ನುಗ್ಗೆಕಾಯಿ ಆರೋಗ್ಯ ಲಾಭಗಳ ಬಗ್ಗೆ ಇರುವ ನಂಬಿಕೆಗಳು
Health benefits of Drumstick: ಸಾಂಬಾರ್, ಬಸ್ಸಾರು, ಪಲ್ಯ ಹೀಗೆ ನಮ್ಮ ಅಡುಗೆಗಳಲ್ಲಿ ಸಾಮಾನ್ಯವಾಗಿ ಬಳಸುವ ನುಗ್ಗೆಕಾಯಿ ಹಲವು ಪೌಷ್ಟಿಕಾಂಶಗಳನ್ನು ಹೊಂದಿದೆ. ನುಗ್ಗೆ ಸೊಪ್ಪು ಮತ್ತು ಹೂವುಗಳನ್ನೂ ಆಹಾರದಲ್ಲಿ ಬಳಸಲಾಗುತ್ತೆ. ಆದರೆ ಇದರ ಬಗ್ಗೆ ಹಲವು ನಂಬಿಕೆಗಳೂ ಇವೆ.
ಇನ್ನು, ನುಗ್ಗೆ ತಿಂದರೆ ಹೀಟ್ ಆಗುತ್ತೆ, ಎಲ್ಲಾ ಕಾಯಿಲೆಗೂ ಮದ್ದು, ಸೆಕ್ಸ್ ಮೂಡ್ ಹೆಚ್ಚಿಸುತ್ತೆ ಎಂಬ ಮಾತುಗಳು ಕೇಳಿಬರುತ್ತವೆ. ಹಾಗಾದರೆ ಸತ್ಯ ಏನು? ನುಗ್ಗೆಕಾಯಿ ಮತ್ತು ಸೊಪ್ಪಿನಲ್ಲಿ ನಾರಿನಂಶ, ವಿಟಮಿನ್‌ಗಳು, ಖನಿಜಾಂಶಗಳು ಹಾಗೂ ಆಂಟಿಆಕ್ಸಿಡೆಂಟ್‌ಗಳು ಇವೆ. ಸಮತೋಲಿತ ಆಹಾರದ ಭಾಗವಾಗಿ ಸೇವಿಸಿದರೆ ಒಟ್ಟಾರೆ ಆರೋಗ್ಯಕ್ಕೆ ಪೌಷ್ಟಿಕ ಬೆಂಬಲ ನೀಡಬಹುದು.
ಮೂಳೆ ಮತ್ತು ಜೀರ್ಣಕ್ರಿಯೆಗೆ ಸಹಕಾರಿ
ನುಗ್ಗೆ ಸೊಪ್ಪು ಮತ್ತು ಕಾಯಿಯಲ್ಲಿ ಕ್ಯಾಲ್ಸಿಯಂ ಸೇರಿದಂತೆ ಹಲವು ಖನಿಜಾಂಶಗಳಿವೆ. ನಾರಿನಂಶ ಇರುವುದರಿಂದ ಜೀರ್ಣಕ್ರಿಯೆಗೂ ನೆರವಾಗಬಹುದು. ಆದರೆ ಯಾವುದೇ ಕಾಯಿಲೆಗೆ ನುಗ್ಗೆಕಾಯಿಯೇ ಚಿಕಿತ್ಸೆ ಎಂದು ಹೇಳಲು ಸಾಧ್ಯವಿಲ್ಲ.
ನುಗ್ಗೆಕಾಯಿಂದ ‘ಸೆಕ್ಸ್ ಮೂಡ್’ ಹೆಚ್ಚುತ್ತಾ?
ಇದು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಚರ್ಚೆಯಾಗುವ ವಿಷಯ. ನುಗ್ಗೆಕಾಯಿ ತಿಂದ ತಕ್ಷಣ ಲೈಂಗಿಕ ಆಸೆ ಹೆಚ್ಚುತ್ತದೆ ಎಂದು ಮನುಷ್ಯರಲ್ಲಿ ಖಚಿತವಾಗಿ ಸಾಬೀತಾಗಿಲ್ಲ. ನುಗ್ಗೆ ಸಸ್ಯದ ಲೈಂಗಿಕ ಆರೋಗ್ಯದ ಪರಿಣಾಮದ ಬಗ್ಗೆ ಕೆಲವು ಪ್ರಾಣಿ ಅಧ್ಯಯನಗಳು ನಡೆದಿವೆ. ಕೆಲವು ಅಧ್ಯಯನಗಳಲ್ಲಿ ಲೈಂಗಿಕ ವರ್ತನೆ ಹಾಗೂ ಸಂತಾನೋತ್ಪತ್ತಿಗೆ ಸಂಬಂಧಿಸಿದ ಕೆಲವು ಬದಲಾವಣೆಗಳು ಕಂಡುಬಂದಿವೆ. ಆದರೆ ಇವು ಪ್ರಾಣಿಗಳ ಮೇಲಿನ ಅಧ್ಯಯನಗಳಾಗಿರುವುದರಿಂದ, ಮನುಷ್ಯರಲ್ಲಿ ಇದೇ ಪರಿಣಾಮ ಉಂಟಾಗುತ್ತೆ ಎನ್ನುವುದಕ್ಕೆ ಹೆಚ್ಚು ಪುರಾವೆಗಳಿಲ್ಲ.
ನುಗ್ಗೆ ಸೊಪ್ಪು ಮತ್ತು ಕಾಯಿಯಲ್ಲಿ ಕ್ಯಾಲ್ಸಿಯಂ ಸೇರಿದಂತೆ ಹಲವು ಖನಿಜಾಂಶಗಳಿವೆ. ಆಹಾರದ ಭಾಗವಾಗಿ ನುಗ್ಗೆಕಾಯಿ ಅಥವಾ ಸೊಪ್ಪನ್ನು ತಿನ್ನುವುದು ಒಟ್ಟಾರೆ ಮೂಳೆಗಳ ಆರೋಗ್ಯಕ್ಕೆ ಪೌಷ್ಟಿಕ ಬೆಂಬಲ ನೀಡಬಹುದು. ಆದರೆ ಮೂಳೆ ನೋವು ಅಥವಾ ಸಂಧಿವಾತಕ್ಕೆ ನುಗ್ಗೆಕಾಯಿಯೇ ಚಿಕಿತ್ಸೆ ಎಂದು ಹೇಳಲು ಸಾಧ್ಯವಿಲ್ಲ.
ಜೀರ್ಣಕ್ರಿಯೆಗೆ ನಾರಿನಂಶ
ನುಗ್ಗೆಕಾಯಿಯಲ್ಲಿ ನಾರಿನಂಶ ಇರುವುದರಿಂದ, ಸಮತೋಲಿತ ಆಹಾರದ ಭಾಗವಾಗಿ ಸೇವಿಸಿದಾಗ ಜೀರ್ಣಕ್ರಿಯೆಗೆ ನೆರವಾಗಬಹುದು. ನಾರಿನಂಶವಿರುವ ತರಕಾರಿ, ಹಣ್ಣುಗಳ ಜೊತೆಗೆ ಸಾಕಷ್ಟು ನೀರು ಕುಡಿಯುವುದು ಮಲಬದ್ಧತೆ ನಿಯಂತ್ರಣಕ್ಕೂ ಸಹಕಾರಿ.
ಹೆಚ್ಚು ಆಂಟಿಆಕ್ಸಿಡೆಂಟ್‌ಗಳು
ನುಗ್ಗೆ ಸೊಪ್ಪು ಮತ್ತು ಕಾಯಿಯಲ್ಲಿ ವಿವಿಧ ಆಂಟಿಆಕ್ಸಿಡೆಂಟ್‌ಗಳು ಹಾಗೂ ಸಸ್ಯಜನ್ಯ ಸಂಯುಕ್ತಗಳಿವೆ. ಇವು ದೇಹದ ಕೋಶಗಳನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುವ ಪ್ರಕ್ರಿಯೆಯಲ್ಲಿ ಪಾತ್ರವಹಿಸುತ್ತವೆ.
ನುಗ್ಗೆಕಾಯಿ ಪೌಷ್ಟಿಕ ಆಹಾರದ ಒಂದು ಭಾಗ
ನುಗ್ಗೆಕಾಯಿ ಮ್ಯಾಜಿಕ್ ಮೆಡಿಸಿನ್ ಅಲ್ಲ. ಪೌಷ್ಟಿಕ ಆಹಾರದ ಒಂದು ಭಾಗ. ಜೀರ್ಣಕ್ರಿಯೆ ಸೇರಿದಂತೆ ಹಲವು ಕಾರಣಗಳಿಗೆ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಆದರೆ ‘ಎಲ್ಲಾ ಕಾಯಿಲೆಗೂ ಮದ್ದು’ ಅಥವಾ ‘ತಿಂದ ತಕ್ಷಣ ಸೆಕ್ಸ್ ಮೂಡ್ ಹೆಚ್ಚಿಸುತ್ತೆ’ ಎಂಬ ವೈರಲ್ ಮಾತುಗಳನ್ನು ವೈಜ್ಞಾನಿಕ ಸತ್ಯ ಎಂದು ನಂಬುವುದು ಬೇಡ,(ಏಜೆನ್ಸೀಸ್).