- ನಾವು ಜೀನ್ಸ್ ಪ್ಯಾಂಟಿನ ಬಲಭಾಗದಲ್ಲಿ ಸಣ್ಣ ಪಾಕೆಟ್ ಇರುವುದನ್ನು ಗಮನಿಸಿರುತ್ತೇವೆ
- ಈ ಪಾಕೆಟ್ನ ನಿಜವಾದ ಉಪಯೋಗವೇನು? ಎಂದು ಹಲವಾರು ಜನರಿಗೆ ತಿಳಿದಿರುವುದಿಲ್ಲ
- ಈ ಪಾಕೆಟ್ ಇತಿಹಾಸವು 19 ನೇ ಶತಮಾನಕ್ಕೆ ನೇರವಾಗಿ ಸಂಬಂಧಿಸಿದೆ
Small pocket on jeans: ನಾವು ಜೀನ್ಸ್ ಪ್ಯಾಂಟಿನ ಬಲಭಾಗದಲ್ಲಿ ಸಣ್ಣ ಪಾಕೆಟ್ ಇರುವುದನ್ನು ಗಮನಿಸಿರುತ್ತೇವೆ. ಈ ಪಾಕೆಟ್ನ ನಿಜವಾದ ಉಪಯೋಗವೇನು? ಎಂದು ಹಲವಾರು ಜನರಿಗೆ ತಿಳಿದಿರುವುದಿಲ್ಲ. ಇದನ್ನು ತಯಾರಕರು ಫ್ಯಾಷನ್ಗೆ ಇಟ್ಟಿರುತ್ತಾರೆ ಎಂದು ತಿಳಿದಿದ್ದೇವೆ. ಆದರೆ, ಈ ಪಾಕೆಟ್ ಇತಿಹಾಸವು 19 ನೇ ಶತಮಾನಕ್ಕೆ ನೇರವಾಗಿ ಸಂಬಂಧಿಸಿದೆ. ಇದು ಜೀನ್ಸ್ ಕಥೆಯಲ್ಲಿ ಅಚ್ಚರಿ ಪಾತ್ರವಾಗಿದೆ.
ಹೌದು... ಜೀನ್ಸ್ ಅನ್ನು 19 ನೇ ಶತಮಾನದಲ್ಲಿ ಕಂಡುಹಿಡಿಯಲಾಯಿತು. ಇದು ಲೆವಿಸ್ ಕಂಪನಿಯು ಕಾರ್ಮಿಕ ವರ್ಗದವರಿಗಾಗಿ ಗಟ್ಟಿಮುಟ್ಟಾದ ಜೀನ್ಸ್ನ್ನು ತಯಾರಿಸಲಾಗುತ್ತಿತ್ತು. ಆ ಸಮಯದಲ್ಲಿ ಯಾವುದೇ ಪುರುಷ ಕಾರ್ಮಿಕರು ಮತ್ತು ವ್ಯಾಪಾರಿಗಳು ಕೈಗಡಿಯಾರವನ್ನು ಬಳಸುತ್ತಿರಲಿಲ್ಲ. ಬದಲಾಗಿ ಸಣ್ಣ ಪಾಕೆಟ್ ಗಡಿಯಾರವನ್ನು ಬಳಸುತ್ತಿದ್ದರು.
ಅದಕ್ಕಾಗಿ, 1872 ರಲ್ಲಿ ಲೆವಿ ಸ್ಟ್ರಾಸ್ ಮತ್ತು ಕಂಪನಿ ತಮ್ಮ ಮೊದಲ ಜೀನ್ಸ್ ಅನ್ನು ವಿನ್ಯಾಸಗೊಳಿಸಿದಾಗ ಈ ಕೈಗಡಿಯಾರವನ್ನು ಸುರಕ್ಷಿತವಾಗಿ ಇಡಲು ಈ ವಿಶೇಷ ಜೋಬನ್ನು ಬಳಸುತ್ತಿದ್ದರು ಎಂದು ಅಧ್ಯಯನಗಳು ತಿಳಿಸಿವೆ. ಒಂದು ವೇಳೆ ಕಾರ್ಮಿಕರು ಕೆಲಸ ಮಾಡುವಾಗ ದೊಡ್ಡ ಜೇಬಿನಲ್ಲಿ ಇಟ್ಟುಕೊಂಡಿದ್ದರೆ, ಅವು ಬೀಳಬಹುದು ಅಥವಾ ಹಾಳಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತಿದ್ದವು. ಹಾಗಾಗಿ ಗಡಿಯಾರವನ್ನು ಹಾಕುವ ಸಲುವಾಗಿ ಈ ಜೇಬನ್ನು ಬಳಸುತ್ತಿದ್ದರಂತೆ.
ಇದು ನಾಣ್ಯ ಪಾಕೆಟ್ ಅಲ್ಲ. ಬದಲಾಗಿ ಗಡಿಯಾರ ಪಾಕೆಟ್ ಅಥವಾ "ಕಾಂಡೋಮಿನಿಯಂ" ಎಂದು ಕರೆಯಲಾಗುತ್ತದೆ. ಇದು ಗಣಿಗಾರರು, ದನ ಮೇಯಿಸುವವರು, ರೈಲ್ವೆ ಕೆಲಸಗಾರರು ಇನ್ನಿತರ ಕಾರ್ಮಿಕರಿಗೆ ಧೂಳು ಮತ್ತು ಕೊಳಕು ದೈಹಿಕವಾಗಿ ಕೆಲಸ ಮಾಡುವಾಗ ತಮ್ಮ ಗಡಿಯಾರವನ್ನು ಇಟ್ಟುಕೊಳ್ಳಲು ಈ ಪಾಕೆಟ್ ತುಂಬಾ ಉಪಯುಕ್ತವಾಗುತ್ತಿತ್ತು.
ಜೀನ್ಸ್ ಪ್ಯಾಂಟ್‌ನ ಹಿನ್ನಲೆ
ಜೀನ್ಸ್‌ನ ಮೂಲ ಡೆನಿಮ್ ಬಟ್ಟೆಗೆ ಸಂಬಂಧಿಸಿದೆ. "ಜೀನ್ಸ್" ಎಂಬ ಹೆಸರು ಇಟಲಿಯ ಜೆನೋವಾ ನಗರದಿಂದ ಬಂದಿದೆ. ಈ ಪ್ರದೇಶದಲ್ಲಿ "ಜೀನ್" ಎಂಬ ಬಟ್ಟೆ ತಯಾರಾಗುತ್ತಿತ್ತು. ಇದಾದ ಬಳಿಕ ಆಧುನಿಕ ಜೀನ್ಸ್ ಪ್ಯಾಂಟ್‌ನ ಆವಿಷ್ಕಾರವು 1872ರಲ್ಲಿ ನಡೆಯಿತು. ಆ ಸಂದರ್ಭದಲ್ಲಿ ಜರ್ಮನಿ ಮೂಲದ ಅಮೆರಿಕಾದ ವ್ಯಾಪಾರಿ ಲೇವಿ ಸ್ಟ್ರಾಸ್ ಮತ್ತು ಟೈಲರ್ ಜೇಕಬ್ ಡೇವಿಸ್ ಅವರು ಒಟ್ಟಾಗಿ ಇದನ್ನು ರಚಿಸಿದರು.
80 ರ ದಶಕದಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಚಿನ್ನದ ಗಣಿಗಾರಿಕೆ ಜೋರಾಗಿ ನಡೆಯತ್ತಿತ್ತು. ಆ ಸಮಯದಲ್ಲಿ ಗಣಿಗಾರರು, ದನ ಕಾಯುವವರು ಮತ್ತು ಕಾರ್ಮಿಕರಿಗೆ ಬಲವಾದ ಪ್ಯಾಂಟ್ ಬೇಕಿತ್ತು. ಹಾಗೆಯೇ ಬೇರೆ ಬಟ್ಟೆಯ ಪ್ಯಾಂಟ್ಗಳು ಹರಿದುಹೋಗುತ್ತಿದ್ದವು. ಮೇ 20, 1873 ರಂದು ಅವರಿಬ್ಬರಿಗೂ ಪೇಟೆಂಟ್ ಸಿಕ್ಕಿತು. ಅಂದಿನಿಂದ ಜೀನ್ಸ್ ಆಧುನಿಕ ಜನ್ಮವನ್ನು ಪಡೆಯಿತು (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.