ಹೆಲ್ತಿ ಡೇಟ್ ಬ್ರೌನಿ ಬೈಟ್ಸ್ 
ಆಹಾರ

ಚಾಕೊಲೇಟ್ ತಿನ್ನಬೇಕು ಅನಿಸುತ್ತಿದೆಯಾ? ಬೇಕಿಂಗ್ ಇಲ್ಲದೇ ಮಾಡಿ ಈ ಹೆಲ್ತಿ ಡೇಟ್ ಬ್ರೌನಿ ಬೈಟ್ಸ್ | Date Brownie Bites

ಪ್ರಮುಖ ಮುಖ್ಯಾಂಶಗಳು

  • ಬೇಕಿಂಗ್ ಇಲ್ಲದೇ ಡೇಟ್ ಬ್ರೌನಿ ಬೈಟ್ಸ್ ತಯಾರಿಸಬಹುದು ಹೇಗೆ?
  • ಕೆಲವೇ ಪದಾರ್ಥಗಳಿದ್ದರೆ ಸಾಕು ತಯಾರಾಗುತ್ತೆ ನಿಮ್ಮ ಬ್ರೌನಿ ಬೈಟ್ಸ್
  • ಆರೋಗ್ಯಕರವಾದ ಡೇಟ್ ಬ್ರೌನಿ ಬೈಟ್ಸ್ ಮಾಡಿಕೊಂಡು ತಿನ್ನಿ
Date Brownie Bites: ಚಾಕೊಲೇಟ್ ತಿನ್ನಬೇಕು ಅನ್ನೋ ಆಸೆ ಆದಾಗಲೆಲ್ಲಾ ಹೆಚ್ಚು ಸಿಹಿ, ಕ್ಯಾಲೊರಿ ಇರುವ ಡೆಸರ್ಟ್‌ಗಳನ್ನೇ ತಿನ್ನಬೇಕೆಂದಿಲ್ಲ. ಮನೆಯಲ್ಲೇ ಇರುವ ಕೆಲವೇ ಪದಾರ್ಥಗಳಿಂದ ಬೇಕಿಂಗ್ ಮಾಡದೇ ರುಚಿಯಾದ ಡೇಟ್ ಬ್ರೌನಿ ಬೈಟ್ಸ್ ತಯಾರಿಸಬಹುದು. ಡಯಟಿಷಿಯನ್ ಶ್ವೇತಾ ಜೆ. ಪಂಚಾಲ್ ಅವರು ಆಗಸ್ಟ್ 14ರಂದು ಇನ್‌ಸ್ಟಾಗ್ರಾಂನಲ್ಲಿ ಈ ಸರಳ ರೆಸಿಪಿಯನ್ನು ಹಂಚಿಕೊಂಡಿದ್ದಾರೆ.
ಈ ಡೇಟ್ ಬೈಟ್ಸ್‌ ಮಾಡಲು ಖರ್ಜೂರ, ಪೀನಟ್ ಬಟರ್, ಓಟ್ಸ್, ಕೋಕೋ ಪೌಡರ್ ಮತ್ತು ಡಾರ್ಕ್ ಚಾಕೊಲೇಟ್ ಬೇಕಾಗುತ್ತದೆ. ಖರ್ಜೂರದಿಂದ ನೈಸರ್ಗಿಕ ಸಿಹಿ ಸಿಗುವುದರಿಂದ ಹೆಚ್ಚುವರಿ ಸಕ್ಕರೆ ಸೇರಿಸುವ ಅಗತ್ಯವಿಲ್ಲ. ಜೊತೆಗೆ ಕೋಕೋ ಮತ್ತು ಡಾರ್ಕ್ ಚಾಕೊಲೇಟ್ ಇದಕ್ಕೆ ಬ್ರೌನಿ ರೀತಿಯ ರುಚಿ ನೀಡುತ್ತದೆ.

ಬೇಕಾಗುವ ಪದಾರ್ಥಗಳು

1. 200 ಗ್ರಾಂ ಖರ್ಜೂರ
2. 1½ ಟೇಬಲ್‌ಸ್ಪೂನ್ ಪೀನಟ್ ಬಟರ್
3. 2 ಟೇಬಲ್‌ಸ್ಪೂನ್ ಓಟ್ಸ್
4. 1 ಟೇಬಲ್‌ಸ್ಪೂನ್ ಕೋಕೋ ಪೌಡರ್
5. 50 ಗ್ರಾಂ ಡಾರ್ಕ್ ಚಾಕೊಲೇಟ್
6. ಸ್ವಲ್ಪ ಸೀ ಸಾಲ್ಟ್ (ಉಪ್ಪು)

ಡೇಟ್ ಬ್ರೌನಿ ಬೈಟ್ಸ್ ಮಾಡುವುದು ಹೇಗೆ?

ಮೊದಲು ಖರ್ಜೂರ, ಪೀನಟ್ ಬಟರ್, ಓಟ್ಸ್ ಮತ್ತು ಕೋಕೋ ಪೌಡರ್ ಅನ್ನು ಬ್ಲೆಂಡರ್ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಎಲ್ಲವೂ ಸೇರಿ ಜಿಗುಟಾದ ಹಿಟ್ಟಿನ ರೀತಿಯ ಮಿಶ್ರಣವಾಗುವವರೆಗೆ ಬ್ಲೆಂಡ್ ಮಾಡಬೇಕು. ನಂತರ ಸ್ವಲ್ಪ ಸ್ವಲ್ಪವೇ ರುಬ್ಬಿದ ಮಿಶ್ರಣವನ್ನು ತೆಗೆದುಕೊಂಡು ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಿ. ಮತ್ತೊಂದೆಡೆ ಡಾರ್ಕ್ ಚಾಕೊಲೇಟ್ ಅನ್ನು ಕರಗಿಸಿಕೊಳ್ಳಿ.
ಇನ್ನು, ತಯಾರಿಸಿದ ಡೇಟ್ ಉಂಡೆಗಳನ್ನು ಕರಗಿಸಿದ ಚಾಕೊಲೇಟ್‌ನಲ್ಲಿ ಅದ್ದಿ, ಎಲ್ಲಾ ಕಡೆ ಚಾಕೊಲೇಟ್ ಚೆನ್ನಾಗಿ ಮೆತ್ತಿಕೊಳ್ಳುವಂತೆ ಮಾಡಿ. ನಂತರ ಅವುಗಳ ಮೇಲೆ ಸ್ವಲ್ಪ ಸೀ ಸಾಲ್ಟ್ ಹಾಕಿ ಫ್ರಿಜ್‌ನಲ್ಲಿ ಇಡಿ. ಚಾಕೊಲೇಟ್ ಗಟ್ಟಿಯಾದ ಬಳಿಕ ರುಚಿಯಾದ ಡೇಟ್ ಬ್ರೌನಿ ಬೈಟ್ಸ್ ಸವಿಯಲು ಸಿದ್ಧ.

ಆರೋಗ್ಯಕರವಾದರೂ ಮಿತವಾಗಿ ತಿನ್ನಿ

ಖರ್ಜೂರದಲ್ಲಿ ನೈಸರ್ಗಿಕ ಸಿಹಿ ಮತ್ತು ಫೈಬರ್ ಇದ್ದರೆ, ಪೀನಟ್ ಬಟರ್‌ನಲ್ಲಿ ಉತ್ತಮ ಕೊಬ್ಬು ಇದೆ. ಓಟ್ಸ್ ಕೂಡ ಫೈಬರ್ ಇದ್ದೂ, ಕೋಕೋ ಮತ್ತು ಡಾರ್ಕ್ ಚಾಕೊಲೇಟ್ ಬ್ರೌನಿಯ ರುಚಿ ನೀಡುತ್ತೆ. ಆದರೆ, ನೈಸರ್ಗಿಕ ಪದಾರ್ಥಗಳಾದರೂ ಇದರಲ್ಲಿ ಕ್ಯಾಲೊರಿ ಇರಲ್ಲ ಎಂದಲ್ಲ. ಖರ್ಜೂರ, ಪೀನಟ್ ಬಟರ್ ಮತ್ತು ಚಾಕೊಲೇಟ್‌ಗಳು ಹೆಚ್ಚು ಶಕ್ತಿಯನ್ನು ಇರುವ ಪದಾರ್ಥಗಳು. ಹೀಗಾಗಿ ಇದನ್ನು ಕೂಡ ಮಿತ ಪ್ರಮಾಣದಲ್ಲಿ ತಿನ್ನುವುದು ಮುಖ್ಯ. ಚಾಕೊಲೇಟ್ ತಿನ್ನಬೇಕು ಅನ್ನಿಸಿದಾಗ ಸಣ್ಣ ಡೆಸರ್ಟ್ ಅಥವಾ ಸ್ನ್ಯಾಕ್ ಆಗಿ ಈ ಬೈಟ್ಸ್‌ಗಳನ್ನು ಸವಿಯಬಹುದು.