ಬಾಗಲಕೋಟೆ: ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಅಕ್ರಮವಾಗಿ ಮನೆಯಲ್ಲಿ ಸಂಗ್ರಹಿಸಿದ್ದ ೬೯.೧೨೦ ಲೀಟರ್ ಮದ್ಯವನ್ನು ಅಬಕಾರಿ ಇಲಾಖೆ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದೆ.
ಮುಧೋಳ ವಲಯ ವ್ಯಾಪ್ತಿಯ ಬೆಳಗಲಿ ಸರ್ಕಲ್ ರಸ್ತೆ ಗಾವಲು ಸಮಯದಲ್ಲಿ ಬಂದ ಖಚಿತ ಮಾಹಿತಿ ಮೇರೆಗೆ ಮನೆಯೊಂದರ ಮೇಲೆ ದಾಳಿ ನಡೆಸಿದಾಗ ಡಿಕೆ ಮತ್ತು ಒರಿಜಿನಲ್ ಚಾಯ್ಸ್ ವಿಸ್ಕಿಯ ಸೇರಿ ೮ ರಟ್ಟಿನ ಪೆಟ್ಟಿಗೆಗಳಲ್ಲಿ ೫೭೬ ಟೆಟ್ರಾ ಪ್ಯಾಕೆಟ್‌ನ ಒಟ್ಟು ೬೯.೧೨೦ ಲೀಟರ್ ಮದ್ಯ ಮತ್ತು ೧೫೬೦೦ ರಾಯಲ್ ಚಾಲೆಂಜ್ ಬೀರ್ ವಶಕ್ಕೆ ಪಡೆಯಲಾಗಿದೆ. ಜಪ್ತಿ ಮಾಡಿದ ಒಟ್ಟು ಮೌಲ್ಯ ೩೫,೬೦೦ ರೂ.ಗಳದ್ದಾಗಿದೆ. ಆರೋಪಿತ ಶಂಕರ ಗುರುಬಸಪ್ಪ ಬರಿಗಿಡದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.