ಮಂಗಳೂರು: ಮಂಗಳೂರಿನಿಂದ ತಿರುವನಂತಪುರಂಗೆ ಹೋಗುತ್ತಿದ್ದ ರೈಲಿನಲ್ಲಿ ಬೆಂಕಿ ಅವಗಢ ಉಂಟಾಗಿದೆ. ಪ್ರಯಾಣಿಕರಿಗೆ ಯಾವುದೇ ಅಪಾಯ ಉಂಟಾಗಿರುವ ಬಗ್ಗೆ ಇದುವರೆಗೆ ಮಾಹಿತಿ ಇಲ್ಲ.
ಮಂಗಳೂರಿನಿಂದ ತೆರಳಿದ್ದ ಮಲಬಾರ್ ಎಕ್ಸ್‌ಪ್ರೆಸ್ ರೈಲು ಭಾನುವಾರ ಬೆಳಗ್ಗೆ ತಿರುವನಂತಪುರ ಸಮೀಪದ ವರ್ಕಳ ಎಂಬಲ್ಲಿ ತಲಪಿದಾಗ ಕೆಲವು ಪ್ರಯಾಣಿಕರಿಗೆ ಪಾರ್ಸೆಲ್ ವ್ಯಾನ್ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಚೈನ್ ಎಳೆದು ರೈಲು ನಿಲ್ಲಿಸಿದ್ದಾರೆ. ಇದರಿಂದಾಗಿ ದೊಡ್ಡ ಅಪಾಯವಾಗುವುದು ತಪ್ಪಿದೆ. ಬೆಂಕಿ ಇದ್ದ ಬೋಗಿಯನ್ನು ರೈಲಿನಿಂದ ಪ್ರತ್ಯೇಕಗೊಳಿಸಿ ಬೆಂಕಿ ಹಬ್ಬುವುದನ್ನು ತಪ್ಪಿಸಲಾಯಿತು.