ಪರಾಗ್ವೆಯ ಸ್ಟಾರ್ ಆಟಗಾರ ಮಿಗೆಲ್ ಅಲ್ಮಿರೋನ್ 
FIFA ವಿಶ್ವಕಪ್

ಫಿಫಾ ವಿಶ್ವಕಪ್​ ಇತಿಹಾಸದಲ್ಲೇ ಇದು ಮೊದಲು! ಬಾಯಿ ಮುಚ್ಚಿದ್ದಕ್ಕೆ ರೆಡ್​ ಕಾರ್ಡ್, ಮೈದಾನದಲ್ಲೇ ಆಟಗಾರ ಕಣ್ಣೀರು​ | FIFA World Cup

ಪ್ರಮುಖ ಮುಖ್ಯಾಂಶಗಳು

  • ಫಿಫಾ ವಿಶ್ವಕಪ್​ ಇತಿಹಾಸದಲ್ಲೇ ಇದು ಮೊದಲು
  • ಈ ಹಿಂದೆ ಯಾವೊಬ್ಬ ಫುಟ್ಬಾಲ್​ ಆಟಗಾರ ಮಾಡದ ತಪ್ಪು ಇದಾಗಿದೆ
  • ಮಿಗೆಲ್ ಅಲ್ಮಿರೋನ್ ಮಾಡಿದ ಮಿಸ್ಟೇಕ್​ಗೆ ರೆಡ್​ ಕಾರ್ಡ್​
ಕ್ಯಾಲಿಫೋರ್ನಿಯಾ: ಪ್ರಸಕ್ತ ನಡೆಯುತ್ತಿರುವ ಫಿಫಾ ವಿಶ್ವಕಪ್​ 2026ರ ಟೂರ್ನಿ ಹಲವು ರೋಚಕ ಸನ್ನಿವೇಶ, ದಾಖಲೆಗಳಿಗೆ ಸಾಕ್ಷಿಯಾಗುತ್ತಿದೆ. ಅದಕ್ಕೆ ಮತ್ತೊಂದು ಉದಾಹರಣೆ, ಪರಾಗ್ವೆಯ ಸ್ಟಾರ್ ಮಿಡ್‌ಫೀಲ್ಡರ್ ಮಿಗೆಲ್ ಅಲ್ಮಿರೋನ್ ಅವರು ಮಾಡಿದ ಬಿಗ್ ಮಿಸ್ಟೇಕ್​. ಇದು ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಹಿಂದೆಂದೂ ಯಾವೊಬ್ಬ ಆಟಗಾರನು ಮಾಡಿರದ ರೆಕಾರ್ಡ್ ಆಗಿದೆ.  
ಪರಾಗ್ವೆಯ ಫುಟ್ಬಾಲ್ ಆಟಗಾರ ಮಿಗುಯೆಲ್ ಅಲ್ಮಿರಾನ್ ವಿಶ್ವ ಫುಟ್ಬಾಲ್ ಇತಿಹಾಸದಲ್ಲಿ ಅಪರೂಪದ ಮತ್ತು ಯಾರಿಗೂ ಬೇಡವಾದ ದಾಖಲೆಗೆ ತಮ್ಮ ಹೆಸರನ್ನು ಸೇರಿಸುವುದು ಸದ್ಯ ಫುಟ್ಬಾಲ್​ ಪ್ರೇಮಿಗಳ ಅಚ್ಚರಿಗೆ ಕಾರಣವಾಗಿದೆ. ಫಿಫಾ ಜಾರಿಗೊಳಿಸಿದ ಹೊಸ ನಿಯಮಗಳ ಪ್ರಕಾರ, ಮೈದಾನದಲ್ಲಿ ಎದುರಾಳಿ ತಂಡದ ಆಟಗಾರರ ಜೊತೆ ವಾಗ್ವಾದಕ್ಕಿಳಿದ ಮಿಗೆಲ್​, ತಮ್ ಕೈಯಿಂದ ಬಾಯಿ ಮುಚ್ಚಿಕೊಂಡಿದ್ದಕ್ಕಾಗಿ ಮಾತನಾಡಿದ್ದಕ್ಕೆ ಅಂಪೈರ್​ ಕೂಡಲೇ ರೆಡ್​ಕಾರ್ಡ್ ತೋರಿದ್ದಾರೆ.
ಪರಾಗ್ವೆ ಮತ್ತು ಟರ್ಕಿ ನಡುವಿನ ಫಿಫಾ ವಿಶ್ವಕಪ್ ಗ್ರೂಪ್-ಡಿ ಪಂದ್ಯದಲ್ಲಿ ಈ ಘಟನೆ ಸಂಭವಿಸಿದೆ. ಪಂದ್ಯದ ಮೊದಲಾರ್ಧದಲ್ಲಿ, ಅಲ್ಮಿರಾನ್ ಟರ್ಕಿಶ್ ಆಟಗಾರ ಮೆರ್ಟ್ ಮುಲ್ಡೂರ್ ಜೊತೆ ವಾಗ್ವಾದಕ್ಕಿಳಿದ ಸಮಯದಲ್ಲಿ ಕೆಟ್ಟ ಮಾತು ಅಥವಾ ಅವಾಚ್ಯ ಶಬ್ದ ಬಳಸುವ ನಿರ್ಧಾರದಿಂದ ಬಾಯಿ ಮುಚ್ಚಿಕೊಂಡಿರಬಹುದು ಎನ್ನಲಾಗಿದೆ. ಇದನ್ನು ಗಮನಿಸಿದ ವಿಡಿಯೊ ಸಹಾಯಕ ರೆಫರಿ (VAR), ಮತ್ತೊಮ್ಮೆ ಸೂಕ್ಷ್ಮವಾಗಿ ಪರಿಶೀಲಿಸಿದ ಬಳಿಕ ರೆಡ್​ ಕಾರ್ಡ್​ ತೋರಿಸಿದರು. ಅಂಪೈರ್​ ತೀರ್ಪಿನಿಂದ ಸ್ಟೇಡಿಯಂನಿಂದ ಅಲ್ಮಿರಾನ್ ಹೊರನಡೆದಾಗ, ಅವರ ತಂಡವು 1-0 ಅಂತರದಲ್ಲಿ ಮುನ್ನಡೆಯಲ್ಲಿತ್ತು.
ಜನಾಂಗೀಯ, ತಾರತಮ್ಯ ಮತ್ತು ಅವಾಚ್ಯ ಪದಗಳ ಬಳಕೆಯನ್ನು ಕಟ್ಟುನಿಟ್ಟಿನಿಂದ ತಡೆಯುವ ಉದ್ದೇಶದಿಂದ ಫಿಫಾ, ಏಪ್ರಿಲ್‌ನಲ್ಲಿ ಈ ಹೊಸ ನಿಯಮವನ್ನು ಜಾರಿಗೆ ತಂದಿದೆ. ಆಟಗಾರರು ತಮ್ಮ ಕೈಗಳಿಂದ ಬಾಯಿ ಮುಚ್ಚಿಕೊಂಡರೆ, ಅವರಾಡಿದ ಮಾತೇನು ಎಂದು ತಿಳಿಯೋದಿಲ್ಲ. ಇದು ಕಂಡುಹಿಡಿಯಲು ಕಷ್ಟವಾಗುತ್ತದೆ ಮತ್ತು ಅಂತಹ ತಪ್ಪನ್ನು ಮಾಡುವವರ ವಿರುದ್ಧ ಶಿಸ್ತಿನ ಕ್ರಮಗಳನ್ನು ಕೈಗೊಳ್ಳಲು ಈ ಕಠಿಣ ನಿಯಮವನ್ನು ಅಧಿಕೃತವಾಗಿ ಜಾರಿಗೆ ತರಲಾಗಿದೆ,(ಏಜೆನ್ಸೀಸ್).