Budget friendly protein foods
- ಪ್ರೋಟೀನ್ ಪಡೆಯಲು ದುಬಾರಿ ಸಪ್ಲಿಮೆಂಟ್‌ಗಳು ಅಥವಾ ದುಬಾರಿ ಆರೋಗ್ಯಕರ ಆಹಾರಗಳ ಅಗತ್ಯವಿಲ್ಲ.
- ದೈನಂದಿನ ಅಡುಗೆಮನೆಯಲ್ಲಿ ಸಿಗುವ ಸಾಮಾನ್ಯ ವಸ್ತುಗಳ ಮೂಲಕವೇ ಪ್ರೋಟೀನ್ ಹೆಚ್ಚಿಸಬಹುದು.
- ಸಸ್ಯಾಹಾರಿಗಳು ಮತ್ತು ಮಾಂಸಾಹಾರಿಗಳಿಬ್ಬರಿಗೂ ಸೂಕ್ತವಾದ ಬಜೆಟ್ ಸ್ನೇಹಿ ಆಹಾರ ಪಟ್ಟಿ ಇಲ್ಲಿದೆ.
Budget friendly protein foods:
ದೇಹದ ಬೆಳವಣಿಗೆ, ಪೋಷಕಾಂಷ, ಸ್ನಾಯು ದುರಸ್ತಿ, ರೋಗನಿರೋಧಕ ಶಕ್ತಿ ಹಾಗೂ ಚರ್ಮ ಸೇರಿದಂತೆ ಕೂದಲಿನ ಆರೋಗ್ಯಕ್ಕೆ ಪ್ರೋಟೀನ್ ಹೆಚ್ಚು ಅತ್ಯಗತ್ಯ. ಆದರೆ, ಹೆಚ್ಚಿನವರು ಪ್ರೋಟೀನ್ ಅಂಶವುಳ್ ಆಹಾರ ಖರೀದಿ ಮಾಡಲು ಬಲು ದುಬಾರಿ ಎಂದು ತಿಳಿದು ಇದಕ್ಕಿಂತ ಹೆಚ್ಚು ಕಾಸ್ಟ್ಲಿಯಾಗಿರುವ ಸಪ್ಲಿಮೆಂಟ್‌ಗಳ ಮೇಲೆ ಹಣ ವ್ಯಯಿಸುತ್ತಾರೆ.
ಹೀಗಾಗಿ ಖ್ಯಾತ ಪೌಷ್ಟಿಕತಜ್ಞೆ ನಮಾಮಿ ಅಗರ್ವಾಲ್ ಕೆಲವು ತಪ್ಪು ಗ್ರಹಿಕೆಗಳ ವಿರುದ್ಧ ಮಾತನಾಡಿ, ತಮ್ಮ ಇನ್‌ಸ್ಟಾಗ್ರಾಮ್ ಮೂಲಕ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಜೇಬಿಗೆ ಕತ್ತರಿ ಬೀಳದಂತೆ ದೈನಂದಿನ ಪ್ರೋಟೀನ್ ಅಗತ್ಯತೆಯನ್ನು ಪೂರೈಸಿಕೊಳ್ಳಲು ಕೈಗೆಟುಕುವ ಬೆಲೆಯ 7 ಭಾರತೀಯ ಆಹಾರಗಳನ್ನು ಅವರು ಶಿಫಾರಸು ಮಾಡಿದ್ದಾರೆ.
ಯಾವುದೆಲ್ಲ ಪ್ರೋಟಿನ್ ಅಂಶವುಳ್ಳ ಆಹಾರ ಇದೆ?
ಕಡಳೆಕಾಳು ಪಲ್ಯದ ರೂಪದಲ್ಲಿ, ಸಲಾಡ್‌ಗಳಲ್ಲಿ ಅಥವಾ ಹುರಿದು ತಿಂಡಿಯಾಗಿ ಬಳಸಬಹುದಾದ ಕಡಳೆಕಾಳುಗಳು ಪ್ರೋಟೀನ್ ಮತ್ತು ನಾರಿನಾಂಶದಿಂದ ಕೂಡಿರುತ್ತವೆ. ಇದು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ.
ಸೋಯಾಬೀನ್
ಸಸ್ಯಹಾರಿಗಳಿಗೆ ಸೋಯಾಬೀನ್ ಅತ್ಯುತ್ತಮ ಪ್ರೋಟೀನ್ ಮೂಲವಾಗಿದೆ. ಸೋಯಾ ಚಂಕ್ಸ್, ನುಗ್ಗೆಟ್ಸ್ ಅಥವಾ ಕರಿ ರೂಪದಲ್ಲಿ ಸೋಯಾ ಆಹಾರವನ್ನು ಸೇವನೆ ಮಾಡಬಹುದಾಗಿದೆ.
ಮೊಟ್ಟೆ
ಪ್ರಾಣಿಜನ್ಯ ಪ್ರೋಟೀನ್ ಮೂಲಗಳಲ್ಲಿ ಮೊಟ್ಟೆ ಅತ್ಯಂತ ಅಗ್ಗ ಹಾಗೂ ಉತ್ತಮ ಗುಣಮಟ್ಟದ್ದಾಗಿದೆ. ಇದು ಯಾವುದೇ ಊಟದ ಜೊತೆಗೂ ಸುಲಭವಾಗಿ ಹೊಂದಿಕೊಳ್ಳುತ್ತದೆ. ಇದರಲ್ಲಿ ಪ್ರೋಟಿನ್ ಅಂಶ ಹೆಚ್ಚಿದೆ. ಮೊಟ್ಟೆ ಮಾತ್ರ ತಿನ್ನುವ ಸಸ್ಯಹಾರಿಗಳು ಈ ಆಹಾರ ಸೇವನೆ ಮಾಡಬಹುದು.
ರಾಜ್‌ಗಿರಾ / ಅಮಾರಂತ್
ಗ್ಲುಟೆನ್-ಮುಕ್ತ ಧಾನ್ಯವಾಗಿರುವ ಇದು ಪ್ರೋಟೀನ್ ಜೊತೆಗೆ ನಾರಿನಾಂಶ ಮತ್ತು ಖನಿಜಗಳನ್ನು ನೀಡುತ್ತದೆ. ರೊಟ್ಟಿ, ಪೋರಿಡ್ಜ್ ಅಥವಾ ಸ್ನ್ಯಾಕ್ಸ್ ತಯಾರಿಸಲು ಬಳಕೆಯಾಗುತ್ತದೆ. ಇದರಲ್ಲಿ ಪ್ರೋಟಿನ್, ಕ್ಯಾಲ್ಸಿಯಂ ನಾರಿನಂತ ಅಂಶ ಸಮೃದ್ಧವಾಗಿದೆ.
ಸತ್ತು
ಹುರಿದ ಕಡಳೆ ಅಥವಾ ಧಾನ್ಯಗಳನ್ನು ನುಣ್ಣಗೆ ಮಾಡಿದ ಪುಡಿಯನ್ನು ಸತ್ತು ಎನ್ನಲಾಗುತ್ತದೆ. ನೀರು, ಮಜ್ಜಿಗೆ ಅಥವಾ ಹಾಲಿನೊಂದಿಗೆ ಬೆರೆಸಿ ಕುಡಿಯಲು ಅತ್ಯಂತ ಶಕ್ತಿಶಾಲಿ ಹಾಗೂ ಪ್ರೋಟೀನ್ ಭರಿತ ಪಾನೀಯವಾಗಿದೆ. ಇದು ಜೀರ್ಣಕ್ರಿಯೆಗೂ ಸಹಕಾರಿ.
ಕೋಳಿ ಮಾಂಸ
ಮಾಂಸಾಹಾರಿಗಳಿಗೆ ಚಿಕನ್ ಅತ್ಯಂತ ಕಡಿಮೆ ವೆಚ್ಚದ ಪ್ರೋಟೀನ್ ಆಯ್ಕೆಯಾಗಿದ್ದು, ಆರೋಗ್ಯಕರ ವಿಧಾನಗಳಲ್ಲಿ ಇದನ್ನು ತಯಾರಿಸಿ ಸವಿಯಬಹುದು, (ಏಜೆನ್ಸೀಸ್).