- ಇತ್ತೀಚಿನ ದಿನಗಳಲ್ಲಿ ಹಲವಾರು ಜನರು ತಲೆಗೆ ಕ್ಯಾಪ್ ಧರಿಸಿ ಓಡಾಡುವುದನ್ನು ಗಮನಿಸಿರುತ್ತೇವೆ
- ಅನೇಕರು ಬಿಸಿಲಿನ ತಾಪ ತಲೆಗೆ ಬೀಳದಂತೆ ತಡೆಯಲು ಕ್ಯಾಪ್ ಧರಿಸುವುದನ್ನು ನಾವು ನೋಡಬಹುದು
- ಕ್ಯಾಪ್ ಮೇಲಿರುವ ಸಣ್ಣ ಬಟನ್ ಯಾವುದಕ್ಕೆ ಇದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?
Cap: ಇತ್ತೀಚಿನ ದಿನಗಳಲ್ಲಿ ಹಲವಾರು ಜನರು ತಲೆಗೆ ಕ್ಯಾಪ್ ಧರಿಸುತ್ತಾರೆ. ಇನ್ನೂ ಬೇಸಿಗೆ ಸಮಯದಲ್ಲಂತೂ ಅನೇಕರು ಬಿಸಿಲಿನ ತಾಪ ತಲೆಗೆ ಬೀಳದಂತೆ ತಡೆಯಲು ಕ್ಯಾಪ್ ಧರಿಸಿ ಓಡಾಡುವುದನ್ನು ನಾವು ಗಮನಿಸಿರುತ್ತೇವೆ. ಆದರೆ, ಕ್ಯಾಪ್ ವಿನ್ಯಾಸವನ್ನು ನೀವು ಗಮನಿಸಿದ್ದೀರಾ? ಅದರ ಮೇಲಿರುವ ಸಣ್ಣ ಬಟನ್ ಯಾವುದಕ್ಕೆ ಇದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಅನೇಕರು ಇದನ್ನು ಅಲಂಕಾರಿಕ ಎಂದು ಭಾವಿಸುತ್ತಾರೆ. ಆದರೆ, ಇದಕ್ಕೇ ಆದ ವಿಶೇಷ ಉದ್ದೇಶವಿದೆ. ಈ ಸತ್ಯ ಶೇಕಡಾ ಜನರಿಗೆ ಇನ್ನೂ ತಿಳಿದಿಲ್ಲ. ಹಾಗಿದ್ದರೆ, ಕ್ಯಾಪ್ ಮೇಲಿರುವ ಸಣ್ಣ ಬಟನ್ ಏನು ಎಂಬುದನ್ನು ನಾವಿಂದು ತಿಳಿಸಲಿದ್ದೇವೆ.
ಕ್ಯಾಪ್‌ನ ಮೇಲ್ಭಾಗದಲ್ಲಿರುವ ಸಣ್ಣ ಗುಂಡಿಯನ್ನು "ಸ್ಕ್ವಾಟ್ಚಿ" ಎಂದು ಕರೆಯಲಾಗುತ್ತದೆ. ಇದು ಬೇಸ್‌ಬಾಲ್ ಕ್ಯಾಪ್‌ಗಳಲ್ಲಿ ವಿಶೇಷವಾಗಿ ನೋಡಬಹುದಾಗಿದೆ. ಕ್ಯಾಪ್ ತಯಾರಿಸುವಾಗ ಬಟ್ಟೆಯ ಎಲ್ಲಾ ಭಾಗಗಳನ್ನು ಜೋಡಿಸಲು ಇದನ್ನು ಬಳಸಲಾಗುತ್ತದೆ. ಇದರರ್ಥ ವಿನ್ಯಾಸಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಉತ್ಪಾದನಾ ಅಂಶವೂ ಆಗಿದೆ.
ಈ ಹಿಂದೆ, ಬೇಸ್‌ಬಾಲ್ ಆಟಗಾರರು ಧರಿಸುತ್ತಿದ್ದ ಕ್ಯಾಪ್‌ಗಳ ಮೇಲಿನ ಬಟ್ಟೆಯ ಹೊಲಿಗೆಗಳು ಬಹಿರಂಗಗೊಳ್ಳುತ್ತಿದ್ದವು. ಇದನ್ನು ಮರೆಮಾಚುವ ಸಲುವಾಗಿ, ಗುಂಡಿಯೊಂದಿಗೆ ಸಣ್ಣ ಕವರ್ಗಳನ್ನು ಜೋಡಿಸಿ ನಂತರ ಹೊಲಿಯಲಾಯಿತು. ಇದಾದ ಬಳಿಕ ಇದು ಫ್ಯಾಷನ್ ಆಗಿ ಪರಿವರ್ತನೆಗೊಂಡಿದ್ದಲ್ಲದೇ, ಅನೇಕ ಬ್ರಾಂಡ್ಗಳು ಇದನ್ನು ವಿನ್ಯಾಸಕ್ಕಾಗಿ ಬಳಸಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ, ಹೆಲ್ಮೆಟ್ ಧರಿಸುವಾಗ ಅಥವಾ ಹೆಡ್‌ಫೋನ್‌ಗಳನ್ನು ಬಳಸುವಾಗ ಈ ಬಟನ್ ಅನಾನುಕೂಲವಾಗಿದೆ ಎಂದು ಕೆಲವೊಂದಿಷ್ಟು ಜನರು ದೂರುತ್ತಾರೆ. ಹಾಗ್ಗಾಗಿ ಬಟನ್ ರಹಿತ ಕ್ಯಾಪ್ಗಳನ್ನು ಬಳಸುತ್ತಾರೆ. ಆದಾಗ್ಯೂ, ಸ್ಕ್ವಾಚಿ ಇನ್ನೂ ಸಾಂಪ್ರದಾಯಿಕ ಕ್ಯಾಪ್‌ಗಳಲ್ಲಿ ನಿಯಮಿತ ಲಕ್ಷಣವಾಗಿದೆ.
ಹಾಗಾಗಿ ನೀವು ಕ್ಯಾಪ್ ಧರಿಸುವಾಗ, ಮೇಲ್ಭಾಗದಲ್ಲಿರುವ ಆ ಸಣ್ಣ ಭಾಗವನ್ನು ಕೇವಲ ಅಲಂಕಾರಿಕ ಎಂದು ಭಾವಿಸಬೇಡಿ. ಇದು ಕ್ಯಾಪ್‌ನ ಉತ್ಪಾದನಾ ಇತಿಹಾಸ ಮತ್ತು ವಿನ್ಯಾಸ ತಂತ್ರವನ್ನು ನೆನಪಿಸುವ ಒಂದು ಸಣ್ಣ ಅಂಶವಾಗಿದೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.