ಮಾಗಡಿ: ಪಟ್ಟಣದಲ್ಲಿ 41 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುವ ತಾಲೂಕು ಆಸ್ಪತ್ರೆ ನೂತನ ಕಟ್ಟಡ ಕಾಮಗಾರಿಗೆ ಯಾರೂ ವಿರೋಧ ಮಾಡಬಾರದು. ಬಡವರ ಆರೋಗ್ಯ ಕಾಪಾಡಲು ಆಸ್ಪತ್ರೆ ನಿರ್ಮಿಸಲಾಗುತ್ತಿದೆ. 100 ಪ್ರತಿಮೆಗಳನ್ನು ನಿರ್ಮಿಸಬಹುದು ಆದರೆ ಒಂದು ಆಸ್ಪತ್ರೆ ನಿರ್ಮಿಸುವುದು ಕಷ್ಟಸಾಧ್ಯ ಎಂದು ಶಾಸಕ ಬಾಲಕೃಷ್ಣ ಹೇಳಿದರು.
ಈಗಿರುವ ತಾಲೂಕು ಆಸ್ಪತ್ರೆಯ ದುರಸ್ತಿ ಕಾಮಗಾರಿಯನ್ನು ಪರಿಶೀಲಿಸಿ ಮಾತನಾಡಿದ ಅವರು, ಹೈಟೆಕ್ ಆಸ್ಪತ್ರೆ ನಿರ್ಮಿಸಲು ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಆಸ್ಪತ್ರೆಗೆ ಜಾಗವನ್ನೂ ನೀಡಲಾಗಿದೆ. ಈಗಾಗಲೇ ಕ್ಯಾಬಿನೆಟ್ನಲ್ಲೂ ಜಾಗ ಮಂಜೂರಾಗಿದೆ. ಇನ್ನೆರಡು ವರ್ಷಗಳಲ್ಲಿ ಆಸ್ಪತ್ರೆ ನಿರ್ಮಾಣಗೊಳ್ಳಲಿದೆ. ಆದರೂ ಕೆಲವರು ಸುಖಾಸುಮ್ಮನೆ ತೊಂದರೆ ಕೊಡಲು ನ್ಯಾಯಲಯಕ್ಕೆ ದೂರು ನೀಡಿ, ಆಸ್ಪತ್ರೆ ಕಾಮಗಾರಿ ನಿಲ್ಲಿಸಲು ವ್ಯವಸ್ಥಿತ ಸಂಚು ನಡೆಸುತ್ತಿದ್ದಾರೆ. ನಾನು ಸ್ವಂತಕ್ಕೆ, ಕಮಿಷನ್ ಹೊಡೆಯಲು ಆಸ್ಪತ್ರೆ ನಿರ್ಮಿಸುತ್ತಿಲ್ಲ ಎಂದು ಬಾಲಕೃಷ್ಣ ಖಾರವಾಗಿ ನುಡಿದರು. ನೂತನ ಆಸ್ಪತ್ರೆ ನಿರ್ಮಿಸುವವರೆಗೂ ಜನರ ಆರೋಗ್ಯದ ಹಿತದೃಷ್ಟಿಯಿಂದ ಹಳೇ ಆಸ್ಪತ್ರೆಯನ್ನು 4.50 ಕೋಟಿ ರೂ. ವೆಚ್ಚದಲ್ಲಿ ಮರುನಿರ್ಮಾಣ ಮಾಡಲಾಗುತ್ತಿದೆ. ನೂತನ ಆಸ್ಪತ್ರೆ ನಿರ್ಮಿಸಿದ ನಂತರ ಈ ಜಾಗದಲ್ಲಿ ತಾಯಿ ಮಕ್ಕಳ ಆಸ್ಪತ್ರೆ ಕಟ್ಟಲಾಗುವುದು ಎಂದು ಬಾಲಕೃಷ್ಣ ಮಾಹಿತಿ ನೀಡಿದರು.
ಸ್ಕಾ$ನಿಂಗ್ ವೈದ್ಯರು ವರ್ಗಾವಣೆಯಾಗಿರುವುದರಿಂದ ಸದ್ಯಕ್ಕೆ ತಾತ್ಕಾಲಿಕವಾಗಿ ಬೇರೆಯವರನ್ನು ನೇಮಕಮಾಡಿಕೊಡಲಾಗುವುದು. ನಾಗರಿಕರಿಗೆ ಉತ್ತಮ ಆರೋಗ್ಯ ಕಲ್ಪಿಸಲು ನಮ್ಮ ಸರ್ಕಾರ ಬದ್ಧ ಎಂದರು.
ಆಸ್ಪತ್ರೆ ಕಾಮಗಾರಿ ಬೇಗ ಮುಗಿಸಿ. ತಡಮಾಡುವುದರಿಂದ ರೋಗಿಗಳಿಗೆ ತೊಂದರೆಯಾಗುತ್ತದೆ. ಎಸ್ಟಿಮೆಂಟ್ ಪ್ರಕಾರವೇ ಕಾಮಗಾರಿ ನಡೆಸಬೇಕು. ಕಳಪೆ ಕಾಮಗಾರಿ ಮಾಡಿದರೆ ಶಿಸ್ತುಕ್ರಮಕೈಗೊಳ್ಳಲಾಗುವುದು ಎಂದು ಎಂಜಿನಿಯರ್ಅನ್ನು ಶಾಸಕರು ತರಾಟೆಗೆ ತೆಗೆದುಕೊಂಡರು.
ಬಿಎಂಆರ್ಡಿಎ ಮಾಜಿ ಅಧ್ಯ ಕೆ.ಕೃಷ್ಣಮೂರ್ತಿ, ಪುರಸಭೆ ಪ್ರಭಾರಿ ಅಧ್ಯ ರಿಯಾಜ್, ತಾಯಿ ಸಮಿತಿ ಅಧ್ಯ ಶಿವಕುಮಾರ್, ಸದಸ್ಯರಾದ ವಿಜಯ ರೂಪೇಶ್, ಭಾಗ್ಯಮ್ಮ, ಅಶ್ವತ್ಥ್, ಆರೋಗ್ಯ ಸಮಿತಿ ಸದಸ್ಯರಾದ ಕೆಂಪೇಗೌಡ, ಸಂತೋಷ್, ಆಸ್ಪತ್ರೆ ಆಡಳಿತಾಧಿಕಾರಿ ಡಾ.ಹರ್ಷವರ್ಧನ್, ಡಾ.ಯಶವಂತ್, ಫಾರೂಕ್, ಡಾ.ನಾಗನಾಥ್, ಶಿವಸ್ವಾಮಿ, ಗಿರೀಶ್, ಸಿದ್ದರಾಜು ಇತರರು ಇದ್ದರು.