ಕೊಲಂಬಿಯನ್ ಫುಟ್ಬಾಲರ್ ಲೂಯಿಸ್ ಡಿಯಾಜ್ ಸಾಕರ್
- ಫಿಫಾ ವಿಶ್ವಕಪ್ 2026ರ ಟೂರ್ನಿಯ ಪಂದ್ಯದಲ್ಲಿ ಕೊಲಂಬಿಯಾ ತಂಡಕ್ಕೆ ರೋಚಕ ಗೆಲುವು
- ಕೊಲಂಬಿಯಾ ತಂಡದ ಸ್ಟಾರ್ ಪ್ಲೇಯರ್ ಲೂಯಿಸ್ ಡಯಾಜ್ ಸಾಕರ್ ಆಟಕ್ಕೆ ಫ್ಯಾನ್ಸ್ ಫಿದಾ
- ಈ ಫುಟ್ಬಾಲ್ ಆಟಗಾರನ ಕಥೆ ಯಾವ ಸಿನಿಮಾ ಸ್ಟೋರಿಗೂ ಕಡಿಮೆ ಇಲ್ಲ
Luis Diaz Soccer: ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಕೊಲಂಬಿಯಾ ಪಡೆ ಸ್ಮರಣೀಯ ಗೆಲುವು ಸಾಧಿಸಿದೆ. ಉಜ್ಬೇಕಿಸ್ತಾನ್ ವಿರುದ್ಧ 3-1 ಅಂತರದಿಂದ ಗೆದ್ದು ಬೀಗಿದ ತಂಡಕ್ಕೆ ಸ್ಟಾರ್ ಆಟಗಾರ ಲೂಯಿಸ್ ಡಯಾಜ್ ಸಾಕರ್ ಅವರ ಕೊಡುಗೆ ಹೆಚ್ಚಿತ್ತು. ಅಭಿಮಾನಿಗಳ ಮೆಚ್ಚುಗೆ, ಪ್ರಶಂಸೆಗೆ ಪಾತ್ರರಾದ ಲೂಯಿಸ್ ಅವರ ಬದುಕಿನ ಕಥೆ ಕೇಳಿದ್ರೆ, ಯಾವ ಸಿನಿಮಾ ಕಥೆಗೂ ಇದು ಕಡಿಮೆ ಇಲ್ಲ ಅನಿಸುತ್ತೆ.
3 ವರ್ಷಗಳ ಬಳಿಕ ಆಟಕ್ಕೆ ಎಂಟ್ರಿ
ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ಲೂಯಿಸ್, ತಮ್ಮ ತಂದೆ ಸ್ಟ್ಯಾಂಡ್ಸ್ನಲ್ಲಿ ಕುಳಿತಿರುವುದನ್ನು ನೋಡಿ ಭಾವುಕರಾದರು. ಅಸಲಿಗೆ, ಫಿಫಾ ವಿಶ್ವಕಪ್ ಮಗನ ತಂಡವನ್ನು ಪ್ರೋತ್ಸಾಹಿಸಲು ಮೈದಾನಕ್ಕೆ ಬಂದಿರುವ ಲೂಯಿಸ್ ತಂದೆ, ಸ್ಟೇಡಿಯಂಗೆ ಬರಲು ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದಾರೆ ಎನ್ನಲಾಗಿದೆ. 2022ರ ವಿಶ್ವಕಪ್‌ಗೆ ಕೊಲಂಬಿಯಾ ಅರ್ಹತೆ ಪಡೆಯಲು ವಿಫಲವಾದಾಗಿನಿಂದ ಅವರ ಕುಟುಂಬ ಎದುರಿಸಿದ ದುರಂತ ಘಟನೆಗಳು ಇಂದಿಗೂ ಮನಸ್ಸಿನಲ್ಲಿ ಹಾಗೆಯೇ ಉಳಿದಿದೆ ಎಂದು ಡಯಾಜ್ ಹೇಳಿದ್ದಾರೆ.
2023ರಲ್ಲಿ, ಲೂಯಿಸ್ ಕುಟುಂಬವು ದೊಡ್ಡ ತೊಂದರೆಗೆ ಸಿಲುಕಿತು. ಕೊಲಂಬಿಯಾ-ವೆನೆಜುವೆಲಾ ಗಡಿ ಪ್ರದೇಶದಲ್ಲಿ ಕಿಡಿಗೇಡಿಗಳ ಗುಂಪೊಂದು ಅವರ ತಂದೆಯನ್ನು ಕಿಡ್ನ್ಯಾಪ್ ಮಾಡಿದರು. ಈ ಸಂದರ್ಭದಲ್ಲಿ, ಫುಟ್ಬಾಲರ್ ತಾಯಿ ಸಿಲೆನಿಸ್ ಮರುಲಾಂಡಾ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರೆ, ತಂದೆ ಅಪಾಯದಲ್ಲಿದ್ದರು.
ಆ ಸಮಯದಲ್ಲಿ, ಡಿಯೋಗೊ ಲಿವರ್‌ಪೂಲ್‌ಗಾಗಿ ಆಡುತ್ತಿದ್ದರು. ವಿಷಯ ತಿಳಿದ ಕೂಡಲೇ, ತವರಿಗೆ ಹಿಂತಿರುಗಿದ ಅವರು, ತನ್ನ ತಂದೆಯನ್ನು ಬಿಡಿಸಲು ಸಾಕಷ್ಟು ಕಾನೂನು ಪ್ರಯತ್ನಗಳನ್ನು ಮಾಡಿದರು. ಆದರೆ, ಯಾವುದೂ ಫಲಸಲಿಲ್ಲ. ಈ ಮಧ್ಯೆ, ಅದಾಗಲೇ ಎರಡು ಪಂದ್ಯಗಳಿಂದ ಹೊರಗುಳಿದಿದ್ದ ಲೂಯಿಸ್, ಮತ್ತೆ ಕ್ಲಬ್ಗಾಗಿ ಆಡಲು ಪ್ರಾರಂಭಿಸಿದ್ದೇ ತಂದೆಯ ಸುರಕ್ಷಿತ ಕಮ್ಬ್ಯಾಕ್ಗೆ ದೊಡ್ಡ ತಿರುವು ನೀಡಿತು.
ನೋವಿನ ನಡುವೆಯೂ ಕ್ಲಬ್ಗೆ ಆಡಲು ಪ್ರಾರಂಭಿಸಿದ ಲೂಯಿಸ್, ತನ್ನ ತಂದೆಯನ್ನು ಬಿಡುಗಡೆಗೊಳಿಸಿ ಎಂಬ ಸಂದೇಶವಿರುವ ಟಿ-ಶರ್ಟ್‌ಗಳನ್ನು ಧರಿಸಿ, ಪಂದ್ಯದಲ್ಲಿ ಎಲ್ಲರ ಗಮನ ಸೆಳೆದರು. ಈ ವಿಷಯವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಯಿತು. ತಕ್ಷಣವೇ ಕೊಲಂಬಿಯಾ ಸರ್ಕಾರ ಮಧ್ಯಪ್ರವೇಶಿಸಿ, ಲೂಯಿಸ್ ತಂದೆಯನ್ನು ಶೋಧಕ್ಕೆ ತಂಡವನ್ನು ಕಳುಹಿಸಿ, ಕಡೆಗೂ ಕಿಡಿಗೇಡಿಗಳ ಸೆರೆಯಿಂದ ಅವರನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದಿತು. ಸುಮಾರು 12 ದಿನಗಳ ಕಾಲ ಕಿಡ್ನ್ಯಾಪ್ರ್ಗಳ ಸೆರೆಯಲ್ಲಿದ್ದ ಅವರ ತಂದೆ ಕಡೆಗೂ ಸುರಕ್ಷಿತವಾಗಿ ಮನೆ ಸೇರಿದ್ದೇ ರೋಚಕ.
ಜರ್ಮನ್ ದೈತ್ಯ ತಂಡವಾದ ಬೇಯರ್ನ್ ಮ್ಯೂನಿಚ್ ಪರ ಆಡುವ ಲೂಯಿಸ್ ಡಯಾಜ್, 2018ರ ನಂತರ ಕೊಲಂಬಿಯಾಕ್ಕೆ ಮೊದಲ ವಿಶ್ವಕಪ್ ಗೆಲುವು ತಂದುಕೊಟ್ಟ ಉಜ್ಬೇಕಿಸ್ತಾನ್ ವಿರುದ್ಧ ನಿರ್ಣಾಯಕ ಗೋಲು ಹೊಡೆದರು. ತಂದೆ ಸ್ಟೇಡಿಯಂನಲ್ಲಿ ಕುಳಿತು ಪಂದ್ಯ ನೋಡುತ್ತಿರುವಾಗಲೇ ಈ ಗೆಲುವು ಸಿಕ್ಕಿದ್ದು, ನನ್ನ ಜೀವನದಲ್ಲಿ ಬಹಳ ವಿಶೇಷ ಕ್ಷಣ ಎಂದು ಪಂದ್ಯ ಮುಗಿದ ಬಳಿಕ ಭಾವುಕರಾಗಿ ಲೂಯಿಸ್ ಮಾತನಾಡಿದ್ದಾರೆ,(ಏಜೆನ್ಸೀಸ್).