ಜಿಲ್ಲೆ

ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ತಲಾ ₹10 ಲಕ್ಷ

ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಮಾಹಿತಿ

ಕೋಲಾರ: ರಾಜ್ಯ ಸರ್ಕಾರದ ಮುಂದಿನ ಬಜೆಟ್‌ನಲ್ಲಿ ಎಲ್ಲ ಜಿಲ್ಲೆಗಳ ಕಾರ್ಯನಿರತ ಪತ್ರಕರ್ತರ ಸಂಗಳ ಕ್ಷೇವಾಭಿವೃದ್ಧಿ ನಿಧಿಗೆ ತಲಾ 10 ಲಕ್ಷ ರೂ. ನೀಡಲು ಕ್ರಮ ವಹಿಸುವುದಾಗಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ತುಮಕೂರಿನಲ್ಲಿ ಆಯೋಜಿಸಿದ್ದ ಪತ್ರಕರ್ತರ ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿದ ಪತ್ರಕರ್ತರನ್ನು ಸನ್ಮಾನಿಸಿ ವಾತನಾಡಿದ ಅವರು, ರಾಜ್ಯದಲ್ಲೇ ಕೋಲಾರ ಜಿಲ್ಲಾ ಸಂ ವಾದರಿಯಾಗಿದೆ. ಯಾವುದೇ ಕ್ರೀಡಾಕೂಟದಲ್ಲಿ ಭಾಗವಹಿಸಿದಾಗ ಜಿಲ್ಲೆಯ ಪತ್ರಕರ್ತರ ತಂಡವೇ ಭಾಗವಹಿಸಿದೆ ಎನ್ನುವ ದೃಢವಿಶ್ವಾಸದೊಂದಿಗೆ ಗೆಲುವು ಸಾಧಿಸಿಕೊಂಡು ಬಂದಿದ್ದೀರಿ ಎಂದು ಶ್ಲಾಸಿದರು.

ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾಕೂಟ ಎಲ್ಲೇ ನಡೆಯಲಿ ಕಪ್ ವಾತ್ರ ಕೋಲಾರದ ಪತ್ರಕರ್ತರ ಸಂಕ್ಕೆ ಬರಬೇಕು ಎಂಬ ಬ್ರ್ತ್ಯಾಂಡ್ ಹೆಚ್ಚಬೇಕು ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂದ ಅಧ್ಯಕ್ಷ ಬಿ.ವಿ.ಗೋಪಿನಾಥ್ ವಾತನಾಡಿ, ಕೋಲಾರ ಪತ್ರಕರ್ತರ ಸಂಕ್ಕೆ ತನ್ನದೇ ಆದ ಬ್ರ್ತ್ಯಾಂಡ್ ಇದೆ. ಪ್ರತಿಭೆಗಳಿಗೆ ಸದಾ ಪ್ರೋತ್ಸಾಹ ಇರುತ್ತದೆ, ಸೋತಾಗಲೂ ಬೆನ್ನು ತಟ್ಟುವ ಮೂಲಕ ಸಂವು ಹುರಿದುಂಬಿಸುತ್ತದೆ ಎಂದು ಹೇಳಿದರು.

ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್.ಗಣೇಶ್ ವಾತನಾಡಿ, ಕೋಲಾರಕ್ಕೆ ಕ್ರೀಡೆಗಳಲ್ಲಿ ಗೆಲುವು ಕಟ್ಟಿಟ್ಟ ಬುತ್ತಿ, ಅದು ಹಿಂದಿನಿಂದಲೂ ಬಂದಿದೆ. ಉತ್ತಮ ಕ್ರೀಡಾಪಟುಗಳು ನಮ್ಮಲ್ಲಿದ್ದಾರೆ, ಆತ್ಮಸ್ಥೈರ್ಯದಿಂದ ಗೆದ್ದು ಬರಬೇಕು ಎಂದರು.

ಗಂಗರಾಜು, ಗಂಗಾಧರ್ ಪುರುಷೋತ್ತಮ ಶ್ರೀಕಾಂತ್, ವಿನೋದ್, ಸತೀಶ್, ವಿಜಯಕುವಾರ್, ಸಮೀರ್, ಗೋಪಿ, ಶ್ರೀನಿವಾಸ್ ಇದ್ದರು.

ಕಬಡ್ಡಿ ತಂಡಕ್ಕೆ 25 ಸಾವಿರ ರೂ. ಘೋಷಣೆ: ಇಂದಿನ ಕಾಲಟ್ಟದಲ್ಲಿ ವರದಿಗಾರಿಕೆ ವಿಧಾನ ಬದಲಾಗಿದೆ. ತಾಂತ್ರಿಕತೆ, ನೈಪುಣ್ಯತೆ ಅಗತ್ಯವಾಗಿದೆ, ನೀವು ಸಾಧನೆ ವಾಡಿದಾಗ ತಾನಾಗಿಯೇ ಗೌರವ, ಅವಕಾಶ ಹುಡುಕಿಕೊಂಡು ಬರುತ್ತವೆ. ರಾಜ್ಯಮಟ್ಟದ ಪತ್ರಿಕಾರಂಗದಲ್ಲಿ ಸದಾ ಕೋಲಾರದ ಧ್ವನಿ ಹೆಚ್ಚಿನದಾಗಿ ಕೇಳಿ ಬರುತ್ತಲೇ ಇದೆ. ಈ ಬೆಳವಣಿಗೆ ಆಶಾದಾಯಕವಾಗಿದ್ದು, ಹೀಗೆ ಮುಂದುವರಿಯಲಿ ಎಂದು ತಿಳಿಸಿದ ಪ್ರಭಾಕರ್, ಕಬಡ್ಡಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಜಿಲ್ಲಾತಂಡಕ್ಕೆ ವೈಯಕ್ತಿಕ 25 ಸಾವಿರ ರೂ. ಘೊಷಿಸಿದರು.