ಜಿಲ್ಲೆ

೩.೨೭ ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆ

ಮುನವಳ್ಳಿ: ಪಟ್ಟಣದ ಪುರಸಭೆ ಸಭಾಭವನದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಪುರಸಭೆ ಅಧ್ಯಕ್ಷ ಸಿ.ಬಿ. ಬಾಳಿ ೨೦೨೫-೨೬ನೇ ಸಾಲಿನಲ್ಲಿ ೧೫.೮೪ ಕೋಟಿ ರೂ. ಜಮೆ ಹಾಗೂ ೧೫.೮೧ ಕೋಟಿ ರೂ. ಮೊತ್ತ ಖರ್ಚಿನೊಂದಿಗೆ ೩.೨೭ ಲಕ್ಷ ರೂ. ಮೊತ್ತದ ಉಳಿತಾಯ ಬಜೆಟ್ ಮಂಡಿಸಿದರು.

ಪುರಸಭೆ ನಿಽಯಡಿ ಪರಿಶಿಷ್ಟರ ಕಲ್ಯಾಣಕ್ಕಾಗಿ ೩.೪೭ ಲಕ್ಷ ರೂ., ಇತರ ಹಿಂದುಳಿದ ವರ್ಗದ ಕಲ್ಯಾಣಕ್ಕಾಗಿ ೧.೦೪ ಲಕ್ಷ ರೂ., ಅಂಗವಿಕಲರ ಕಲ್ಯಾಣಕ್ಕಾಗಿ ೭೨ ಸಾವಿರ ಹಾಗೂ ಎಸ್‌ಎಫ್‌ಸಿ ನಿಧಿಯಡಿ ಪರಿಶಿಷ್ಟರಿಗೆ ೧೬ ಲಕ್ಷ ರೂ., ಇತರ ಹಿಂದುಳಿದ ವರ್ಗಗಳಿಗೆ ೩.೫೦ ಲಕ್ಷ ರೂ. ಅಂಗವಿಕಲರಿಗಾಗಿ ೧.೯೫ ಲಕ್ಷ ರೂ. ಕಾಯ್ದಿರಿಸಲಾಗಿದೆ. ರಸ್ತೆ, ಚರಂಡಿ ಕಾಮಗಾರಿಗೆ ೫೬.೮೦ ಲಕ್ಷ ರೂ., ನೀರು ಸರಬರಾಜು ಹಾಗೂ ಘನತ್ಯಾಜ್ಯ ವಿಲೇವಾರಿಗೆ ೮೨.೦೦ ಲಕ್ಷ ರೂ., ಸಿಬ್ಬಂದಿ ವೇತನ ೧.೮೬ ಕೋಟಿ ರೂ., ವಿದ್ಯುತ್ ಬೀದಿದೀಪ ಹಾಗೂ ನೀರು ಸರಬರಾಜು ವಿದ್ಯುಚ್ಛಕ್ತಿ ವೆಚ್ಚ ೮೭ ಲಕ್ಷ ರೂ., ಸದಸ್ಯರ ಭತ್ಯೆ ೫ ಲಕ್ಷ ರೂ., ಇತರ ವೆಚ್ಚಗಳು ೮೬ ಲಕ್ಷ ರೂ. ಅಂದಾಜು ಖರ್ಚು ಮಾಡಲು ಸಭೆಯಲ್ಲಿ ವಿವರಣೆ ನೀಡಿ ಮುಂಗಡ ಪತ್ರಕ್ಕೆ ಅನುಮೋದನೆ ಪಡೆಯಲಾಯಿತು. ಸದಸ್ಯ ಸುಭಾಸ ಗೀದಿಗೌಡ್ರ ಮಾತನಾಡಿ, ಪಟ್ಟಣದ ಅಪೂರ್ಣ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಆಗ್ರಹಿಸಿದರು.

ಸಭೆಯಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ಹಾಗೂ ಪುರಸಭೆಯ ಆದಾಯ ಹೆಚ್ಚಿಸುವ ಹಾಗೂ ಇತರ ವಿಷಯಗಳ ಕುರಿತು ಚರ್ಚೆ ನಡೆಯಿತು.

ಪುರಸಭೆ ಉಪಾಧ್ಯಕ್ಷೆ ಕೆ.ಎಚ್. ಹಿರೇಮೇತ್ರಿ, ಸದಸ್ಯರಾದ ಮೀರಾಸಾಬ್‌ ವಟ್ನಾಳ, ಡಿ.ಡಿ.ಕಿನ್ನೂರಿ, ಈಶ್ವರ ಕರೀಕಟ್ಟಿ, ಪ್ರಕಾಶ ನಲವಡೆ, ಗುರುಶಾಂತ ಚಂದರಗಿ, ಶ್ರೀಶೈಲ ನೇಗಿನಾಳ, ಸಮೀವುಲ್ಲಾ ಚೂರಿಖಾನ್, ಬಸವರಾಜ ದೊಡಮನಿ, ಶೀತಲ ಗೋಮಾಡಿ, ಲಲಿತಾ ರೇವಡಗಿ, ರೇವತಿ ಬಾರಕೇರ, ಬಸವರಾಜ ದೊಡಮನಿ, ಸಲೀಂಮಲ್ಲಿಕ ಬೆಳವಡಿ, ಎಚ್.ಕೆ. ದನದಮನಿ, ಕಸ್ತೂರಿ ಗಂಗಣ್ಣವರ, ಪುರಸಭೆ ಮುಖ್ಯಾಧಿಕಾರಿ ಎಂ.ಎಂ. ತಿಮ್ಮಾಣಿ, ಕಂದಾಯ ಅಧಿಕಾರಿ ಅನಿಲ ಗಿಡ್ನಂದಿ, ಪುರಸಭೆ ಸಿಬ್ಬಂದಿ ಇದ್ದರು.