ಬಾಗಲಕೋಟೆ ನಗರದಲ್ಲಿ ರೈಲ್ವೆ ಇಲಾಖೆಯ ಭದ್ರತಾ ಅಽಕಾರಿ ಎ.ಕೆ.ಜೈನ, ಜನ ಸಂಪರ್ಕ ಅಽಕಾರಿ ಸಂತೋಷ ವರ್ಮಾ ಒಳಗೊಂಡ ತಂಡಕ್ಕೆ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ದಿನ ಖಾಜಿ, ಮುಖಂಡರಾದ ಶ್ರೀನಿವಾಸ ಬಳ್ಳಾರಿ, ಸುಭಾಸ ಶಿರಬೂರ, ಗುರುರಾಜ ಉದಪುಡಿ ಮಂಗಳವಾರ ಭೇಟಿಯಾಗಿ ಮನವಿ ಸಲ್ಲಿಸಿದರು. 
ಜಿಲ್ಲೆ

೨೦೨೫ ಕ್ಕೆ ಕುಡಚಿ ರೈಲು ಯೋಜನೆ ಪೂರ್ಣಗೊಳಿಸಿ

ಬಾಗಲಕೋಟೆ: ಬಾಗಲಕೋಟೆಯಿಂದ ಲೋಕಾಪುರ ಖಜ್ಜಿಡೋಣಿ ರೈಲ್ವೆ ಮಾರ್ಗದ ಭದ್ರತಾ ಪರಿಶೀಲಣೆಗೆ ಆಗಮಿಸಿದ ರೈಲ್ವೆ ಇಲಾಖೆಯ ಭದ್ರತಾ ಅಽಕಾರಿ ಎ.ಕೆ.ಜೈನ, ಜನ ಸಂಪರ್ಕ ಅಽಕಾರಿ ಸಂತೋಷ ವರ್ಮಾ ಒಳಗೊಂಡ ತಂಡಕ್ಕೆ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ದಿನ ಖಾಜಿ, ಮುಖಂಡರಾದ ಶ್ರೀನಿವಾಸ ಬಳ್ಳಾರಿ, ಸುಭಾಸ ಶಿರಬೂರ, ಗುರುರಾಜ ಉದಪುಡಿ ಮಂಗಳವಾರ ಭೇಟಿಯಾಗಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕುತುಬುದ್ದಿನ ಖಾಜಿ ಮಾತನಾಡಿ, ಹೋರಾಟದ ಪ್ರತಿ-Àಲವಾಗಿ ಅನುಷ್ಠಾನಕ್ಕೆ ಬಂದ ಕುಡಚಿ ರೈಲು ಮಾರ್ಗ ಲೋಕಾಪುರಕ್ಕೆ ತಲುಪಿದ್ದು, ಸಂತೋಷ ಉಂಟು ಮಾಡಿದೆ. ಅದರಂತೆ ಲೋಕಾಪೂರದಿಂದ ಪ್ರಥಮವಾಗಿ ಮೈಸೂರು-ಬಾಗಲಕೋಟೆ ಬಸವ ಎಕ್ಸಪ್ರೆಸ್ ರೈಲು ಲೋಕಾಪುರವರೆಗೆ ವಿಸ್ತರಿಸಿ ಉದ್ಘಾಟನಾ ರೈಲಾಗಿ ಪರಿಗಣಿಸಬೇಕು. ಅದರಂತೆ ಲೋಕಾಪುರ- ಸೋಲಾಪುರ, ಲೋಕಾಪುರ -ಹುಬ್ಬಳ್ಳಿ ಎರಡು ಪ್ಯಾಸೆಂಜರ್ ಹೊಸ ರೈಲುಗಳು ಪ್ರಾರಂಬಿಸಬೇಕು ಎಂದು ಮನವಿ ಮಾಡಿದರು.

ಇನ್ನು ವಿಜಯಪುರ, ಮುಂಬಯಿ ವಿಜಯಪುರ- ರಾಯಚೂರ ಈ ಎರಡು ರೈಲುಗಳನ್ನು ಲೋಕಾಪುರವರೆಗೆ ವಿಸ್ತರಿಸಬೇಕು. ಈಗಾಗಲೆ ತಾವುಗಳು ಮಾರ್ಗದ ಭದ್ರತಾ ಸಮಿಕ್ಷೆ ನಡೆಸಿ ತೃಪ್ತಿಪಡಿಸಿದ್ದು, ಅದರಂತೆ ಜನರ ಬೇಡಿಕೆಯಂತೆ ಪ್ಯಾಸೆಂಜರ್ ರೈಲುಗಳು ಸಂಚರಿಸುವಂತೆ ಮಾಡಬೇಕು. ರಾಜ್ಯ ಸರ್ಕಾರ ಸಾರ್ವಜನಿಕರಿಗೆ ರೈಲು ಸೌಲಭ್ಯ ಸಿಗಲೆಂದು ಉಚಿತ ಭೂಮಿ ರೈಲ್ವೆ ಇಲಾಖೆಗೆ ನೀಡುತ್ತಿದೆ. ಅದರಂತೆ ತಾವುಗಳು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ನಂತರ ಸರಕು ಸಾಗಾಣಿಕೆ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಕಳೆದ ಒಂದು ದಶಕದಿಂದ ಆಮೆಗತಿಯಲ್ಲಿ ಸಾಗಿದ ಕುಡಚಿ ರೈಲು ಮಾರ್ಗದ ಕಾಮಗಾರಿಯು ಚುರುಕುಗೊಳಿಸಿ ಮುಧೋಳ, ಜಮಖಂಡಿ, ರಬಕವಿ, ಬನಹಟ್ಟಿ, ತೇರದಾಳ, ಹಾರುಗೇರಿ-ಕುಡಚಿವರೆಗೂ ಏಕಕಾಲಕ್ಕೆ ಕಾಮಗಾರಿ ಪ್ರಾರಂಭಿಸಬೇಕು. ಇಲ್ಲದಿದ್ದಲ್ಲಿ ಜಿ¯್ಲÁದ್ಯಂತ ಉಗ್ರ ಸ್ವರೂಪದ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.

೨೦೧೦ರಲ್ಲಿ ಅನುಷ್ಠಾನಕ್ಕೆ ಬಂದ ಈ ಮಾರ್ಗ ೨೦೧೭ ರಲ್ಲಿ ಪೂರ್ಣಗೊಳ್ಳಬೇಕಾಗಿತ್ತು. ರೈಲ್ವೆ ಇಲಾಖೆ ಮತ್ತು ಕೆಂದ್ರ, ರಾಜ್ಯ ಸರ್ಕಾರ, ಜನಪ್ರತಿನಿಽಗಳ ನಿರ್ಲಕ್ಷ್ಯದಿಂದ ಯೋಜನೆ ಕುಂಟುತ್ತಾ ಸಾಗಿದೆ. ರಾಜ್ಯ ಸರ್ಕಾರ ಈ ಯೋಜನೆಗೆ ಅಗತ್ಯ ಇರುವ ಭೂಮಿಯನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಿದೆ. ಈಗಲಾದರೂ ಕಾಮಗಾರಿ ಚುರುಕುಗೊಳಿಸಿ ಪ್ರತಿ ೧೦ ಕಿ.ಮೀಟರಕ್ಕೆ ಒಬ್ಬ ಗುತ್ತಿಗೆದಾರರನ್ನು ನೇಮಕ ಮಾಡಿ ರೈಲ್ವೆ ಇಲಾಖೆಯ ಭರವಸೆಯಂತೆ ೨೦೨೫ರ ಒಳಗಾಗಿ ಯೋಜನೆ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

ಮುಖಂಡರಾದ ಮುತ್ತಪ್ಪ ಕೋಮಾರ, ಗುಲಾಬಸಾಬ ಅತ್ತಾರ (ಲೋಕಾಪುರ), ಕುಮಾರ ಕಡಬಳ್ಳವರ, ಮೈನುದ್ದಿನ ಖಾಜಿ, ಮಹಾಂತೇಶ ಕಡಕೋಳಮಠ, ಭೀಮಪ್ಪಾ ಮಾಳಗಿ ಇತರರು ಇದ್ದರು.