How To Check Adulterated Paneer At Home 
ಆಹಾರ

ನೀವು ತಿನ್ನುವ ಪನೀರ್​​​ ನಕಲಿಯೋ, ಅಸಲಿಯೋ?; ಈ ಸುಲಭ ಟ್ರಿಕ್ಸ್​ ಮೂಲಕ ಮನೆಯಲ್ಲೇ ಚೆಕ್​ ಮಾಡಿ..Paneer

ಪ್ರಮುಖ ಮುಖ್ಯಾಂಶಗಳು

  • ಹೈದರಾಬಾದ್​ನಲ್ಲಿ ನಕಲಿ ಪನೀರ್​ ತಯಾರಿ ಮಾಡುತ್ತಿರುವ ಜಾಲ ಪತ್ತೆ.
  • ಮನೆಯಲ್ಲಿಯೇ ನೀವು ತಿನ್ನುತ್ತಿರುವುದು ನಕಲಿ ಪನೀರ್​ ಅಥವಾ ಅಸಲಿಯೋ ಎನ್ನುವುದನ್ನು ಪತ್ತೆ ಮಾಡಿ.
  • ನಕಲಿ ಪನೀರ್ ಪುಡಿಯಾಗಲ್ಲ, ಮುಟ್ಟಿ, ಎಳೆದರೆ ರಬ್ಬರ್​ನಂತೆ ಭಾಸವಾಗೋದಿಲ್ಲ.

How To Check Adulterated Paneer At Home: 

ಕಡಾಯಿ ಪನ್ನೀರ್, ಪನೀರ್ ಬಟರ್ ಮಸಾಲ, ಪನೀರ್ ಸಲಾಡ್, ಪಾಲಾಕ್ ಪನೀರ್,  ಪನೀರ್  ಭುರ್ಜಿ ಪನೀರ್​ ಸಲಾಡ್ ಹೀಗೆ ನಾನಾ ಹೆಸರಲ್ಲಿ  ತರಹೇವಾರಿ ಖಾದ್ಯವನ್ನು  ತಯಾರಿ ಮಾಡಿ ತಿನ್ನುವ ಈ ಪನೀರ್ ಬಲು ರುಚಿ. ಆದರೆ,​​  ಇದನ್ನು ಹೊಟ್ಟೆಗೆ ಇಳಿಸುವ 

 ಮುನ್ನ, ಅಡುಗೆ ಮಾಡುವ ಮುನ್ನ ಇದು ಕಲಬೆರಕೆಯೋ ಅಥವಾ ಅಸಲಿಯೋ ಎನ್ನುವುದನ್ನು ಮೆನಯಲ್ಲಿಯೇ ಪತ್ತೆ ಹಚ್ಚಿ ತಿನ್ನಿ. 

ಹೌದು, ಇತ್ತೀಚೆಗೆ,

ಹೈದರಾಬಾದ್​​​ ಪೊಲೀಸರು 

ನಕಲಿ ಪನೀರ್​ ಮಾರಾಟ ಜಾಲವನ್ನು ಪತ್ತೆ ಹಚ್ಚಿದ್ದಾರೆ. ಇದರಿಂದ ಎಚ್ಚೆತ್ತ ದೇಶದ ಹಲವು ಭಾಗದಲ್ಲಿ ಆಹಾರ ಸುರಕ್ಷತಾ ಇಲಾಖೆ ಎಚ್ಚೆತ್ತುಕೊಂಡಿದೆ. ಮಹಾರಾಷ್ಟರದಲ್ಲಿಯೂ ನಕಲಿ ಪನೀರ್​ ಮಾರಾಟ ಮತ್ತು ತಯಾರಿಸುವುದನ್ನು ಸಂಪೂರ್ಣ ನಿಷೇಧಿಸಿದೆ. ನೀವು ಇರುವ ಏರಿಯಾದಲ್ಲಿಯೂ ಇಂತಹ ತನಿಖೆ ಕೈಗೊಳ್ಳುವ ಮುನ್ನ, ನೀವೆ ಮನೆಯಲ್ಲಿ ನೀವು ಯಾವ ಪನೀರ್

 ತಿನ್ನುತ್ತೀದ್ದೀರಾ ಎನ್ನುವುದನ್ನು ಪರೀಕ್ಷಿಸಿಕೊಳ್ಳಿ. 

ಯಾವುದು ಶುದ್ಧ ಪನ್ನೀರ್?

ಹಾಲು ಹೆಪ್ಪುಗಟ್ಟಿದ್ದಾಗ ಅಥವಾ ಹುಳಿ ಬಿದ್ದು ಅದು ಒಡೆದುಕೊಂಡಾಗ ವಾಸನೆ ಹೇಗಿರುತ್ತದೆ ಎನ್ನುವುದು ನಿಮಗೆ ಗೊತ್ತೆ ಇದೆ. ಮೃದುವಾಗಿ ಹಾಲಿನ ವಾಸನೆ ಬರುತ್ತಿದ್ದರೆ, ಮುಟ್ಟಿದರೆ ಸ್ಪಾಂಜ್​ನಂತೆ ಕಂಡು ಬಂದರೆ ಇದು ಹಾಲಿನಿಂದ ತಯಾರಾದ ಪನೀರ್​ ಎಂದು ಅರ್ಥ.  ನಕಲಿ ಪನೀರ್​ ರಬ್ಬರ್​ನಂತೆ ಗಟ್ಟಿಯಾಗಿರುತ್ತದೆ. 

FSSAI  ಲೇಬಲ್​​ ಇದ್ಯಾ ನೋಡಿಕೊಳ್ಳಿ

ನೀವು ಡೈರಿಗಳಲ್ಲಿಪನೀರ್​ ಖರೀದಿ ಮಾಡಿಲ್ಲ ಸಾಮಾಗ್ರಿ ಅಂಗಡಿಯಲ್ಲಿ ಪನೀರ್​ ಖರೀದಿ ಮಾಡಿದ್ದರೆ, ಮೊದಲು ಅದರ ಮೇಲೆ FSSAI ಲೇಬಲ್​ ಇದ್ಯಾ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರದ ನಿಯಮದ ಪ್ರಕಾರ ಪನೀರ್​ ಹಾಲಿನ ಬದಲಿಗೆ ಬೇರೆ ಸಾಮಗ್ರಿ ಬಳಕೆ ಮಾಡಿದರೆ, ಪ್ಯಾಕೇಟ್​ ಮೇಲೆ ಅನ್​ಲಾಗ್​ ಎಂದು ಬರೆದಿರಲಾಗುತ್ತದೆ. 
ಲೇಬಲ್​ ಮೇಲೆ ಯಾವ ಪದಾರ್ಥ ಬಳಕೆ ಮಾಡಲಾಗಿದೆ ಎಂದು ಗಮನಿಸಿ. ಇದರಲ್ಲಿ ಸಸ್ಯಜನ್ಯ ಕೊಬ್ಬ, ಪಾಮ್​ ಆಯಿಲ್​ ಮೈದಾ ಅಂಶ ಇದೆಯೇ ನೋಡಿ. FSSAI ಲೋಗೋ ಮತ್ತು 14 ಅಂಕಿ ಇದೆಯಾ ನೋಡಿ. 

ಶುದ್ಧತೆ ಪರಿಶೀಲಿಸೋದು ಹೇಗೆ

ಸ್ವಲ್ಪ ಪನೀರ್​ ತುಂಡಿಗೆ 2 ಹನಿ ಅಯೋಡಿನ್​ ದ್ರಾವಣ ಹಾಕಿ ಇದು ಕಪ್ಪು ಬಣ್ಣಕ್ಕೆ ತಿರುಗಿದರೆ ಇದರಲ್ಲಿ ಪಿಷ್ಟ ಕಲಬೆರಕೆಯಾಗಿದೆ ಎಂದು ಅರ್ಥ. ಅಸಲಿ ಪನೀರ್​ ಕೈನಿಂದ ಹಿಚುಕಿದಾಗ ಬಿರುಕಾಗುತ್ತದೆ. ಆದರೆ, ನಕಲಿಪನೀರ್​ ಎಳೆದಾಡೋದು ಕಷ್ಟ.

ಹುರಿಗಡಲೇ ಪುಡಿ, ಬಿಸಿನೀರು ಹಾಕಿ ಟೆಸ್ಟ್ ಮಾಡಿ

ಇನ್ನೊಂದು ಪಾತ್ರಿಯಲ್ಲಿ 

​ ಕುದಿಸಿ ತಣ್ಣಗೆ ಮಾಡಿ. ಆನಂತರ ಸೋಯಾಬೀನ್​ ಪುಡಿ ಹಾಕಿ ಇದು ಕೆಂಪು ಬಣ್ಣಕ್ಕೆ ತಿರುಗಿದರೆ, ಇದಕ್ಕೆ ಡಿಟರ್ಜೆಂಟ್​ ಅಥವಾ ಯೂರಿಯಾ ಬಳಕೆ ಮಾಡಿದ್ದಾರೆ ಎಂದು ಅರ್ಥ, (ಏಜೆನ್ಸೀಸ್).