shreyas iyer 
FIFA ವಿಶ್ವಕಪ್

ವಿಂಡೀಸ್ ಎದುರು ಮೊದಲ ಟಿ20: ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ, 26 ದಿನದಲ್ಲಿ 10 ಪಂದ್ಯ ಆಡುವ ಸವಾಲು!

ಏಷ್ಯನ್ ಗೇಮ್ಸ್‌ನಲ್ಲಿ ಸ್ವರ್ಣ ಪದಕ ಗೆದ್ದ ಜೋಶ್‌ನಲ್ಲಿರುವ ಶ್ರೇಯಸ್ ಅಯ್ಯರ್ ಪಡೆ ಕೆರಿಬಿಯನ್ ತಂಡದ ವಿರುದ್ಧ ಚುಟುಕು ಸಮರಕ್ಕೆ ಸಜ್ಜಾಗಿದೆ. ಭಾರತ ಹಾಗೂ ಪ್ರವಾಸಿ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಐದು ಪಂದ್ಯಗಳ ಟಿ20 ಸರಣಿಗೆ ಮಂಗಳವಾರ ಚಾಲನೆ ಸಿಕ್ಕಿದ್ದು, ಟಾಸ್ ಗೆದ್ದ ಶ್ರೇಯಸ್ ಅಯ್ಯರ್ ಮೊದಲಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಲಖನೌ: ಏಷ್ಯನ್ ಗೇಮ್ಸ್‌ನಲ್ಲಿ ಸ್ವರ್ಣ ಪದಕ ಗೆದ್ದ ಜೋಶ್‌ನಲ್ಲಿರುವ ಶ್ರೇಯಸ್ ಅಯ್ಯರ್ ಪಡೆ ಕೆರಿಬಿಯನ್ ತಂಡದ ವಿರುದ್ಧ ಚುಟುಕು ಸಮರಕ್ಕೆ ಸಜ್ಜಾಗಿದೆ. ಭಾರತ ಹಾಗೂ ಪ್ರವಾಸಿ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಐದು ಪಂದ್ಯಗಳ ಟಿ20 ಸರಣಿಗೆ ಮಂಗಳವಾರ ಚಾಲನೆ ಸಿಕ್ಕಿದ್ದು, ಟಾಸ್ ಗೆದ್ದ ಶ್ರೇಯಸ್ ಅಯ್ಯರ್ ಮೊದಲಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಮೊದಲ ಪಂದ್ಯ ಏಕನಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಐಸಿಸಿ ಟಿ20 ಶ್ರೇಯಾಂಕದನಲ್ಲಿ ಅಗ್ರಸ್ಥಾನಕ್ಕೆ ಮರಳುವ ಸಲುವಾಗಿ ಹಾಲಿ ಟಿ20 ವಿಶ್ವಚಾಂಪಿನ್ ಭಾರತ ತಂಡಕ್ಕೆ ಈ ಸರಣಿ ಪ್ರಮುಖವೆನಿಸಿದೆ.

ಏಷ್ಯನ್ ಗೇಮ್ಸ್‌ನ ಯಶಸ್ವಿ ಅಭಿಯಾನದ ಬಳಿಕ ಟಿ20ಯಲ್ಲಿ ಅಜೇಯ ಓಟವನ್ನು 9ನೇ ಪಂದ್ಯಕ್ಕೆ ವಿಸ್ತರಿಸಿಕೊಂಡಿರುವ ಶ್ರೇಯಸ್ ಅಯ್ಯರ್ ಪಡೆ ಶುಭಾರಂಭದ ನಿರೀಕ್ಷೆಯಲ್ಲಿದೆ. ಟಿ20 ವಿಶ್ವಕಪ್ ಹೀರೋ ಸಂಜು ಸ್ಯಾಮ್ಸನ್ ಜತೆಗೆ ಇನಿಂಗ್ಸ್ ಆರಂಭಿಸಬೇಕೇ ಅಥವಾ 15 ವರ್ಷದ ಸೆನ್ಸೆಶನ್ ವೈಭವ್ ಸೂರ್ಯವಂಶಿಗೆ ಅವಕಾಶ ನೀಡಬೇಕೆ ಎಂಬ ಗೊಂದಲ ಮುಖ್ಯಕೋಚ್ ಗೌತಮ್ ಗಂಭೀರ್‌ಗೆ ತಲೆನೋವಾಗಿದೆ. ಏಷ್ಯಾಡ್‌ನಲ್ಲಿ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಮುಖ್ಯಕೋಚ್ ಆಗಿದ್ದರು. ಜಪಾನ್‌ನ ನಿಶಿನ್ ಮಂದಗತಿಯ ಪಿಚ್‌ನಲ್ಲಿ ಅಭಿಷೇಕ್, ಸ್ಯಾಮ್ಸನ್ ಜತೆಗೆ ಸೂರ್ಯವಂಶಿ ಸಹ ಅವಕಾಶ ಗಿಟ್ಟಿಸಿಕೊಂಡಿದ್ದರು. 3ನೇ ಕ್ರಮಾಂಕದಲ್ಲಿ ಸ್ಯಾಮ್ಸನ್ ಲಯದಲ್ಲಿ ಕಾಣಿಸಲಿಲ್ಲ.

ಈ ಸರಣಿಯೂ ಶ್ರೇಯಸ್ ಅಯ್ಯರ್ ನಾಯಕತ್ವಕ್ಕೂ ದೊಡ್ಡ ಪರೀಕ್ಷೆ ಎನಿಸಿದ್ದು, 2012, 2016ರ ಟಿ20 ವಿಶ್ವಚಾಂಪಿಯನ್ ವಿಂಡೀಸ್ ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಜಸ್‌ಪ್ರೀತ್ ಬುಮ್ರಾಗೆ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ.

ಕೊನೇ ಏಕದಿನ ಪಂದ್ಯ ಗೆದ್ದು ಆತ್ಮವಿಶ್ವಾಸ ವೃದ್ಧಿಸಿಕೊಂಡಿರುವ ವಿಂಡೀಸ್‌ಗೆ ಟಿ20 ಸ್ಟಾರ್‌ಗಳ ಬಲ ಸಿಗಲಿದ್ದು, ಹಲವು ಆಟಗಾರರು ಐಪಿಎಲ್ ಆಡಿದ ಅನುಭವ ಹೊಂದಿದ್ದಾರೆ.

26 ದಿನದಲ್ಲಿ 10 ಪಂದ್ಯ!

ಏಷ್ಯನ್ ಗೇಮ್ಸ್ ಮುಕ್ತಾಯಗೊಂಡ ಮೂರು ದಿನದ ಅಂತರದಲ್ಲಿ ವಿಂಡೀಸ್ ವಿರುದ್ಧದ ಚುಟುಕು ಸರಣಿಯಲ್ಲಿ ಕಣಕ್ಕಿಳಿಯಲಿರುವ ಭಾರತ ತಂಡ ಮುಂದಿನ 26 ದಿನಗಳಲ್ಲಿ ಅಂದರೆ, ಅ.6ರಿಂದ ನ.1ರವರೆಗೆ 10 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುವ ಸವಾಲು ಹೊಂದಿದೆ. ಆಟಗಾರರ ಜತೆಗೆ ತರಬೇತಿ ಬಳಗಕ್ಕೂ ಇದು ಸವಾಲೆನಿಸಲಿದೆ. ಅ.17ಕ್ಕೆ ವಿಂಡೀಸ್ ವಿರುದ್ಧ ಸರಣಿ ಬೆಂಗಳೂರಿನಲ್ಲಿ ಮುಕ್ತಾಯಗೊಂಡ ಬೆನ್ನಲ್ಲೇ ಟೀಮ್ ಇಂಡಿಯಾ ನ್ಯೂಜಿಲೆಂಡ್ ಪ್ರವಾಸಕ್ಕೆ ತೆರಳಲಿದೆ. ಐದು ದಿನಗಳ ಅಂತರದಲ್ಲಿ ಅಕ್ಟೋಬರ್ 22ರಂದು ಕಿವೀಸ್ ವಿರುದ್ಧ ಆರಂಭವಾಗಲಿರುವ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಆಡಬೇಕಿದೆ.

5. ಕುಲದೀಪ್ ಯಾದವ್ ಇನ್ನು ಐದು ವಿಕೆಟ್ ಪಡೆದರೆ ಅಂತಾರಾಷ್ಟ್ರೀಯ ಟಿ20ಯಲ್ಲಿ ನೂರು ವಿಕೆಟ್ ಪೂರೈಸಿದ 5 ಭಾರತೀಯ ಬೌಲರ್ ಎನಿಸಲಿದ್ದಾರೆ. ಅರ್ಷದೀಪ್ ಸಿಂಗ್ (140), ಜಸ್‌ಪ್ರೀತ್ ಬುಮ್ರಾ (126), ಹಾರ್ದಿಕ್ ಪಾಂಡ್ಯ (114), ಅಕ್ಷರ್ ಪಟೇಲ್ (109) ನಾಲ್ವರು ಸಾಧಕರು.

ಮುಖಾಮುಖಿ: 31

ಭಾರತ: 20

ವಿಂಡೀಸ್: 10

ರದ್ದು: 1

ಟಿ20 ಸರಣಿ ವೇಳಾಪಟ್ಟಿ

ಯಾವಾಗ ಪಂದ್ಯ ಎಲ್ಲಿ

ಅ.6 ಮೊದಲ ಟಿ20 ಲಖನೌ

ಅ.9 ಎರಡನೇ ಟಿ20 ರಾಂಚಿ

ಅ.11 ಮೂರನೇ ಟಿ20 ಇಂದೋರ್

ಆ.14 ನಾಲ್ಕನೇ ಟಿ20 ಹೈದರಾಬಾದ್

ಆ.17 ಐದನೇ ಟಿ20 ಬೆಂಗಳೂರು

ಎಲ್ಲ ಪಂದ್ಯದ ಆರಂಭ: ರಾತ್ರಿ 7.00

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್