ಮಡಿಕೇರಿ: ಕೊಡವ ಕುಟುಂಬಗಳ ನಡುವಿನ ೨೫ನೇ ವರ್ಷದ ಮುದ್ದಂಡ ಕಪ್ ಹಾಕಿ ಪಂದ್ಯಾಟದ ೫ಎ ಸೈಡ್ ಮಹಿಳಾ ಪಂದ್ಯಾವಳಿಯಲ್ಲಿ ಮಂಗಳವಾರ ೧೭ ತಂಡಗಳು ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು.
ಮಡಿಕೇರಿಯ ಫೀ.ಮಾ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನಲ್ಲಿ ನಾಟೋಳಂಡ ಮತ್ತು ಮುದ್ದಂಡ ನಡುವಿನ ಪಂದ್ಯದಲ್ಲಿ ನಿಗಧಿತ ಅವಧಿಯಲ್ಲಿ ಎರಡೂ ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ ೨-೧ ಗೋಲುಗಳ ಅಂತರದಲ್ಲಿ ನಾಟೋಳಂಡ ಜಯ ಸಾಧಿಸಿತು. ಆದೇಂಗಡ ಮತ್ತು ಬೊಳ್ಳೇರ ನಡುವಿನ ಪಂದ್ಯದಲ್ಲಿ ೨-೧ ಗೋಲುಗಳ ಅಂತರದಲ್ಲಿ ಆದೇಂಗಡ ಗೆಲುವು ದಾಖಲಿಸಿತು. ಆದೇಂಗಡ ಪರ ತಶ್ವಿಕ ೨ ಗೋಲು ದಾಖಲಿಸಿದರು.
ಕಂಬೀರಂಡ ಮತ್ತು ಮಚ್ಚಮಾಡ ನಡುವಿನ ಪಂದ್ಯದಲ್ಲಿ ೨-೧ ಗೋಲುಗಳ ಅಂತರದಲ್ಲಿ ಕಂಬೀರಂಡ ತಂಡ ಜಯ ಸಾಧಿಸಿತು. ಕಂಬೀರಂಡ ಪರ ಮಿಲನಾ ಹಾಗೂ ಪೊನ್ನಮ್ಮ ತಲಾ ೧ ಗೋಲು ದಾಖಲಿಸಿದರು. ಮಚ್ಚಮಾಡ ಪರ ಪಾಯಲ್ ೧ ಗೋಲು ಬಾರಿಸಿದರು. ತೀತಿರ ಮತ್ತು ಕೂತಂಡ ನಡುವಿನ ಪಂದ್ಯದಲ್ಲಿ ೩-೦ ಗೋಲುಗಳ ಅಂತರದಲ್ಲಿ ತೀತಿರ ತಂಡ ಗೆಲುವು ದಾಖಲಿಸಿತು. ತೀತಿರ ಸಿಂಚನ್ ಹ್ಯಾಟ್ರಿಕ್ ಗೋಲು ಬಾರಿಸಿ ಗಮನ ಸೆಳೆದರು. ಮುಕ್ಕಾಟಿರ (ದೊಡ್ಡಪುಲಿಕೋಟು) ಮತ್ತು ತೀತರಮಾಡ ನಡುವಿನ ಪಂದ್ಯದಲ್ಲಿ ೧-೦ ಗೋಲುಗಳ ಅಂತರದಲ್ಲಿ ಮುಕ್ಕಾಟಿರ ಜಯ ಸಾಧಿಸಿತು. ಮುಕ್ಕಾಟಿರ ಪರ ರೇಷ್ಮ ಗೋಲು ಬಾರಿಸಿದರು.
ಸಣ್ಣುವಂಡ ಮತ್ತು ಕೋಡಿಮಣಿಯಂಡ ನಡುವಿನ ಪಂದ್ಯದಲ್ಲಿ ನಿಗಧಿತ ಅವಧಿಯಲ್ಲಿ ತಲಾ ೧ ಗೋಲುಗಳ ಮೂಲಕ ಎರಡೂ ತಂಡಗಳು ಸಮಬಲ ಸಾಧಿಸಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ ೧-೦ ಗೋಲುಗಳ ಅಂತರದಲ್ಲಿ ಸಣ್ಣವಂಡ ತಂಡ ಜಯ ಸಾಧಿಸಿತು. ಮಂಡೇಪಂಡ ಮತ್ತು ಗುಡ್ಡಂಡ ನಡುವಿನ ಪಂದ್ಯದಲ್ಲಿ ೨-೧ ಗೋಲುಗಳ ಅಂತರದಲ್ಲಿ ಗುಡ್ಡಂಡ ತಂಡ ಜಯ ಸಾಧಿಸಿತು. ಶಿವಚಾಳಿಯಂಡ ಮತ್ತು ಪಾಡೆಯಂಡ ನಡುವಿನ ಪಂದ್ಯದಲ್ಲಿ ೫-೦ ಗೋಲುಗಳ ಅಂತರದಲ್ಲಿ ಶಿವಚಾಳಿಯಂಡ ಗೆಲುವು ದಾಖಲಿಸಿತು. ಅಮ್ಮಣಿಚಂಡ ಮತ್ತು ಪಾಡೆಯಂಡ ನಡುವಿನ ಪಂದ್ಯದಲ್ಲಿ ೧-೦ ಗೋಲುಗಳ ಅಂತರದಲ್ಲಿ ಪಾಡೆಯಂಡ ಜಯ ಸಾಧಿಸಿತು.
ಪೊರುಕೊಂಡ ಮತ್ತು ಬೊಟ್ಟೋಳಂಡ ನಡುವಿನ ಪಂದ್ಯದಲ್ಲಿ ೧-೦ ಗೋಲುಗಳ ಅಂತರದಲ್ಲಿ ಪೊರುಕೊಂಡ ತಂಡ ಗೆಲುವು ಸಾಧಿಸಿತು. ಪೊರುಕೊಂಡ ತಂಡದ ಪರ ಗ್ರೀಷ್ಮ ಗೋಲು ದಾಖಲಿಸಿದರು. ಬೊಟ್ಟೋಳಂಡ ಪ್ರಾಚಿ ಮಾದಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಸಿದ್ದಂಡ ಮತ್ತು ಕಲಿಯಂಡ ನಡುವಿನ ಪಂದ್ಯದಲ್ಲಿ ೨-೦ ಗೋಲುಗಳ ಅಂತರದಲ್ಲಿ ಕಲಿಯಂಡ ತಂಡ ಜಯ ಸಾಧಿಸಿತು. ಕಲಿಯಂಡ ಪರ ತೇಜಲ್ ೨ ಗೋಲು ಬಾರಿಸಿದರು. ಪಟ್ಟಡ ಮತ್ತು ಚೆಯ್ಯಂಡ ನಡುವಿನ ಪಂದ್ಯದಲ್ಲಿ ೪-೦ ಗೋಲುಗಳ ಅಂತರದಲ್ಲಿ ಚೆಯ್ಯಂಡ ತಂಡ ಜಯ ಸಾಧಿಸಿತು. ಚೆಯ್ಯಂಡ ಪರ ಭಾಗ್ಯಶ್ರೀ ೨, ದೇಚಮ್ಮ ಹಾಗೂ ದೀಕ್ಷ ತಲಾ ೧ ಗೋಲು ಬಾರಿಸಿದರು. ಪಟ್ಟಡ ವೀಣಾ ಮೊಣ್ಣಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಮುಕ್ಕಾಟಿರ (ದೊಡ್ಡಪುಲಿಕೋಟು) ಮತ್ತು ಪರದಂಡ ನಡುವಿನ ಪಂದ್ಯದಲ್ಲಿ ಸಡನ್ ಡೆತ್‌ನಲ್ಲಿ ೧-೦ ಗೋಲುಗಳ ಅಂತರದಲ್ಲಿ ಮುಕ್ಕಾಟಿರ ತಂಡ ಜಯ ಸಾಧಿಸಿತು. ಮುಕ್ಕಾಟಿರ ಪರ ಸ್ಮಿತಾ ಸುಬ್ಬಯ್ಯ ೧ ಗೋಲು ದಾಖಲಿಸಿದರು. ಪರದಂಡ ಮಾನ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಗುಡ್ಡಂಡ ಮತ್ತು ಸಣ್ಣವಂಡ ನಡುವಿನ ಪಂದ್ಯದಲ್ಲಿ ಸಡನ್ ಡೆತ್‌ನಲ್ಲಿ ೧-೦ ಗೋಲುಗಳ ಅಂತರಲ್ಲಿ ಸಣ್ಣವಂಡ ಜಯ ಸಾಧಿಸಿತು. ಗುಡ್ಡಂಡ ಪರ ಗಾಯನ ಎಸ್. ಹಾಗೂ ಸಣ್ಣವಣ್ಣ ಪರ ಇಶಿತಾ ತಲಾ ೧ ಗೋಲು ಬಾರಿಸಿದರು. ಗುಡ್ಡಂಡ ಸುಮಾ ಬೋಪಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.