬಸ ಅಥವಾ ಅಜೀರ್ಣಕ್ಕೆ ಕಾರಣವಾಗಬಹುದು.

ಮೊಟ್ಟೆ ಮತ್ತು ಸೋಯಾ ಚಂಕ್ಸ್​ನಿಂದ ಸಿಗುವ ಅನುಕೂಲ ಮತ್ತು ಅನಾನುಕೂಲ

ಮೊಟ್ಟೆಯಿಂದ ಸಿಗುವ ಲಾಭಗಳಿವು 
  • ದೇಹವು ಆಮಿನೋ ಆಮ್ಲಗಳು ಎನ್ನುವ ಅಂಶವನ್ನು ಹೀರಿಕೊಳ್ಳಲು ಸಸ್ಯಹಾರಿ ಪದಾರ್ಥಗಳಿಗಿಂತ ಮೊಟ್ಟೆಯು ಸಹಾಯ ಮಾಡುತ್ತದೆ. ಇದರಲ್ಲಿ ವಿಟಮಿನ್ ಬಿ12, ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಕೋಲಿನ್ ಇರುತ್ತವೆ.
ಮೊಟ್ಟೆಯಿಂದಾಗುವ ಅನಾನುಕೂಲ
  • ಮೊಟ್ಟೆಯ ಹಳದಿ ಭಾಗ, ಭಂಡಾರ ಎಂದು ಕರೆಸಿಕೊಳ್ಳುವ ಇದರಲ್ಲಿ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಇರುವುದರಿಂದ ಹೃದಯ ಕಾಯಿಲೆ ಇರುವವರಿಗೆ ಇದು ಸೂಕ್ತವಲ್ಲದಿರಬಹುದು.
ಸೋಯಾ ಚಂಕ್ಸ್​ನಿಂದ ಸಿಗುವ ಲಾಭವಿದು
  • ಇದು ಕೊಬ್ಬಿನಂಶವಿಲ್ಲದೆ ತೂಕ ಇಳಿಕೆಗೆ ಸಹಕಾರಿ. ವಿಶ್ವದಲ್ಲೇ ಅತ್ಯಂತ ಅಗ್ಗದ ಹಾಗೂ ಬಹುತೇಕ ಸಂಪೂರ್ಣ ಪ್ರೊಟೀನ್ ಮೂಲಗಳಲ್ಲಿ ಒಂದಾಗಿದೆ.
ಸೋಯಾ ಚಂಕ್ಸ್​ನಿಂದಾಗುವ ಅನಾನುಕೂಲತೆ ಏನು?
  • ಹಸಿ ಸೋಯಾದಲ್ಲಿ ಖನಿಜಗಳ ಹೀರಿಕೊಳ್ಳುವಿಕೆಯನ್ನು ತಡೆಯುವ ಆಂಟಿ-ನ್ಯೂಟ್ರಿಯೆಂಟ್‌ಗಳಿರುತ್ತವೆ. ಪ್ರತಿದಿನ ಅತಿಯಾಗಿ 50-100 ಗ್ರಾಂ ಗಿಂತ ಹೆಚ್ಚು ತಿಂದರೆ ಗ್ಯಾಸ್ ಅಥವಾ ಮಲಬದ್ಧತೆ ಉಂಟಾಗಬಹುದು. ಸಮತೋಲಿತ ಆಹಾರ ಶೈಲಿಯಲ್ಲಿ ವಿವಿಧ ಪ್ರೊಟೀನ್ ಮೂಲಗಳನ್ನು ಸರಿಯಾದ ಪ್ರಮಾಣದಲ್ಲಿ ಸೇರಿಸಿಕೊಳ್ಳುವುದರಿಂದ ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಪಡೆದುಕೊಳ್ಳಬಹುದು, (ಏಜೆನ್ಸೀಸ್).

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.