ಪ್ರೇಮ ನಿವೇದನೆ (Propose) ಎನ್ನುವುದು ಕೇವಲ ಪದಗಳ ಸಂಕಲನವಲ್ಲ, ಅದು ಎರಡು ಹೃದಯಗಳ ಮಿಡಿತವನ್ನು ಬೆಸೆಯುವ ಒಂದು ಸುಂದರ ಕಲೆ. ಪ್ರಪೋಸ್ ಮಾಡುವುದು ಎಂದರೆ ಬರೀ ಮಾತಲ್ಲ.. ಅವಳು ಸದಾ ನೆನಪಿಡುವ ಅದ್ಭುತ ಕ್ಷಣ. ಎರಡು ಜೀವಗಳ ಒಡನಾಟದ ನೈಜ ಪ್ರತಿಬಿಂಬ, ಹುಡುಗಿಯ ಮನಸ್ಸನ್ನು ಗೆದ್ದು, ಆ ಕ್ಷಣವನ್ನು ಶಾಶ್ವತ ನೆನಪಾಗಿಸುವ ಐದು ರೋಮ್ಯಾಂಟಿಕ್ ಮಾರ್ಗಗಳು ಇಲ್ಲಿವೆ.
1. ನೆನಪುಗಳ ಹಾದಿ
ನೀವು ಮೊದಲ ಬಾರಿಗೆ ಭೇಟಿಯಾದ ಸ್ಥಳ, ಮೊದಲ ಕಾಫಿ ಕುಡಿದ ಕೆಫೆ ಅಥವಾ ಮೊದಲ ಸಿನಿಮಾ ನೋಡಿದ ಥಿಯೇಟರ್ ಸೇರಿದಂತೆ ನಿಮ್ಮ ಪ್ರೀತಿಯ ಪ್ರಯಾಣದ ಪ್ರಮುಖ ಸ್ಥಳಗಳಿಗೆ ಅವಳನ್ನು ಕರೆದೊಯ್ಯಿರಿ. ಪ್ರತಿಯೊಂದು ಹಂತದಲ್ಲೂ ಒಂದು ನೆನಪಿನ ಕಾಣಿಕೆ ನೀಡಿ, ಕೊನೆಯಲ್ಲಿ ನಿಮ್ಮ ಭವಿಷ್ಯದ ಬಗ್ಗೆ ಕೇಳುತ್ತಾ ಮಂಡಿಯೂರಿ ಪ್ರಪೋಸ್ ಮಾಡಿ. ಇದು ನಿಮ್ಮಿಬ್ಬರ ನೆನಪಿನ ಬುತ್ತಿಯನ್ನು ಮತ್ತೇ ಬಿಚ್ಚಿಡುತ್ತದೆ.
2. ನಕ್ಷತ್ರಗಳ ಕೆಳಗೆ ಸುಂದರ ಸಂಜೆ
ನೀವು ಇಷ್ಟಪಡುವ ಹುಡುಗಿ ಶಾಂತತೆಯನ್ನು ಬಯಸುವುದಾದರೆ, ಮನೆಯ ಟೆರೇಸ್ ಅಥವಾ ಯಾವುದಾದರೂ ಪ್ರದೇಶದಲ್ಲಿ ಕ್ಯಾಂಪ್‌ಫೈರ್ ಮತ್ತು ಡಿನ್ನರ್ ವ್ಯವಸ್ಥೆ ಮಾಡಿ. ಆಕಾಶದಲ್ಲಿ ನಕ್ಷತ್ರಗಳು ಮಿನುಗುತ್ತಿರುವ ಸುಂದರ ಸಮಯದಲ್ಲಿ "ನನ್ನ ಜೀವನದ ಏಕೈಕ ಧ್ರುವನಕ್ಷತ್ರ ನೀನು" ಎನ್ನುತ್ತಾ ಉಂಗುರವನ್ನು ತೊಡಿಸಿ, ಈ ಏಕಾಂತದ ಕ್ಷಣ ಅತ್ಯಂತ ಭಾವನಾತ್ಮಕವಾಗಿರುತ್ತದೆ.
3. ಸರ್ಪ್ರೈಸ್ 'ಸ್ಕ್ರ್ಯಾಪ್ ಬುಕ್' ಅಥವಾ ವೀಡಿಯೋ
ನಿಮ್ಮಿಬ್ಬರ ಫೋಟೋಗಳು, ಹಳೆಯ ಚಾಟ್ ಸ್ಕ್ರೀನ್‌ಶಾಟ್‌ಗಳು ಮತ್ತು ಸಣ್ಣ ಟಿಕೆಟ್ ತುಣುಕುಗಳನ್ನು ಬಳಸಿ ಒಂದು ಸುಂದರ 'ಸ್ಕ್ರ್ಯಾಪ್ ಬುಕ್' ಸಿದ್ಧಪಡಿಸಿ. ಅದರ ಕೊನೆಯ ಪುಟದಲ್ಲಿ "ನಮ್ಮ ಮುಂದಿನ ಅಧ್ಯಾಯಕ್ಕೆ ನೀನು ಜೊತೆಯಾಗುವೆಯಾ?" ಎಂದು ಬರೆಯಿರಿ. ನೀವು ಬೇರೆ ಊರಿನಲ್ಲಿದ್ದರೆ ಒಂದು ಸುಂದರ ವೀಡಿಯೋ ಎಡಿಟ್ ಮಾಡಿ ಸರ್ಪ್ರೈಸ್ ನೀಡಬಹುದು.
4. ಅಡ್ವೆಂಚರ್ ಪ್ರಪೋಸಲ್
ನಿಮ್ಮ ಹುಡುಗಿ ಟ್ರೆಕ್ಕಿಂಗ್ ಪ್ರಿಯಳಾಗಿದ್ದರೆ ಯಾವುದಾದರೂ ಸುಂದರ ಬೆಟ್ಟದ ಶಿಖರ ತಲುಪಿದಾಗ ಅಥವಾ ಸೂರ್ಯೋದಯದ ಸಮಯದಲ್ಲಿ ಪ್ರಪೋಸ್ ಮಾಡಿ. ಆ ಎತ್ತರದ ಜಾಗದಲ್ಲಿ, ಸುಂದರ ಪ್ರಕೃತಿಯ ನಡುವೆ ನೀವು ಕೇಳುವ ಪ್ರಶ್ನೆ ಅವಳಿಗೆ ಸದಾ ನೆನಪಿನಲ್ಲಿರುತ್ತದೆ.
5. ಮರಳಿನ ಮೇಲಿನ ಕವಿತೆ
ಸಮುದ್ರದ ಅಲೆಗಳ ಸದ್ದಿನ ನಡುವೆ, ಮರಳಿನ ಮೇಲೆ ದೊಡ್ಡದಾಗಿ ನೀವು ಪ್ರೀತಿಸುವ ಹುಡುಗಿಯ ಹೆಸರನ್ನು ಬರೆದು ಹೂವುಗಳಿಂದ ಅಲಂಕರಿಸಿ. ಸೂರ್ಯ ಮುಳುಗುವ ಹೊತ್ತಿಗೆ (Sunset) ಅವಳನ್ನು ಅಲ್ಲಿಗೆ ಕರೆದೊಯ್ದು, ಸಮುದ್ರದ ಅಲೆಗಳಷ್ಟೇ ಅಂತ್ಯವಿಲ್ಲದ ಪ್ರೀತಿ ನನ್ನದು ಎಂದು ಹೇಳಿ ಮನದ ಮಾತು ಹಂಚಿಕೊಳ್ಳಿ, ಇದು ಕೂಡ ಆಕೆಗೆ ಇಷ್ಟವಾಗಬಹುದು(ಏಜೆನ್ಸೀಸ್).
ಸಣ್ಣ ಸೂಚನೆ:- ಪ್ರಪೋಸ್ ಮಾಡುವಾಗ ಆ ಕ್ಷಣವನ್ನು ಸೆರೆಹಿಡಿಯಲು ಹಿಡನ್ ಕ್ಯಾಮೆರಾ ಬಳಸಿ. ಆ ಸಮಯದಲ್ಲಿನ ಮುಖದ ಎಕ್ಸ್ಪ್ರೆಶನ್ಗೆ ಬೆಲೆಕಟ್ಟಲು ಸಾಧ್ಯವಿಲ್ಲ.