ಕಲಬುರಗಿ: ಆಳಂದ ತಾಲೂಕಿನಲ್ಲಿ ಕಳೆದ ಎರಡು ತಿಂಗಳಿಂದ ಮಧ್ಯಾಹ್ನದ ಬಿಸಿಯೂಟ ಹಾಗೂ ಮೊಟ್ಟೆಯನ್ನು ಶಾಲೆಗಳಿಗೆ ಪೂರೈಸುತ್ತಿಲ್ಲ ಎಂದು ದಲಿತ ಸೇನೆ ಜಿಲ್ಲಾ ಪ್ರಧಾನ ಕರ‍್ಯರ‍್ಶಿ ಮಲ್ಲಿಕರ‍್ಜುನ ಬೋಳಣಿ ಆರೋಪಿಸಿದರು.
ತಾಲೂಕಿನ ೪೮ ರ‍್ಕಾರಿ ಪ್ರೌಢ ಶಾಲೆ, ೧೧ ಖಾಸಗಿ ಶಾಲೆ, ೨೫೯ ರ‍್ಕಾರಿ ಪ್ರಾಥಮಿಕ ಶಾಲೆ, ೪೮ ಅನುದಾನಿತ ಪ್ರಾಥಮಿಕ ಶಾಲೆಗಳಿಗೆ ಕಳೆದ ಎರಡು ತಿಂಗಳಿನಿಂದ ಮಧ್ಯಾಹ್ನದ ಬಿಸಿಯೂಟದ ಆಹಾರ ಧಾನ್ಯ ಪೂರೈಕೆ ಆಗುತ್ತಿಲ್ಲ. ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಕುಂಟು ನೆಪ ಹೇಳುತ್ತಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಆಹಾರಧಾನ್ಯ ಪೂರೈಸದೆ ಅಧಿಕಾರಿಗಳು ಮತ್ತು ಪೂರೈಕೆಯ ಏಜೆನ್ಸಿಯವರು ಮಕ್ಕಳಿಗೆ ಮೋಸ ಮಾಡುತ್ತಿರುವುದಲ್ಲದೇ, ಅಕ್ರಮ ನಡೆಸಿರುವ ಸಾಧ್ಯತೆ ಇದೆ. ಈ ಕುರಿತು ಕೂಡಲೇ ಕ್ರಮ ಕೈಗೊಂಡು ಅರ ದಾಸೋಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಏಜೆನ್ಸಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.
ತಾಲೂಕು ಅಧ್ಯ ರ‍್ಮಾ ಬಂಗರಗಾ ಮಾತನಾಡಿ, ೆಬ್ರವರಿ, ಮರ್ಚ್ನಿಂದ ಬಿಸಿಯೂಟ ಆಹಾರಧಾನ್ಯ ಪೂರೈಕೆ ಆಗುತ್ತಿಲ್ಲ. ಶಾಲೆಯ ಮುಖ್ಯಗುರುಗಳು ಅಲ್ಲಿ, ಇಲ್ಲಿ ತಂದು ಮಧ್ಯಾಹ್ನದ ಬಿಸಿಯೂಟ ನಡೆಸುತ್ತಿದ್ದಾರೆ. ಈ ಬಗ್ಗೆ ಅರ ದಾಸೋಹ ಅಧಿಕಾರಿಗಳೇ ಏಜೆನ್ಸಿಗೆ ನೋಟಿಸ್ ನೀಡಿದ್ದಾರೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಜಿಪಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಮಹೇಶ ಕೋಚಿ, ದಿಲೀಪ ಮಟಕಿ, ಲ$್ಮಣ ನಿಂಬಾಳ, ಲ$್ಮಣ ಮೇಲಕೇರಿ, ಶರಣು ಕೌಲಗಾ, ಜೈಭೀಮ ಕಂಟೆಕುರೆ ಇತರರಿದ್ದರು.