ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲೂಕಿನ ಕಾಜಿ ಬೀಳಗಿ ಗ್ರಾಮದಲ್ಲಿ ಅಬಕಾರಿ ಇಲಾಖೆ ಅಽಕಾರಿಗಳು ದಾಳಿ ನಡೆಸಿ ೨೯ ಪಾಲಿಥೀನ್ ಬ್ಯಾಗ್‌ಗಳಲ್ಲಿ ಸಂಗ್ರಹಿಸಿದ್ದ ಅಂದಾಜು ೩೦.೮೮೧ ಕಿ.ಗ್ರಾಂ ಹದ ಭರಿತ ಗಾಂಜಾ ವಶಕ್ಕೆ ಪಡೆದಿರುವ ಘಟನೆ ಮಂಗಳವಾರ ನಡೆದಿದೆ.
ಅಬಕಾರಿ ಆಯುಕ್ತರ ಮಾರ್ಗದರ್ಶನದಲ್ಲಿ ಕಾಜಿ ಬೀಳಗಿ ಗ್ರಾಮದ ತೋಟದ ಮನೆಯೊಂದರ ಶೆಡ್‌ನಲ್ಲಿ ಅಂದಾಜು ೩ ಲಕ್ಷ ರೂ. ಮೌಲ್ಯದ ಗಾಂಜಾ ವಶಕ್ಕೆ ಪಡೆದಿದ್ದಾರೆ. ಸಂಜು ಮಲ್ಲಪ್ಪ ಮಾಳಶೆಟ್ಟಿ ಬಂಽತ ವ್ಯಕ್ತಿ. ದಾಳಿಯಲ್ಲಿ ಜಮಖಂಡಿ ವಲಯ ಅಬಕಾರಿ ನಿರೀಕ್ಷಕ ಆದಿನಾಥ ನರಸಗೊಂಡ, ಸಿಬ್ಬಂದಿಗಳಾದ ಮಹ್ಮದ್ ರಫಿಕ್ ಭಾಗವಾನ, ಆನಂದ ಬಾಗಿ, ಮಹೇಶ ಇರಳಿ, ಹನುಮಂತ ಹಸರೆಡ್ಡಿ, ಕಿರಣ ವಡೆಯರ, ಪ್ರಕಾಶ ಮುಧೋಳ ದಾಳಿಯಲ್ಲಿ ಇದ್ದರು.