ಜಿಲ್ಲೆ

ಸೀಶಕ್ತಿ ಸಂಘಗಳ ₹11.75 ಲಕ್ಷ ವಂಚನೆ

ಚೇಳೂರು ವಿಎಸ್ಸೆಸ್ಸೆನ್‌ನ ಮ್ಯಾನೇಜರ್, ಕಾರ್ಯದರ್ಶಿ ವಿರುದ್ಧ ದೂರು ಒಬ್ಬನ ಬಂಧನ, ಮತ್ತೊಬ್ಬ ಪರಾರಿ

ಚೇಳೂರು: ಸೀಶಕ್ತಿ ಸಂಘಗಳಿಂದ ಸಂಗ್ರಹಿಸಿದ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡದೆ ವಂಚಿಸಿರುವ ಪ್ರಕರಣ ಪಟ್ಟಣದ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ನಡೆದಿದೆ. ಸುಮಾರು 11,75,850 ರೂ.ಗಳನ್ನು ವಂಚನೆ ಮಾಡಲಾಗಿದೆ.

ಪ್ರಕರಣ ಸಂಬಂಧ ಬ್ಯಾಂಕ್ ಮ್ಯಾನೇಜರ್ ಚೇತನ್ ಹಾಗೂ ಕಾರ್ಯದರ್ಶಿ ಅಭಿಲಾಷ್ ವಿರುದ್ಧ ಚೇಳೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ಬಾಗೇಪಲ್ಲಿಯ ಅಭಿಲಾಷ್ ಮತ್ತು ಚೇತನ್ ಇಬ್ಬರು ಎಂಟು ವರ್ಷಗಳಿಂದ ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆರು ವರ್ಷಗಳಿಂದ ಹಲವಾರು ಸೀಶಕ್ತಿ ಸಂಘಗಳು (ಶ್ರೀ ಕನ್ಯಕಾ ಸೀಶಕ್ತಿ ಸ್ವಸಹಾಯ ಸಂಘ, ಗಾಯತ್ರಿ ಸೀಶಕ್ತಿ ಸ್ವಸಹಾಯ ಸಂಘ, ಮತಾಂಗಿ ಸೀಶಕ್ತಿ ಸ್ವಸಹಾಯ ಸಂಘ, ಸಂತೋಷಮಾತೆ ಸೀಶಕ್ತಿ ಸ್ವಸಹಾಯ ಸಂಘ, ಶ್ರೀ ಕಾವೇರಿ ಸೀಶಕ್ತಿ ಸ್ವಸಹಾಯ ಸಂಘ, ನೇತ್ರಾವತಿ ಸೀಶಕ್ತಿ ಸ್ವಸಹಾಯ ಸಂಘ, ಸಾಯಿಬಾಬಾ ಸೀಶಕ್ತಿ ಸ್ವಸಹಾಯ ಸಂಘ, ವ್ನಿೇಶ್ವರ ಸೀಶಕ್ತಿ ಸ್ವಸಹಾಯ ಸಂಘ, ಸಿರಿ ಸೀಶಕ್ತಿ ಸ್ವಸಹಾಯ ಸಂಘ) ಬ್ಯಾಂಕ್‌ನಿಂದ ಸಾಲಪಡೆದು ಮರುಪಾವತಿಸಿದ್ದವು. ಆದರೆ, ಸಾಲದ ಹಣವನ್ನು ಪಡೆದ ಇಬ್ಬರು ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡದೆ ಲಪಟಾಯಿಸಿದ್ದಾರೆ ಎನ್ನಲಾಗಿದೆ.

ಒಂಬತ್ತು ಸೀಶಕ್ತಿಗಳ ಸಂಘಗಳ ಒಟ್ಟು 11,75,850 ರೂ.ಗಳನ್ನು ವಂಚಿಸಿದ್ದಾರೆ. ಇವರಿಬ್ಬರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಟ್ಟಣದ ಾತಿಮಾ ಬೀ ಅವರು ಪೊಲೀಸರಿಗೆ ದೂರು ನೀಡಿದ್ದು, ಅದರನ್ವಯ ಕಳೆದ ಶನಿವಾರ ಅಭಿಲಾಷ್‌ನನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯದ ಎದುರು ಹಾಜರುಪಡಿಸಿದ್ದಾರೆ. ಮತ್ತೊಬ್ಬ ಚೇತನ್ ಪರಾರಿಯಾಗಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.