ಕಲಬುರಗಿ: ಶ್ರೀ ಗುರು ಹೊಳೆ ಹುಚ್ಚೇಶ್ವರ ನಾಟ್ಯ ಸಂದಿಂದ ನಗರದ ಶ್ರೀ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ನಡೆಯುತ್ತಿರುವ ಗಂಡನಿಗೆ ತಕ್ಕ ಹೆಂಡತಿ ನಾಟಕ ಪ್ರರ‍್ಶನದ ೭೫ನೇ ಪ್ರಯೋಗದ ಸಂಭ್ರಮಾಚರಣೆಯನ್ನು ಶನಿವಾರ ಮಧ್ಯಾಹ್ನ ೨.೩೦ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಸಂದ ಅಧ್ಯಕ್ಷ ಪಾಪು ಕಲ್ಲೂರ ತಿಳಿಸಿದರು.
ಶರಣಬಸವೇಶ್ವರ ವಿದ್ಯಾರ‍್ಧಕ ಸಂದ ಕರ‍್ಯರ‍್ಶಿ ಬಸವರಾಜ ದೇಶಮುಖ ಗೌರವ ಉಪಸ್ಥಿತರಿರಲಿದ್ದು, ಜಿಲ್ಲಾಧಿಕಾರಿ ೌಜಿಯಾ ತರನ್ನುಮ್ ಅಧ್ಯಕ್ಷತೆ ವಹಿಸಲಿದ್ದಾರೆ. ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಉದ್ಘಾಟಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಮುಖರಾದ ರಮೇಶ ತಿಪ್ಪನೂರ, ಮಲ್ಲಿಕರ‍್ಜುನ ಮೇಳಕುಂದಿ, ಶಿವರಾಯ ಕಮಕನೂರ, ಸಂಜೀವ ಕಡಗಂಚಿ, ಮಾಲಾ ಕಣ್ಣಿ ಸೇರಿ ಗಣ್ಯರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಕುಟುಂಬ ಸಹಿತ ನೋಡಬಹುದಾದ, ಡಬ್ಬಲ್ ಮೀನಿಂಗ್ ಇಲ್ಲದ, ಅಶ್ಲೀಲ ಪದ ಬಳಕೆ ಇಲ್ಲದ ನಾಟಕವನ್ನು ಪ್ರರ‍್ಶಿಸುತ್ತಿದ್ದು, ದಿನೇ ದಿನೆ ನಾಟಕ ನೋಡಲು ಬರುವ ಮಹಿಳೆಯರ ಸಂಖ್ಯೆಯೂ ಹೆಚ್ಚುತ್ತಿದೆ. ಸಿನೆಮಾ ಥೇಟರ್ನಲ್ಲಿರುವ ಎಲ್ಲ ಸೌಲಭ್ಯಗಳನ್ನು ನಾಟಕ ಟೆಂಟ್ನಲ್ಲಿ ಕಲ್ಪಿಸಲಾಗಿದೆ. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಆಸನಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.