ಚಿಕ್ಕೋಡಿ: ಪಟ್ಟಣದಲ್ಲಿ ರಾಜ್ಯ ಗೊಲ್ಲ(ಯಾದವ) ಹಣಬರ ಸಂಘ ಶತಮಾನೋತ್ಸವ ಮತ್ತು ಯಾದವಾನಂದ ಸ್ವಾಮೀಜಿ ೧೬ನೇ ಪಟ್ಟಾಭಿಷೇಕ ಮತ್ತು ಬೃಹತ್ ಸಮಾವೇಶ ಕಾರ್ಯಕ್ರಮವು ಏ.೨೦ರಂದು ಮಧ್ಯಾಹ್ನ ೩ ಗಂಟೆಗೆ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಮತ್ತು ವಿಧಾನ ಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ ತಿಳಿಸಿದರು.
ಚಿಕ್ಕೋಡಿ ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಮ್ಮ ಸಮುದಾಯವು ೨೫ ರಿಂದ ೩೦ ಲಕ್ಷ ಜನಸಂಖ್ಯೆ ಹೊಂದಿದೆ. ಸಾಮಾಜಿಕ ನ್ಯಾಯಕ್ಕಾಗಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಜಿಲ್ಲೆಯ ಎಲ್ಲ ಶಾಸಕರು, ಬೆಳಗಾವಿ ಸಂಸದರು ಆಗಮಿಸಲಿದ್ದಾರೆ. ನಮ್ಮ ಸಮುದಾಯಕ್ಕಾಗಿ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವಂತೆ ಸಮಾವೇಶದಲ್ಲಿ ಮುಖ್ಯಮಂತ್ರಿಗೆ ಒತ್ತಾಯಿಸಲಾಗುತ್ತದೆ ಎಂದರು.
ಚಿತ್ರದುರ್ಗದ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ, ಮುಖಂಡರಾದ ಲಕ್ಷ್ಮಿನಾರಾಯಣ, ವಿಠ್ಠಲ ಯಾದವ, ಶಶಿಕುಮಾರ ನರಸಿಂಹಗೌಡ, ಬಿ.ಎಂ. ಕೃಷ್ಣಪ್ಪ, ವಿಠ್ಠಲ ಖೋತ, ಜಿಲ್ಲಾಧ್ಯಕ್ಷ ಶೀತಲ ಮುಂಡೆ, ಪುರಸಭೆ ಸದಸ್ಯ ಸಂತೋಷ ಜೂಗಳೆ, ಶಂಕರ ಟವಳೆ, ಸಂತೋಷ ಟವಳೆ, ಸಿದ್ರಾಮ ಮುಂಡೆ, ರಾಜು ಸಂಕೇಶ್ವರಿ, ರಾಮಾ ವಂಟಗೂಡೆ, ಶಿವಲಿಂಗ ಪೂಜಾರಿ, ಜಯಗೌಡ ಪಾಟೀಲ, ಸಚಿನ ಕೋತ, ಸುಂದರ ಮುಂಡೆ ಇತರರಿದ್ದರು.