ಜಿಲ್ಲೆ

೫ನೇ ಆರ್ಥಿಕ ಶಕ್ತಿಯಾದರೂ ದೇಶದ್ರೋಹಿಗಳ ಹೆಚ್ಚಳ

ಕಲಬುರಗಿ: ಭಾರತ ವಿಶ್ವದ ಐದನೇ ಆರ್ಥಿಕ ಶಕ್ತಿಯಾಗಿ ಬೆಳೆದಿದೆ. ಆದರೆ ಅಭಿವೃದ್ಧಿಗೆ ಮಾರಕವಾದ ಭ್ರಷ್ಟಾಚಾರ ಬುಡಸಮೇತ ಕಿತ್ತೊಗೆಯಲು ಜನ ಬದಲಾಗಬೇಕು. ದೇಶದ ೧೪೦ ಕೋಟಿ ಜನರಲ್ಲಿ ಶೇ.೧೦ ಪ್ರಾಮಾಣಿಕರಿದ್ದು, ಲಂಚ ಪಡೆಯುವ ದೇಶದ್ರೋಹಿಗಳು ಹೆಚ್ಚಾಗಿದ್ದಾರೆ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಕಳವಳ ವ್ಯಕ್ತಪಡಿಸಿದರು.

ಡಾ.ಎಸ್.ಎಂ. ಪಂಡಿತ ರಂಗಮAದಿರದಲ್ಲಿ ಲೋಕಾಯುಕ್ತ ಸಂಸ್ಥೆ ಮತು ಜಿ¯್ಲÁಡಳಿತ ಸಹಯೋಗದಡಿ ಶುಕ್ರವಾರ ಆಯೋಜಿಸಿದ್ದ ಸಾರ್ವಜನಿಕ ಕುಂದುಕೊರತೆಗಳ ಅಹವಾಲು ಸ್ವೀಕಾರ ಮತ್ತು ವಿಚಾರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ೧೪೦ ಕೋಟಿ ಜನರಲ್ಲಿ ಶೇ.೧೦ರಷ್ಟಿರುವ ಪ್ರಾಮಾಣಿಕರಿಂದ ಮಳೆ ಬೆಳೆ ಚೆನ್ನಾಗಿ ಆಗುತ್ತಿದೆ ಎಂದರು.

ಬ್ರಿಟಿಷರು ಒಡೆದಾಳುವ ನೀತಿ ಬಿಟ್ಟು ಹೋಗಿದ್ದು, ಕೆಲ ವಿದ್ಯಾವಂತರು ಇದನ್ನೇ ಬಂಡವಾಳ ಮಾಡಿಕೊಂಡು ಬದುಕುತ್ತಿದ್ದಾರೆ. ದೇಶಕ್ಕೆ ಇಂತಹವರಿAದಲೇ ಕಂಟಕವಿದೆ ವಿನಃ ಅಶಿಕ್ಷಿತರಿಂದಲ್ಲ. ದುಡ್ಡು ಕೊಡುವವರಿದ್ದಾಗ ತೆಗೆದುಕೊಳ್ಳುವವರು ಇz್ದೆÃ ರ‍್ತಾರೆ. ಸರ್ಕಾರಿ ಕೆಲಸಕ್ಕೆ ಸಾರ್ವಜನಿಕರು ದುಡ್ಡು ಕೊಡಬಾರದು ಎಂದು ಸಲಹೆ ನೀಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಸ್ತುತ ಶಾಸಕಾಂಗ, ಕಾರ್ಯಾಂಗ ನಿಶಕ್ತವಾಗಿವೆ. ನ್ಯಾಯಾಂಗ, ಪತ್ರಿಕಾ ರಂಗದ ಮೇಲೆ ಜನರ ಅಲ್ಪಸ್ವಲ್ಪ ವಿಶ್ವಾಸ ಉಳಿದಿದೆ. ಇತ್ತೀಚೆಗೆ ಸರ್ಕಾರದ ೪ನೇ ಅಂಗ ಎಂದು ಕರೆಸಿಕೊಳ್ಳುವ ಮಾಧ್ಯಮ ಸಹ ನಿಶಕ್ತವಾಗುತ್ತಿದೆ. ಕತ್ತಿಗಿಂತ ಲೇಖನಿ ಹರಿತವಾಗಿದೆ. ಪತ್ರರ್ಕತರು ಸಮಾಜ ತಿದ್ದುವ ಕೆಲಸ ಮಾಡಬೇಕಿದೆ. ಭ್ರಷ್ಟಾಚಾರ ವಿರುದ್ಧ ಜನರ ಧ್ವನಿಗೆ ಬಲ ನೀಡಬೇಕಿದೆ ಎಂದರು.

ದೇಶದೊಳಗಿನ ಆಂತರಿಕ ಶತ್ರುಗಳನ್ನು ಮಟ್ಟ ಹಾಕಬೇಕಾದ ಜವಾಬ್ದಾರಿ ಪೊಲೀಸ್ ಇಲಾಖೆ ಮೇಲಿದೆ. ಪುಢಾರಿ ನಾಯಕರ ಮುಂದೆ ಪೊಲೀಸರು ತಲೆತಗ್ಗಿಸಿ ನಿಲ್ಲುತ್ತಿರುವುದು ನೋವು ತಂದಿದೆ. ಪೊಲೀಸರೇ ನೀವು ತಲೆ ತಗ್ಗಿಸಿದರೆ ರಾಷ್ಟç ಲಾಂಛನ ತಲೆ ತಗ್ಗಿಸಿದಂತೆ. ಪಾರದರ್ಶಕವಾಗಿ ಕೆಲಸ ಮಾಡಿ ಯಾವ ಕಾರಣಕ್ಕೂ ಯಾರಿಗೂ ತಲೆ ತಗ್ಗಿಸಿಬೇಡಿ ಎಂದು ನ್ಯಾ.ಬಿ.ವೀರಪ್ಪ ಕಿವಿಮಾತು ಹೇಳಿದರು.

ಸರ್ಕಾರಿ ನೌಕರರು ಲಂಚಕ್ಕೆ ಕೈಯೊಡ್ಡಿದರೆ ಬದುಕಿನಲ್ಲಿ ನೆಮ್ಮದಿ ಕಳೆದಕೊಳ್ಳುವಿರಿ. ಕೋಟಿ ಸಂಪಾದಿಸಿದ್ದರೂ ಹೊಟ್ಟೆ ತುಂಬ ಊಟ ನಿಮ್ಮದಾಗಲ್ಲ. ರಾತ್ರಿ ನಿz್ದÉ ಬರಲ್ಲ. ಲಂಚ ಕೊಟ್ಟವರ ಶಾಪ ಸುಮ್ಮನೆ ಬಿಡಲ್ಲ. ಕಷ್ಟಪಟ್ಟು ಮಾಡಿದ ಸಂಪಾದನೆಯಿAದ ಮಾತ್ರ ನೆಮ್ಮದಿ ಜೀವನ ಸಾಧ್ಯ ಎಂದರು.

ಪ್ರಭಾರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎ.ವಿ.ಶ್ರೀನಾಥ, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ., ಎಸ್‌ಪಿ ಅಡ್ಡೂರು ಶ್ರೀನಿವಾಸಲು, ಜಿಪಂ ಸಿಇಒ ಭಂವರ್‌ಸಿAಗ್ ಮೀನಾ, ಪಾಲಿಕೆ ಆಯುಕ್ತ ಭುವನೇಶ ಪಾಟೀಲ್, ಡಿಸಿಎಫ್ ಸುಮಿತ್ ಪಾಟೀಲ್, ಲೋಕಾಯುಕ್ತ ಸಂಸ್ಥೆ ಅಪರ ನಿಬಂಧಕರಾದ ಜೆ.ವಿ. ವಿಜಯಾನಂದ, ಗಿರೀಶ ಭಟ್ ಕೆ., ಅರವಿಂದ ಎನ್.ವಿ., ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ಶ್ರೀನಿವಾಸ ನವಲೆ, ಲೋಕಾಯುಕ್ತ ಎಸ್‌ಪಿ ಬಿ.ಕೆ. ಉಮೇಶ, ಕೆಕೆಆರ್‌ಟಿಸಿ ಎಂಡಿ ಎಂ.ರಾಚಪ್ಪ, ಜೆಸ್ಕಾಂ ಎಂಡಿ ರವೀಂದ್ರ ಕರಲಿಂಗಣ್ಣನವರ ಇತರರಿದ್ದರು. ಅಪರ ಜಿ¯್ಲÁಧಿಕಾರಿ ರಾಯಪ್ಪ ಹುಣಸಗಿ ಸ್ವಾಗತಿಸಿದರು.