Do You Know How To Make Badusha Very Easily At Home
- ಹಬ್ಬಕ್ಕೆ ಅಥವಾ ಶುಭ ಸಮಾರಂಭಕ್ಕೆ
How To Make Badusha Very Easily At Home:
ಗಣೇಶ ಚತುರ್ಥಿ ಮತ್ತು ಕೃಷ್ಣ ಜನ್ಮಾಷ್ಮಿ ಹಬ್ಬಕ್ಕೆ ಇನ್ನೂ ಕೆಲವೇ ದಿನಗಳು ಬಾಕಿ ಇವೆ. ಹೀಗಾಗಿ ಮನೆಯಲ್ಲಿ ಸಾಮಾನ್ಯವಾಗಿ ಕರ್ಜಿಕಾಯಿ, ರವೆ ಉಂಡೆ ತಯಾರಿ ಮಾಡೋದು ಸಾಮಾನ್ಯ. ಆದರೆ, ಈ ಬಾರಿ ಬಾದೂಷಾ ತಯಾರಿ ಮಾಡಲು ಟ್ರೈ ಮಾಡಿ. ಯಾವುದಾದರೂ ಮನೆಯ ಸಮಾರಂಭಕ್ಕೆ ಬಾದೂಷಾ ತಯಾರಿಸಲು ಪ್ರಯತ್ನಿಸಿ. ಈ ಸಿಹಿಗೆ ಯಾವೆಲ್ಲ ಸಾಮಾಗ್ರಿಯ ಅಗತ್ಯ ಇದೆ. ತಯಾರಿಸೋದು ಹೇಗೆ ಎನ್ನುವ ಬಗ್ಗೆ ಡಿಟೇಲ್ಸ್ ಈ ಲೇಖನದಲ್ಲಿ ಇದೆ.
ಬೇಕರಿಯಲ್ಲಿ ಸಿಗುವ ಬಾದುಷಾವನ್ನು ನೆಚ್ಚಿಕೊಳ್ಳದೇ ಇರುವವರು ಇಲ್ಲ. ಆದರೆ, ಅಲ್ಲಿ ಸ್ವಚ್ಛತೆಯಿಂದ ಕೂಡಿರುತ್ತದೆಯೋ ಇಲ್ಲವೋ ಎನ್ನುವ ಭಯ ಸಹ ಇರುತ್ತದೆ. ಜೊತೆಗೆ, ಅಷ್ಟೆಲ್ಲ ರಿಸ್ಕ್ ತೆಗೆದುಕೊಂಡು ಯಾರು ಸಿಹಿ ತಯಾರಿ ಮಾಡುತ್ತಾರೆ ಎನ್ನುವ ಆಲಸ್ಯವೂ ಇರುತ್ತದೆ. ಆದರೆ ಕೆಲವೊಂದು ಟ್ರಿಕ್ಸ್ ಬಳಕೆ ಮಾಡಿದ್ರೆ ಸಾಕು ನೀವು ಮನೆಯಲ್ಲಿಯೇ ಸುಲಭವಾಗಿ ಬಾದೂಷವನ್ನು ತಯಾರಿ ಮಾಡಬಹುದಾಗಿದೆ.
ಬಾದುಷಾ ತಯಾರಿಸಲು ಬೇಕಾದ ಸಾಮಗ್ರಿಗಳಿವು
- ಮೈದಾ ಹಿಟ್ಟು ಎರಡು ಕಪ್
- ತುಪ್ಪ ಅರ್ಧ ಕಪ್
- ಮೊಸರು 2 ದೊಡ್ಡ ಚಮಚ
- ಅಡುಗೆ ಸೋಡಾ 1/4 ಚಮಚ
- ಸಕ್ಕರೆ 2 ಕಪ್
- ನೀರು ಬೇಕಾಗುವಷ್ಟು
- ಚಿಟಿಕೆ ಏಲಕ್ಕಿ ಪುಡಿ
- 1 ಚಮಚ ನಿಂಬೆ ರಸ
- ಬಾದುಷಾ ಕರೆಯಲು ಎಣ್ಣೆ ಅಥವಾ ತುಪ್ಪ
ಬಾದುಷ ಹಿಟ್ಟು ತಯಾರಿಸುವ ವಿಧಾನ
ಒಂದು ಪಾತ್ರೆಯಲ್ಲಿ 1/4 ಕಪ್ ನೀರು, ತುಪ್ಪ, ಮೊಸರು ಹಾಗೂ ಅಡುಗೆ ಸೋಡ ಹಾಕಿ ಚೆನ್ನಾಗಿ ಕಲಿಸಿಟ್ಟು ಕೊಂಚ ಹೊತ್ತು ಬಿಡಿ. ಈಗ ಮೈದಾ ಹಿಟ್ಟನ್ನು ಸೇರಿಸಿ ಹಗುರವಾಗಿ ಕೈಯಾಡಿಸಿ, ಹಿಟ್ಟನ್ನುಯ ಜೋರಾಗಿ ನಾದಬೇಡಿ. ಸ್ವಲ್ಪ ನೀರು ಚಿಮುಕಿಸಿ ಹಿಟ್ಟನ್ನು ಒಟ್ಟಿಗೆ ಸೇರಿಸಿ ಜಾಮೂನ್ ಹಿಟ್ಟು ತಯಾರಿಸುವಂತೆ ಮೃದುವಾದ ಉಂಡೆ ಮಾಡಿ 15 ನಿಮಿಷ ಬಿಡಿ.
ಸಕ್ಕರೆ ಪಾಕ ತಯಾರಿಸಿ
- ಒಂದು ಪಾತ್ರೆಯಲ್ಲಿ 2 ಕಪ್ ಸಕ್ಕರೆ ಮತ್ತು 1/2 ಕಪ್ ನೀರು ಹಾಕಿ ಬಿಸಿ ಮಾಡಿಟ್ಟುಕೊಳ್ಳಿ.
- ನೀರಿನ ಜೊತೆಗೆ ಸಕ್ಕರೆ ಕರಗಿ ಕರಗಿ ಒಂದು ಪಾಕವಾಗುವ ವರೆಗೂ ಕುದಿಸಿ.
- ಪಾಕ ಸಿದ್ಧವಾದ ಬಳಿಕ ಏಲಕ್ಕೆ ಪುಡಿ ಮತ್ತು ಲಿಂಬೆ ರಸ ಸೇರಿಸಿ.
ಈಗ ಬಾದೂಷ ಆಕಾರ ಮಾಡಿಟ್ಟುಕೊಳ್ಳಿ
ಈಗ ನಿಂಬೆ ಹಣ್ಣಿನ ಗಾತ್ರದ ಹಿಟ್ಟು ತೆಗೆದುಕೊಂಡು ಹದವಾಗಿ ಒತ್ತಿ, ನಂತರ ಮಧ್ಯೆ ನಿಮ್ಮ ಬೆರಳನ್ನು ಬಲವಾಗಿ ಒತ್ತಿ. ಆದರೆ, ಅಲ್ಲಿ ತೂತಾಗುವ ಅಗತ್ಯ ಇಲ್ಲ. ಅಲ್ಲಿ ನಿಮಗೆ ಬೇಕಾಗುವ ಶೇಪ್ ಅನ್ನು ಕೊಟ್ಟುಕೊಳ್ಳಬಹುದಾಗಿದೆ.
ಬಾದುಷಾ ಎಣ್ಣೆಯಲ್ಲಿ ಕರಿದು ಪಾಕಕ್ಕೆ ಹಾಕುವುದು ಹೀಗೆ
ಬಾದುಷಾಗಳನ್ನು ಈಗ ಎಣ್ಣೆಗೆ ಬಿಡಿ..ಕಾದ ಎಣ್ಣೆಯಿಂದ ಕೊಂಚ ಕಂದು ಬಣ್ಣಕ್ಕೆ ತಿರುಗಿದ ಬಾದುಷಾ ಮೇಲಕ್ಕೆ ಬರುವವರೆಗೂ ಕಾಯಿರಿ. ಮಧ್ಯೆ ಮಧ್ಯೆ ಸೌಟನ್ನು ಬಾಂಡ್ಲಿಗೆ ಹಾಕಬೇಡಿ. ಗಮನಿಸಿ ಬಾದುಷಾ ಕರೆದ ತಕ್ಷಣ ಪಾಕಕ್ಕೆ ಹಾಕುವ ಮುನ್ನ ಚೆನ್ನಾಗಿ ಎಣ್ಣೆ ಹೋಗುವಂತೆ ಮಾಡಿ ಪಾಕಕ್ಕೆ ಬಿಡಿ. ಈಗ ನಿಮ್ಮ ಬಾದೂಷ ತಿನ್ನಲು ರೆಡಿ, (ಏಜೆನ್ಸೀಸ್).