Badam Burfi ಸಾಂದರ್ಭಿಕ ಚಿತ್ರ
Badam Burfi: ಶ್ರಾವಣ ಮಾಸವೆಂದರೆ ಹಬ್ಬ-ಹರಿದಿನಗಳ ಸಡಗರ, ಪೂಜೆ-ಪುನಸ್ಕಾರಗಳ ವೈಭವ. ಈ ಪವಿತ್ರವಾದ ತಿಂಗಳಲ್ಲಿ ದೇವರ ನೈವೇದ್ಯಕ್ಕೂ ಹಾಗೂ ಮನೆಗೆ ಬರುವ ನೆಂಟರಿಗೂ ಬಾಯಲ್ಲಿ ನೀರೂರಿಸುವ ಸಿಹಿ ತಿಂಡಿಗಳನ್ನು ಮಾಡುವುದು ನಮ್ಮ ಸಂಪ್ರದಾಯ. ಈ ಹಬ್ಬದ ವಾತಾವರಣಕ್ಕೆ ಇನ್ನಷ್ಟು ಸಿಹಿ ನೀಡಲು, ಅತೀ ಕಡಿಮೆ ಸಮಯದಲ್ಲಿ ಮೃದುವಾದ ಮತ್ತು ನಾಲಿಗೆಗೆ ರುಚಿ ನೀಡುವ 'ಬಾದಾಮಿ ಬರ್ಫಿ' (Badam Burfi) ಸೂಕ್ತವಾದ ಆಯ್ಕೆ.
ಹಾಲಿನ ಸವಿಯೊಂದಿಗೆ ಬಾದಾಮಿಯ ಪೋಷಕಾಂಶ ತುಂಬಿರುವ ಈ ಸ್ವೀಟ್ ಮಾಡುವುದು ಅತ್ಯಂತ ಸರಳ. ಅಂಗಡಿಯಲ್ಲಿ ಸಿಗುವಷ್ಟೇ ಮೃದುವಾಗಿ, ರುಚಿಯಾಗಿ ಮನೆಯಲ್ಲಿಯೇ ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದಾದ ಈ ಬಾದಾಮಿ ಬರ್ಫಿಯ ಸರಳ ಪಾಕವಿಧಾನ ನಿಮಗಾಗಿ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು
ಮಾಡುವ ವಿಧಾನ
ಬಾದಾಮಿಯನ್ನು ಬಿಸಿ ನೀರಿನಲ್ಲಿ 30 ನಿಮಿಷ ನೆನೆಸಿ, ಸಿಪ್ಪೆ ಸುಲಿದು ಒಣ ಬಟ್ಟೆಯಿಂದ ಒರೆಸಿಕೊಳ್ಳಿ. ನಂತರ ಸಿಪ್ಪೆ ತೆಗೆದ ಬಾದಾಮಿಗೆ 1/2 ಕಪ್ ಹಾಲು ಸೇರಿಸಿ ತರಿತರಿಯಾಗಿ ರುಬ್ಬಿಕೊಳ್ಳಿ. ನಂತರ ದಪ್ಪ ತಳದ ಬಾಣಲೆಯಲ್ಲಿ ಸಕ್ಕರೆ ಮತ್ತು 1/4 ಕಪ್ ನೀರು ಹಾಕಿ, ಸಕ್ಕರೆ ಕರಗುವವರೆಗೆ ಬಿಸಿ ಮಾಡಿ.
ಸಕ್ಕರೆ ಕರಗಿದ ತಕ್ಷಣ ರುಬ್ಬಿದ ಬಾದಾಮಿ ಪೇಸ್ಟ್ ಸೇರಿಸಿ, ಸಣ್ಣ ಉರಿಯಲ್ಲಿ ನಿರಂತರವಾಗಿ ಕೈಯಾಡಿಸುತ್ತಿರಿ. ನಂತರ ಮಿಶ್ರಣ ಗಟ್ಟಿಯಾಗಲು ಪ್ರಾರಂಭಿಸಿದಾಗ ಮಧ್ಯೆ ಮಧ್ಯೆ 1-2 ಚಮಚ ತುಪ್ಪ ಮತ್ತು ಕೇಸರಿ ಹಾಲು ಸೇರಿಸಿ ತಿರುಗಿಸುತ್ತಿರಿ.
ಮಿಶ್ರಣವು ಬಾಣಲೆಯ ತಳ ಬಿಟ್ಟು ಒಂದೆಡೆ ಉಂಡೆಯಂತೆ ಬರಲು ಪ್ರಾರಂಭಿಸಿದಾಗ ಏಲಕ್ಕಿ ಪುಡಿ ಸೇರಿಸಿ, ಗ್ಯಾಸ್ ಆಫ್ ಮಾಡಿ. ತುಪ್ಪ ಸವರಿದ ಪ್ಲೇಟ್‌ಗೆ ಈ ಮಿಶ್ರಣವನ್ನು ಹಾಕಿ, ಸಮನಾಗಿ ಹರಡಿ. ಮೇಲ್ಭಾಗದಲ್ಲಿ ಚೌಕಾಕಾರ ಅಥವಾ ವಜ್ರಾಕಾರದಲ್ಲಿ ಕತ್ತರಿಸಿ. 20-30 ನಿಮಿಷಗಳ ಕಾಲ ತಣ್ಣಗಾಗಲು ಬಿಟ್ಟರೆ ರುಚಿಕರವಾದ ಬಾದಾಮಿ ಬರ್ಫಿ ಸಿದ್ಧ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.