Ksheeranna Recipe ಸಾಂದರ್ಭಿಕ ಚಿತ್ರ
Ksheeranna Recipe: ಶ್ರಾವಣ ಮಾಸದ ಧಾರ್ಮಿಕ ಪೂಜೆ-ಪುನಸ್ಕಾರಗಳಲ್ಲಿ ದೇವರಿಗೆ ಅರ್ಪಿಸುವ ಪವಿತ್ರ ನೈವೇದ್ಯಕ್ಕೆ ವಿಶೇಷ ಮಹತ್ವವಿದೆ. ಹಬ್ಬದ ದಿನಗಳಲ್ಲಿ ಮನೆಮಂದಿಗೆಲ್ಲ ಇಷ್ಟವಾಗುವ ಹಾಗೂ ಮಡಿ-ನಿಯಮಗಳಿಂದ ಸುಲಭವಾಗಿ ತಯಾರಿಸಬಹುದಾದ ಸಾಂಪ್ರದಾಯಿಕ ಅಡುಗೆ ಎಂದರೆ ಅದು ಬೆಲ್ಲದ ಕ್ಷೀರಾನ್ನ. ಕಡಿಮೆ ಸಮಯದಲ್ಲಿ, ಮನೆಯಲ್ಲಿರುವ ಸರಳ ಸಾಮಗ್ರಿಗಳನ್ನು ಬಳಸಿ ದೈವಿಕ ರುಚಿಯ ಈ ಪರಮಾನ್ನವನ್ನು ಹೇಗೆ ಸಿದ್ಧಪಡಿಸುವುದು ಎನ್ನುವ ಸಂಪೂರ್ಣ ರೆಸಿಪಿ ವಿವರ ಇಲ್ಲಿದೆ ನೋಡಿ.
ಬೇಕಾಗುವ ಸಾಮಗ್ರಿಗಳು
* ಅಗತ್ಯಕ್ಕೆ ತಕ್ಕಷ್ಟು ಗೋಡಂಬಿ ಮತ್ತು ದ್ರಾಕ್ಷಿ
ಮಾಡುವ ವಿಧಾನ
ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆದು, 1/2 ಕಪ್ ನೀರು ಮತ್ತು 2 ಕಪ್ ಹಾಲು ಸೇರಿಸಿ ಕುಕ್ಕರ್‌ನಲ್ಲಿ 3-4 ವಿಸಿಲ್ ಬರುವವರೆಗೆ ಮೆತ್ತಗೆ ಬೇಯಿಸಿಕೊಳ್ಳಿ. ನಂತರ ಮತ್ತೊಂದು ಪಾತ್ರೆಯಲ್ಲಿ ಪುಡಿ ಮಾಡಿದ ಬೆಲ್ಲಕ್ಕೆ 2-3 ಚಮಚ ನೀರು ಹಾಕಿ, ಬೆಲ್ಲ ಕರಗುವವರೆಗೆ ಬಿಸಿ ಮಾಡಿ. ಬೆಲ್ಲ ಕರಗಿದ ನಂತರ ಅದನ್ನು ಶೋಧಿಸಿ ಪಕ್ಕಕ್ಕೆ ಇಡಿ.
ಬೆಂದ ಅಕ್ಕಿಯನ್ನು ಒಂದು ಪಾತ್ರೆಗೆ ಹಾಕಿ, ಉಳಿದ 1 ಕಪ್ ಹಾಲು ಸೇರಿಸಿ ಸಣ್ಣ ಉರಿಯಲ್ಲಿ 2-3 ನಿಮಿಷ ಕುದಿಸಿ. ಇದಾದ ಬಳಿಕ ಸ್ಟೌವ್ ಆಫ್ ಮಾಡಿ, ಪಾತ್ರೆ ಸ್ವಲ್ಪ ತಣ್ಣಗಾಗಲು ಬಿಡಿ. ನಂತರ ಶೋಧಿಸಿಟ್ಟ ಬೆಲ್ಲದ ನೀರು ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಕಲಸಿರಿ.
ಸಣ್ಣ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಗೋಡಂಬಿ, ದ್ರಾಕ್ಷಿ ಮತ್ತು ಕಾಯಿತುರಿಯನ್ನು ಹೊಂಬಣ್ಣಕ್ಕೆ ಹುರಿದು, ಕ್ಷೀರಾನ್ನಕ್ಕೆ ಸೇರಿಸಿ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.