CSK VS KKR Sakshi Dhoni Dress
- ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ಭರ್ಜರಿ ಜಯ
- ಗ್ಯಾಲರಿಯಲ್ಲಿ ಮೃದುವಾದ ಗುಲಾಬಿ ಬಣ್ಣದ ರೇಷ್ಮೆ ಕುರ್ತಾದಲ್ಲಿ ಮಿಂಚಿದ ಸಾಕ್ಷಿ ಧೋನಿ
- 16,500 ಬೆಲೆಯ ಹ್ಯಾಂಡ್-ಪೇಂಟೆಡ್ ಉಡುಪಿನಲ್ಲಿ ಎಲ್ಲರ ಗಮನ ಸೆಳೆದ ಎಂ.ಎಸ್. ಧೋನಿ ಪತ್ನಿ
CSK VS KKR: ಸತತ ಸೋಲುಂಡ ಚೆನ್ನೈ ಸೂಪರ್ ಕಿಂಗ್ಸ್ ಮಂಗಳವಾರ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮ್ಯಾಚ್ ಗೆದ್ದಿದೆ. ಎರಡು ತಂಡಗಳ ಹಣಾಹಣಿ ಮಧ್ಯೆ ಎಲ್ಲರ ಗಮನ ಸೆಳೆದದ್ದು ಸ್ಟೇಡಿಯಂನ ಗ್ಯಾಲರಿಯಲ್ಲಿ ಕುಳಿತಿದ್ದ ಪತ್ನಿ ಸಾಕ್ಷಿ ಸಿಂಗ್ ಧೋನಿ ತಮ್ಮ ಅದ್ಭುತ ಫ್ಯಾಷನ್ ಸೆನ್ಸ್ ಎಲ್ಲರ ಗಮನ ಸೆಳೆದಿದೆ.
Indian Premier Leagueನ 21ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಮಧ್ಯೆ ನಡೆದ ಪಂದ್ಯದಲ್ಲಿ, ಸಿಎಸ್‌ಕೆ ತಂಡ 32 ರನ್ಗಳಿಂದ ಜಯ ಸಾಧಿಸಿದೆ. ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಸಿಎಸ್‌ಕೆ 20 ಓವರ್ನಲ್ಲಿ 192 ರನ್ ಕಲೆ ಹಾಕಿತ್ತು. ಆದರೆ ಕೆಕೆಆರ್ 20 ಓವರ್ನಲ್ಲಿ ಗಳಿಸಿದ್ದು 162 ರನ್ ಮಾತ್ರ ಆಮೂಲಕ ಸಿಎಸ್‌ಕೆ ವಿರುದ್ಧ 32 ರನ್ ಹಿಂದುಳಿದ ಕಾರಣ ಸೋಲೊಪ್ಪಿಕೊಳ್ಳಬೇಕಾಯಿತು.
ಮಗ್ಗದಿಂದ ತಯಾರಿಸಲಾದ ಬಟ್ಟೆ
ಮಂಗಳವಾರ ನಡೆದ ಪಂದ್ಯಕ್ಕಾಗಿ ಸುರ್ಮಯೆ' ಬ್ರ್ಯಾಂಡ್‌ನ ಮೃದುವಾದ ಗುಲಾಬಿ ಬಣ್ಣದ ಕೈ ಮಗ್ಗದ ಮಲ್ಬರಿ ರೇಷ್ಮೆ ಕುರ್ತಾ ಸೆಟ್ ಧರಿಸಿ ಸ್ಟೇಡಿಯಂಗೆ ಬಂದಿದ್ದರು. ಇದರ ಬೆಲೆ ಸುಮಾರು 16,500 ರೂ. ಈ ಉಡುಪಿನ ಮೇಲೆ ಕೈಯಿಂದ ಚಿತ್ರಿಸಿದ ಮ್ಯಾಗ್ನೋಲಿಯಾ ಹೂವುಗಳ ವಿನ್ಯಾಸವು ನೋಡುಗರ ಮನ ಸೆಳೆಯುತ್ತಿತ್ತು. ಇನ್ನು ಯಾವುದೇ ಆಭರಣ ಧರಿಸದೆ ಸಿಂಪಲ್ ಆಗಿ, ಕ್ಲಾಸಿ ಆಗಿ ಕಾಣುತ್ತಿದ್ದ ಸಾಕ್ಷಿ ಅವರ ಔಟ್ಫುಲ್ ಫ್ಯಾಷನ್ ಲೋಕದ ವಿಮರ್ಶಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ವಿನ್ಯಾಸ ಹೇಗಿತ್ತು?
ಕುರ್ತಾದ ಮೇಲಿರುವ ಕಲಾತ್ಮಕ ಹೂವುಗಳು ಮತ್ತು ಪ್ಯಾಂಟ್ ಮೇಲಿರುವ ಪಟ್ಟೆಗಳ ವಿನ್ಯಾಸವು ಉಡುಪಿಗೆ ಆಧುನಿಕ ಸ್ಪರ್ಶ ನೀಡಿದ್ದವು. ಹಗುರವಾದ ದುಪಟ್ಟಾ ಈ ಇಡೀ ಉಡುಪಿನ ಅಂದವನ್ನು ಮತ್ತಷ್ಟು ಹೆಚ್ಚಿಸಿತ್ತು. ಮೈದಾನದಲ್ಲಿ ಸಾವಿರಾರು ಜರ್ಸಿಗಳ ನಡುವೆ ಸಾಕ್ಷಿ ಅವರ ಈ ಸಾಂಪ್ರದಾಯಿಕ ಹಾಗೂ ಸ್ಟೈಲಿಶ್ ಲುಕ್ ಎದ್ದು ಕಾಣುತ್ತಿತ್ತು.
ಕಳೆದ ಎರಡು ವರ್ಷಗಳಲ್ಲಿ ಮೊದಲ ಬಾರಿಗೆ ಸಿಎಸ್‌ಕೆ ಸತತ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಮೇಲೇರಿದೆ. ಎಂ.ಎಸ್. ಧೋನಿ ಅವರು ಕಾಲಿನ ಸ್ನಾಯು ಸೆಳೆತದಿಂದಾಗಿ ವಿಶ್ರಾಂತಿಯಲ್ಲಿದ್ದರು. ಅವರ ಅನುಪಸ್ಥಿತಿಯಲ್ಲಿಯೂ ತಂಡ ಎರೆಡೆರಡು ಪಂದ್ಯವನ್ನು ಗೆದ್ದುಕೊಂಡಿದ್ದಾರೆ, (ಏಜೆನ್ಸೀಸ್).