ಜಿಲ್ಲೆ

೩೭೧(ಜೆ) ಸಚಿವ ಪ್ರಿಯಾಂಕ್​ ಜತೆ ಸಮಾಲೋಚನೆ

ಕಲಬುರಗಿ: ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್​ ರ‍್ಖಗೆ ಅವರನ್ನು ನಗರದಲ್ಲಿ ಬುಧವಾರ ಭೇಟಿ ಮಾಡಿದ ಕಲ್ಯಾಣ ರ‍್ನಾಟಕ ಹೋರಾಟ ಸಮಿತಿ ಪದಾಧಿಕಾರಿಗಳು ಸರ‍್ಪಕ ೩೭೧(ಜೆ) ಪರಿಣಾಮಕಾರಿ ಅನುಷ್ಠಾನ ಕುರಿತು ಸಮಾಲೋಚನೆ ನಡೆಸಿದರು.

ಸಮಿತಿ ಗೌರವಾಧ್ಯಕ್ಷ ಬಸವರಾಜ ದೇಶಮುಖ, ಅಧ್ಯಕ್ಷ ಡಾ.ಲಕ್ಷ$್ಮಣ ದಸ್ತಿ, ಪ್ರೊ.ಆರ್​.ಕೆ. ಹುಡಗಿ ಇತರರು ೩೭೧(ಜೆ) ಅಡಿ

ವಿಶೇಷ ಸ್ಥಾನಮಾನ ದೊರೆತು ೧೦ ರ‍್ಷವಾದ ಹಿನ್ನಲೆಯಲ್ಲಿ ಸಾಧಕ&ಬಾಧಕ, ಸಮಸ್ಯೆ&ಸವಾಲು ಮತ್ತು ಪರಿಹಾರ ಕುರಿತು ರ‍್ಚಿಸಿದರು. ೩೭೧(ಜೆ) ದಶಮಾನೋತ್ಸವಕ್ಕೆ ಸಂಬಂಧಿಸಿದಂತೆ ಏ.೧೯ರಂದು ಕೈಗೊಂಡ ರ‍್ನಿಣಯದಂತೆ ಕಕದ ಏಳು ಜಿಲ್ಲೆಗಳಲ್ಲಿ ವಿಚಾರ ಸಂಕಿರಣ, ಕರ‍್ಯಾಗಾರ ನಡೆಸುವ ಸುದೀರ್ ಸಮಾಲೋಚನೆ ನಡೆಸಿ ಭಾಗವಹಿಸುವಂತೆ ಕೋರಿದರು.

ನನೆಗುದಿಗೆ ಬಿದ್ದಿರುವ ಆಯಾ ಇಲಾಖೆ ನೇಮಕಾತಿ ಬಗ್ಗೆ ಶ್ರೀ ಷರತ್ತುಬದ್ಧ ಆದೇಶ ನೀಡಿ ಸೇವೆಗೆ ಅವಕಾಶ ಒದಗಿಸಿಕೊಡುವುದಾಗಿ ಸಚಿವ ರ‍್ಖಗೆ ಭರವಸೆ ನೀಡಿದರು. ಪ್ರಮುಖರಾದ ಡಾ.ಬಸವರಾಜ ಕುಮ್ನೂರ, ಡಾ.ಮಾಜಿದ್​ ದಾಗಿ, ಶಿವಕುಮಾರ, ಅಸ್ಲಂ ಚೌಂಗೆ, ಶಿವಶರಣ ಬಿರಾದಾರ್​ ಇತರರಿದ್ದರು.