ಜಿಲ್ಲೆ

೨.೦೫ ಲಕ್ಷ ರೂ.ಗಳ ಮೌಲ್ಯದ ೩೪.೫೬ ಲೀಟರ ಮದ್ಯ ವಶ

ಬಾಗಲಕೋಟೆ: ಜಿಲ್ಲೆಯ ಮುಧೋಳ ಮತ್ತು ಜಮಖಂಡಿ ವಲಯ ವ್ಯಾಪ್ತಿಯಲ್ಲಿ ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ದಾಳಿ ನಡೆಸಿ ಪ್ರತ್ಯೆಕ ಮೂರು ಪ್ರಕರಣಗಳಲಿ ೨.೦೫ ಲಕ್ಷ ರೂ.ಗಳ ಮೌಲ್ಯದ ಒಟ್ಟು ೩೪.೫೬ ಲೀಟರ್ ಮದ್ಯವನ್ನು ಜಪ್ತ ಮಾಡಿಕೊಳ್ಳಲಾಗಿದೆ.

ಮುಧೋಳ ವ್ಯಾಪ್ತಿಯ ಮುಧೋಳ-ಕುಳಲಿ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ ೬೮ ಸಾವಿರ ರೂ.ಗಳ ಮೌಲ್ಯದ ೧೭.೨೮ ಲೀಟರ್, ಮಾಚಕನೂರು ಕ್ರಾಸ್‌ನಲ್ಲಿ ರಸ್ತೆಗಾವಲು ನಡೆಸುತ್ತಿದ್ದಾಗ ಅಕ್ರಮವಾಗಿ ಸಾಗಿಸುತ್ತಿದ್ದ ೫೩೮೦೦ ರೂ.ಗಳ ಮೌಲದ್ಯ ೮.೬೪೦ ಲೀಟರ ಹಾಗೂ ಜಮಖಂಡಿ ವಲಯ ವ್ಯಾಪ್ತಿಯ ಯಲ್ಲಟ್ಟಿ ಗ್ರಾಮದಲ್ಲಿರುವ ಸಂಗೊಳ್ಳಿ ರಾಯಣ್ಣ ಸರ್ಕಲ್‌ನಲ್ಲಿ ಸಾಗಿಸುತ್ತಿದ್ದ ೮೩೮೪೦.೦೦ ರೂ.ಗಳ ಮೌಲ್ಯದ ೮.೬೪ ಲೀಟರ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳಾದ ಸುರೇಶ ಭೀಮಪ್ಪ ಬಚ್ಚಪ್ಪಗೋಳ ಹಾಗೂ ಪರಾರಿಯಾದ ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿಕೊಂಡು ಪ್ರಥಮ ವರ್ತಮಾನ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಅಬಕಾರಿ ಇಲಾಖೆ ಪ್ರಕಟಣೆ ತಿಳಿಸಿದೆ.