ಫಿಫಾ ವಿಶ್ವಕಪ್‌ನಲ್ಲಿ ಮಾಟ-ಮಂತ್ರದ ಸದ್ದು!
- ಫಿಫಾ ವಿಶ್ವಕಪ್‌ನಲ್ಲಿ ಮಾಟ-ಮಂತ್ರದ ಸದ್ದು!
- ಪನಾಮಾ ವಿರುದ್ಧ ಗಯಾನಾ ಗೆಲುವಿನ ಬೆನ್ನಲ್ಲೇ ಬಿಳಿ ಪೌಡರ್ ಊದಿದ ಪ್ರೇಕ್ಷಕ
- ಮೈದಾನದಲ್ಲಿ ಬಿಳಿ ಪುಡಿ ಊದಿದ ವ್ಯಕ್ತಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್
FIFA: ಪ್ರಪಂಚದ ಕ್ರೀಡಾಲೋಕದಲ್ಲಿ ಸದ್ಯ ಎಲ್ಲೆಡೆ ಫಿಫಾ ಫುಟ್ಬಾಲ್ ವಿಶ್ವಕಪ್ನದೆ ಸದ್ದು ಕೇಳಿ ಬರುತ್ತಿದೆ. ಅದರಲ್ಲೂ ಈ ಬಾರಿಯ ಫಿಫಾವನ್ನು ಅಮೆರಿಕ, ಕೆನಡ ಹಾಗೂ ಮೆಕ್ಸಿಕೊ ಜಂಟಿಯಾಗಿ ಆಯೋಜನೆ ಮಾಡಿರುವುದು ಇನ್ನಷ್ಟು ಮೆರಗನ್ನು ಹೆಚ್ಚಿಸಿದೆ.
ಆದರೆ ಗುರುವಾರ (ಜೂ.18) ಗಹಾನಾ ಮತ್ತು ಪನಾಮಾ ದೇಶಗಳ ನಡುವೆ ನಡೆದ ಪಂದ್ಯದಲ್ಲಿ ವ್ಯಕ್ತಿಯೊಬ್ಬ ಬಿಳಿ ಬಣ್ಣದ ಪೌಂಡರ್ನ್ನು ಊದಿದ ದೃಶ್ಯ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗಿದ್ದು, ಈ ಪಂದ್ಯದಲ್ಲಿ ಮಾಟ-ಮಂತ್ರ (Black Magic in FIFA) ನಡೆದಿದೆ ಎಂಬ ಚರ್ಚೆ ಶುರುವಾಗಿದೆ.
ವಿಡಿಯೋನಲ್ಲೇನಿದೆ?
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋನಲ್ಲಿ, ಗಹಾನಾ ದೇಶಕ್ಕೆ ಸಪೋರ್ಟ್ ಮಾಡಲು ಬಂದ ಪ್ರೇಕ್ಷಕನೊಬ್ಬ ತನ್ನ ಕೈಯಲ್ಲಿ ಬಿಳಿ ಬಣ್ಣದ ಪೌಂಡರ್ವೊಂದನ್ನು ಊದುತ್ತಿರುವ ದೃಶ್ಯ ಎಲ್ಲೆಡೆ ಹರಿದಾಡುತ್ತಿದೆ.
ಹಾಗೆಯೇ ಈ ಪಂದ್ಯದಲ್ಲಿ ಗಯಾನಾ ದೇಶವು 1-0 ಅಂತರದಲ್ಲಿ ಪನಾಮಾ ದೇಶವನ್ನು ಸೋಲಿಸಿದ್ದು, ಇದಕ್ಕೆ ಈ ಮಂತ್ರವಾದಿ ಪ್ರೇಕ್ಷಕನೇ ಕಾರಣ ಎಂದು ಕೆಲವರು ಹೇಳುತ್ತಿದ್ದಾರೆ.
ಕೆಲವರು ಈ ವ್ಯಕ್ತಿಯ ಈ ವರ್ತನೆಯನ್ನು ಲಘುವಾಗಿ ಸ್ವೀಕರಿಸಿ ಆನಂದ ವ್ಯಕ್ತ ಪಡಿಸಿದರೆ, ಇನ್ನು ಕೆಲವರು ಫುಟ್ಬಾಲ್ ಪಂದ್ಯದಲ್ಲಿ ಹೀಗೆ ಮಾಟ-ಮಂತ್ರ ಮಾಡಿದರೆ ಆಟದ ಮೇಲೆ ಆಟಗಾರರ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.
ನೆಟ್ಟಿಗರ ರಿಯಾಕ್ಷನ್ ಹೇಗಿದೆ?
ಈ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ಹರಿದಾಡುತ್ತಿದ್ದಂತೆ ಫುಟ್ಬಾಲ್ ಪ್ರಿಯರು ತರ-ತರದ ಕಮೆಂಟ್ಗಳನ್ನು ಹಾಕುತ್ತಿದ್ದಾರೆ. ಇಂತಹ ಒಬ್ಬ ಮಾಂತ್ರಿಕನಿದ್ದರೆ ಸಾಕು ಎಲ್ಲಾ ಪಂದ್ಯಗಳನ್ನು ಗೆಲ್ಲಿಸಿಕೊಂಡು ಬರುತ್ತಾನೆಂದು ಒಬ್ಬ ಬಳಕೆದಾರ ವ್ಯಂಗ್ಯವಾಗಿ ಹೇಳಿದ್ದಾರೆ.
ಯಾವುದೇ ಕ್ರೀಡೆ ಇರಲಿ ಅದರಲ್ಲಿ ಆಟಗಾರರ ಕಠಿಣ ಪರಿಶ್ರಮ ಮತ್ತು ಜನರ ಪ್ರೋತ್ಸಾಹ ಇರುತ್ತದೆ. ಹೀಗೆ ಮಂತ್ರ-ತಂತ್ರದಿಂದ ಯಾವುದೇ ಪಂದ್ಯವನ್ನು ಗೆಲ್ಲಲಾಗುವುದಿಲ್ಲ ಎಂದು ಇನ್ನೊಬ್ಬರು ಹೇಳಿದ್ದಾರೆ. ಪಾಪ ಅವನು ಗಯಾನಾ ತಂಡದ ಪ್ರೇಕ್ಷಕ, ಅವನನ್ನು ಹೋಗಿ ಮಾಟಗಾಟನಾಗಿ ಮಾಡಿ ಬಿಟ್ಟಿರಲ್ಲ ಎಂದು ಮತ್ತೊಬ್ಬರು ತಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿದ್ದಾರೆ, (ಏಜನ್ಸೀಸ್).