ಚಿಕ್ಕಮಗಳೂರಿನ ಎಂಇಎಸ್ ಕಾಲೇಜು ಸಭಾಂಗಣದಲ್ಲಿ ಖ್ಯಾತ ನಟಿ ಬಿ.ಸರೋಜಾದೇವಿ ನಟನೆಯ ಚಿತ್ರಗೀತೆಗಳ ಗಾಯನ ಪೂರ್ವಿ ಗಾನಯಾನ-೧೧೦ ಕಾರ್ಯಕ್ರಮವನ್ನು ಸುಗಮ ಸಂಗೀತ ಗಂಗಾದ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಉದ್ಘಾಟಿಸಿದರು. ದೀಪಕ್ ದೊಡ್ಡಯ್ಯ, ಎಂ.ಎಸ್.ಸುಧೀರ್, ರೂಪಾ ನಾಯ್ಕ, ಸುಮಾ ಪ್ರಸಾದ್, ಬಿ.ಎನ್.ವೆಂಕಟೇಶ್ ಮತ್ತಿತರರಿದ್ದರು. 
ಜಿಲ್ಲೆ

೭೦ ವರ್ಷ ಚಿತ್ರರಂಗವನ್ನಾಳಿದವರು ಬಿ. ಸರೋಜಾ ದೇವಿ

ಚಿಕ್ಕಮಗಳೂರು: ಸುದೀರ್ಘ ಎಪ್ಪತ್ತು ವರ್ಷಗಳ ಸುದೀರ್ಘ ಕಾಲ ತಮ್ಮ ವಿಶೇಷ ಅಭಿನಯದ ಮೂಲಕ ಚಲನಚಿತ್ರ ರಂಗವನ್ನು ಆಳಿ ಜನಮನವನ್ನು ಗೆದ್ದವರು ಬಿ.ಸರೋಜಾದೇವಿ ಎಂದು ಸುಗಮ ಸಂಗೀತ ಗಂಗಾದ ಅಧ್ಯಕ್ಷ ಹಾಗೂ ಮಕ್ಕಳ ತಜ್ಞ ಡಾ.ಜೆ.ಪಿ.ಕೃಷ್ಣೇಗೌಡ ಬಣ್ಣಿಸಿದರು.

ನಗರದ ಎಂಇಎಸ್ ಕಾಲೇಜು ಸಭಾಂಗಣದಲ್ಲಿ ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಯುರೇಕಾ ಅಕಾಡೆಮಿ, ಲಯನ್ಸ್ ಸಂಸ್ಥೆ ಹಾಗೂ ಮಲೆನಾಡು ವಿದ್ಯಾಸಂಸ್ಥೆಯ ಸಹಭಾಗಿತ್ವದಲ್ಲಿ ಖ್ಯಾತ ನಟಿ ಬಿ.ಸರೋಜಾದೇವಿ ನಟನೆಯ ಚಿತ್ರಗೀತೆಗಳ ಗಾಯನ ಕಾರ್ಯಕ್ರಮ ಪೂರ್ವಿ ಗಾನಯಾನ-೧೧೦ ಉದ್ಘಾಟಿಸಿ ಮಾತನಾಡಿದರು.

೮೭ ವರ್ಷಗಳ ಕಾಲ ಬದುಕಿದ್ದ ಅವರು ಕನ್ನಡಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದವರು. ದೇಶ ಕಂಡ ಅಪರೂಪದ ಮಹಾನ್ ಕಲಾವಿದೆ. ಪದ್ಮಶ್ರೀ, ಪದ್ಮಭೂಷಣ ಮತ್ತು ಜೀವಮಾನ ಸಾಧನೆಯ ಪ್ರಶಸ್ತಿ ಮಾತ್ರವಲ್ಲದೆ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದರು ಎಂದರು.

ಸರೋಜಾದೇವಿ ಕನ್ನಡ ಮಾತ್ರವಲ್ಲ, ತಮಿಳು, ತೆಲುಗು, ಹಿಂದಿ ಚಿತ್ರಗಳಲ್ಲಿ ಸಹ ತಮ್ಮ ನಟನಾ ಕೌಶಲ್ಯ ಪ್ರದರ್ಶಿಸಿದ್ದಾರೆ. ಪತಿ ಹರ್ಷ ಅವರನ್ನು ಕಳೆದುಕೊಂಡ ಬಳಿಕ ಒಂದು ವರ್ಷ ಮೌನಕ್ಕೆ ಶರಣಾಗಿದ್ದ ಅವರು, ಜನರ ಅಪೇಕ್ಷೆಯ ಮೇರೆಗೆ ಹಾಗೂ ಚಿತ್ರರಂಗದ ಪ್ರಮುಖರ ಒತ್ತಾಯದ ಮೇರೆಗೆ ಮತ್ತೆ ಚಿತ್ರರಂಗದಲ್ಲಿ ಮುಂದುವರಿದಿದ್ದರು. ಎಂಜಿಆರ್, ಶಿವಾಜಿ ಗಣೇಶನ್, ಜೆಮಿನಿ ಗಣೇಶನ್, ತೆಲುಗಿನಲ್ಲಿ ಎನ್.ಟಿ.ರಾಮರಾವ್, ನಾಗೇಶ್ವರರಾವ್ ಅವರಂತಹ ದಿಗ್ಗಜರ ಜೊತೆ ಅಭಿನಯಿಸಿದ್ದರು. ಕನ್ನಡ ಸಿನಿಮಾಗಳಲ್ಲಿ ಅವರ ನಟನೆಯಂತೂ ಅದ್ಭುತವಾದುದು ಎಂದು ಹೇಳಿದರು.

ಲಯನ್ಸ್ ಸಂಸ್ಥೆಯ ಪ್ರಾಂತೀಯ ಅಧ್ಯಕ್ಷ ಬಿ.ಎನ್.ವೆಂಕಟೇಶ್ ಮಾತನಾಡಿ, ಬಿ.ಸರೋಜಾದೇವಿ ಅವರು ಚಿತ್ರರಂಗದಲ್ಲಿ ಅತ್ಯಂತ ಹೆಸರುವಾಸಿಯಾದ ನಟಿ. ಅವರ ಅಭಿನಯದ ಗೀತೆಗಳ ಮೂಲಕ ನಾವಿಂದು ರಂಜನೆ ಪಡೆಯುತ್ತಿz್ದೆÃವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಯುರೇಕಾ ಅಕಾಡೆಮಿ ಸಂಸ್ಥಾಪಕ ದೀಪಕ್ ದೊಡ್ಡಯ್ಯ ಮಾತನಾಡಿ, ಬಿ.ಸರೋಜಾದೇವಿ ಅವರು ಈ ನಾಡು ಕಂಡAತಹ ಅತ್ಯದ್ಭುತ ನಟಿ. ಬದುಕಿದರೆ ಸರೋಜಾದೇವಿಯವರಂತೆ ಬದುಕಬೇಕು. ನಮ್ಮ ಜೀವಿತಾವಧಿಯಲ್ಲಿ ನಮ್ಮ ಬಗ್ಗೆ ಉತ್ತಮ ಹೆಸರು ಉಳಿಸಿಕೊಂಡು ನಾವು ಸತ್ತ ಮೇಲೂ ಜನರು ನಮ್ಮನ್ನು ನೆನೆಯುವಂತಿರಬೇಕು ಎಂದು ತಿಳಿಸಿದರು.

ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ನ ಅಧ್ಯಕ್ಷ ಎಂ.ಎಸ್.ಸುಧೀರ್ ಸ್ವಾಗತಿಸಿದರು. ರೂಪ ನಾಯ್ಕ್ ವಂದಿಸಿದರು. ಸುಮಾ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಅನಂತರ ಎಂ.ಎಸ್.ಸುಧೀರ್ ಸಾರಥ್ಯದಲ್ಲಿ ನಡೆದ ಗಾಯನದಲ್ಲಿ ಚೇತನ್‌ರಾಮ್, ಶ್ರೀಕಾಂತ್, ರೂಪ ಅಶ್ವಿನ್, ಅನುಷ, ರುಕ್ಸಾನಾ ಕಾಚೂರ್, ಮೇಘ, ಚೈತನ್ಯ, ಪೃಥ್ವಿಶ್ರೀ ಹಾಗೂ ಅದ್ವಿತ್‌ದೇಶ್ ಬಿ.ಸರೋಜಾದೇವಿ ನಟನೆಯ ಚಿತ್ರಗೀತೆಗಳಿಗೆ ಧ್ವನಿಯಾಗಿ ಸಂಗೀತ ಸುಧೆ ಹರಿಸಿದರು.