ಸಮಸ್ಯೆ ಇದ್ದವರು ಡ್ರ್ಯಾಗನ್ ಫ್ರೂಟ್ ತಿನ್ನುವ ಮುನ್ನ ಎಚ್ಚರ
- ಆರೋಗ್ಯ ಸಮಸ್ಯೆ ಇದ್ದವರು ಡ್ರ್ಯಾಗನ್ ಫ್ರೂಟ್ ತಿನ್ನುವ ಮುನ್ನ ಎಚ್ಚರ
- ಡ್ರ್ಯಾಗನ್ ಹಣ್ಣಿನಲ್ಲಿವೆ ಫೈಬರ್, ವಿಟಮಿನ್-ಆ್ಯಂಟಿಆಕ್ಸಿಡೆಂಟ್‌ಗಳು
- ಆರೋಗ್ಯವಂತರು ಮಿತವಾಗಿ ಸೇವಿಸಿದರೆ ದೇಹಕ್ಕೆ ಒಳ್ಳೆಯದು
Dragon Fruit: ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವವರ ಫುಡ್ ಲಿಸ್ಟ್‌ನಲ್ಲಿ ಡ್ರ್ಯಾಗನ್ ಫ್ರೂಟ್‌ಗೂ ಜಾಗ ಸಿಕ್ಕಿದೆ. ನೋಡಲು ಆಕರ್ಷಕವಾಗಿರುವ ಈ ಹಣ್ಣಿನಲ್ಲಿ ಫೈಬರ್, ವಿಟಮಿನ್‌ಗಳು ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ಹೇರಳವಾಗಿದೆ. ಆದರೆ ಆರೋಗ್ಯಕರ ಹಣ್ಣು ಅಂದ ಮಾತ್ರಕ್ಕೆ ಎಲ್ಲರೂ ಎಷ್ಟು ಬೇಕಾದರೂ ತಿನ್ನಬಹುದು ಅಂತಲ್ಲ.
ವೈದ್ಯರ ಪ್ರಕಾರ, ಕೆಲವು ಆರೋಗ್ಯ ಸಮಸ್ಯೆ ಇರುವವರು ಡ್ರ್ಯಾಗನ್ ಫ್ರೂಟ್ ಸೇವಿಸುವಾಗ ಎಚ್ಚರ ವಹಿಸಬೇಕು. ಅದರಲ್ಲೂ ದೊಡ್ಡ ಪ್ರಮಾಣದಲ್ಲಿ ಸೇವಿಸಿದರೆ ಕೆಲವರಿಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಡ್ರ್ಯಾಗನ್ ಫ್ರೂಟ್‌ನಲ್ಲಿ ಉತ್ತಮ ಪ್ರಮಾಣದ ಫೈಬರ್, ವಿಟಮಿನ್‌ಗಳು ಮತ್ತು ಆ್ಯಂಟಿಆಕ್ಸಿಡೆಂಟ್‌ಗಳಿವೆ. ಹೀಗಾಗಿ ಆರೋಗ್ಯಕರ ಡಯೆಟ್ ಫಾಲೋ ಮಾಡುವವರು ಇದನ್ನು ಬ್ರೇಕ್‌ಫಾಸ್ಟ್, ಸಲಾಡ್ ಅಥವಾ ಸ್ನ್ಯಾಕ್ ಆಗಿ ಸೇವಿಸುವುದು ಸಾಮಾನ್ಯ.
ಈ ಆರೋಗ್ಯ ಸಮಸ್ಯೆ ಇದ್ದವರು ಹುಷಾರು
ಯಾಬಿಟಿಸ್
ಡಯಾಬಿಟಿಸ್ ಇರುವವರು ಯಾವುದೇ ಹಣ್ಣನ್ನು ಸಂಪೂರ್ಣವಾಗಿ 'ಹೆಲ್ತಿ' ಅಂತ ಭಾವಿಸಿ ಹೆಚ್ಚಿನ ಪ್ರಮಾಣದಲ್ಲಿ ತಿನ್ನಬಾರದು. ಡ್ರ್ಯಾಗನ್ ಫ್ರೂಟ್‌ನ್ನು ಆಹಾರದಲ್ಲಿ ಸೇರಿಸುವಾಗ ಪ್ರಮಾಣದ ಬಗ್ಗೆ ಎಚ್ಚರಿಕೆ ಅಗತ್ಯ. ಡಯಾಬಿಟಿಸ್ ಔಷಧಿ ತೆಗೆದುಕೊಳ್ಳುತ್ತಿದ್ದರೆ ವೈದ್ಯರ ಸಲಹೆ ಮುಖ್ಯ.
ಕಡಿಮೆ ರಕ್ತದೊತ್ತಡ
ಬಿಪಿ ಈಗಾಗಲೇ ಕಡಿಮೆ ಇರುವವರು ಡ್ರ್ಯಾಗನ್ ಫ್ರೂಟ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವ ಮೊದಲು ಎಚ್ಚರಿಕೆ ವಹಿಸಬೇಕು. ಬಿಪಿ ಕಡಿಮೆ ಮಾಡುವ ಔಷಧಿ ತೆಗೆದುಕೊಳ್ಳುತ್ತಿದ್ದರೆ ವಿಶೇಷವಾಗಿ ವೈದ್ಯರ ಸಲಹೆ ಪಡೆಯುವುದು ಒಳಿತು.
ಜೀರ್ಣಕ್ರಿಯೆ ಸಮಸ್ಯೆ ಇರುವವರು
ಡ್ರ್ಯಾಗನ್ ಫ್ರೂಟ್‌ನಲ್ಲಿ ಫೈಬರ್ ಅಂಶ ಹೆಚ್ಚಿರುವುದರಿಂದ ಜೀರ್ಣಕ್ರಿಯೆಗೆ ಸಹಾಯವಾಗಬಹುದು. ಒಂದೇ ಬಾರಿಗೆ ಹೆಚ್ಚು ತಿಂದರೆ ಕೆಲವರಿಗೆ ಹೊಟ್ಟೆ ಉಬ್ಬರ, ಗ್ಯಾಸ್ ಅಥವಾ ಸಡಿಲ ಮಲದಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಹೀಗಾಗಿ ಸೆನ್ಸಿಟಿವ್ ಇರುವವರು ಕಡಿಮೆ ಪ್ರಮಾಣದಲ್ಲಿ ತಿನ್ನುವುದು ಉತ್ತಮ.
ಹಣ್ಣಿನ ಅಲರ್ಜಿ ಇರುವವರು
ಕೆಲವರಿಗೆ ಡ್ರ್ಯಾಗನ್ ಫ್ರೂಟ್‌ನಿಂದಲೂ ಅಲರ್ಜಿಕ್ ಉಂಟಾಗುವ ಸಾಧ್ಯತೆ ಇದೆ. ತುರಿಕೆ, ಬಾಯಿ ಅಥವಾ ತುಟಿಗಳಲ್ಲಿ ಊತ, ಚರ್ಮದ ಮೇಲೆ ರ‍್ಯಾಶ್ ಅಥವಾ ಉಸಿರಾಟದ ತೊಂದರೆಯಂತಹ ಲಕ್ಷಣ ಕಂಡುಬಂದರೆ ತಿನ್ನುವುದನ್ನು ನಿಲ್ಲಿಸಿ
ಡ್ರ್ಯಾಗನ್ ಫ್ರೂಟ್ ಯಾರು ತಿನ್ನಬಹುದು?
ಹಾಗೇನಿಲ್ಲ. ಹೆಚ್ಚಿನ ಆರೋಗ್ಯವಂತರು ಮಿತ ಪ್ರಮಾಣದಲ್ಲಿ ಡ್ರ್ಯಾಗನ್ ಹಣ್ಣು ಸೇವಿಸಬಹುದು. ಆದರೆ ನಿಮಗೆ ಈಗಾಗಲೇ ಯಾವುದೇ ಆರೋಗ್ಯ ಸಮಸ್ಯೆ ಇದ್ದರೆ ಅಥವಾ ನಿಯಮಿತವಾಗಿ ಔಷಧಿ ತೆಗೆದುಕೊಳ್ಳುತ್ತಿದ್ದರೆ, ಈ ಹಣ್ಣು ತಿನ್ನುವ ಮೊದಲು ವೈದ್ಯರು ಅಥವಾ ಡಯೆಟಿಷಿಯನ್ ಸಲಹೆ ಪಡೆಯುವುದು ಒಳ್ಳೆಯದು.
ಒಟ್ಟಿನಲ್ಲಿ, ಯಾವುದೇ ಹಣ್ಣು ಆರೋಗ್ಯಕ್ಕೆ ಒಳ್ಳೆಯದೇ ಆಗಿದ್ದರೂ ಅದನ್ನು ಹೆಚ್ಚು ತಿಂದಷ್ಟೂ ಹೆಚ್ಚು ಪ್ರಯೋಜನ ಸಿಗುತ್ತದೆ ಎಂದೇನಿಲ್ಲ. ಹೀಗಾಗಿ ದೇಹಕ್ಕೆ ಹೊಂದುವ ಪ್ರಮಾಣದಲ್ಲಿ, ಮಿತವಾಗಿ ಸೇವಿಸುವುದೇ ಆರೋಗ್ಯಕ್ಕೆ ಉತ್ತಮ,(ಏಜೆನ್ಸೀಸ್).