ಜಿಲ್ಲೆ

೧೬ರಂದು ಗಣೇಶ ವಿಸರ್ಜನೆಗೆ ಅವಕಾಶವಿಲ್ಲ

ಸುರಪುರ: ತಾಲೂಕಿನಲ್ಲಿ ಗೌರಿ, ಗಣೇಶ ಮತ್ತು ಈದ್ ಮಿಲಾದ್ ಹಬ್ಬವನ್ನು ಶಾಂತಿಯಿAದ ಆಚರಣೆ ಮಾಡಬೇಕು ಎಂದು ಪೊಲೀಸ್ ಇನ್ಸ್ಪೆಕ್ಟರ್ ಆನಂದ ವಾಗ್ಮೋಡೆ ಹೇಳಿದರು.

ನಗರದ ಪೊಲೀಸ್ ಠಾಣೆಯಲ್ಲಿ ಬುಧವಾರ ಕರೆದಿದ್ದ ಶಾಂತಿಸಭೆಯಲ್ಲಿ ಮಾತನಾಡಿದ ಅವರು, ಸೆ.೭ರಂದು ಗಣೇಶ ಪ್ರತಿಷ್ಠಾಪಿಸಲಗುತ್ತದೆ. ಸೆ.೧೬ರಂದು ಈದ್ ಮಿಲಾದ್ ಹಬ್ಬ ಇರುವ ಕಾರಣ ಅಂದು ಗಣೇಶ ವಿಸರ್ಜನೆಗೆ ಅವಕಾಶ ಇರುವುದಿಲ್ಲ. ಸುರಪುರ ಠಾಣಾ ವ್ಯಾಪ್ತಿಯಲ್ಲಿ ೯೧ ಕಡೆ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತದೆ. ಎಲ್ಲೆಡೆ ಹಬ್ಬ ಇರುವ ಕಾರಣ ಬಿಗಿ ಪೊಲೀಸ್ ಬಂದೋಬಸ್ತ್ ದೊಡ್ಡ ಸವಾಲಾಗಿದೆ. ಹೀಗಾಗಿ ಅಂದು ವಿಸರ್ಜನೆಗೆ ಅವಕಾಶ ಇಲ್ಲ ಎಂದರು.

ಗಣೇಶ ಪ್ರತಿಷ್ಠಾಪಿಸುವವರು ಆಯಾ ಸ್ಥಳೀಯ ಸಂಸ್ಥೆಗಳಾದ ಗ್ರಾಪಂ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್, ಜೆಸ್ಕಾಂ ಅನುಮತಿ ಪಡೆದ ನಂತರ ಪರವಾನಗಿ ನೀಡಲಾಗುತ್ತದೆ. ಪರವಾನಗಿ ಪಡೆಯದೆ ಗಣೇಶ ಪ್ರತಿಷ್ಠಾಪಿಸಿದರೆ ಆಯೋಜಕರನ್ನೇ ಹೊಣೆಗಾರರನ್ನಾಗಿ ಮಾಡಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.


ಡಿವೈಎಸ್‌ಪಿ ಜಾವೀದ್ ಇನಾಮದಾರ, ಮುಖಂಡರಾದ ಸಲೀಂ ಗೋಗಿ, ನರಸಿಂಹಕಾAತ ಪಂಚಮಗಿರಿ, ಅಹಮದ್ ಪಠಾಣ್, ಶರಣು, ಸಚಿನ್, ಶಿವಲಿಂಗ ಹಸನಾಪುರ ಮಾತನಾಡಿದರು. ಭೀಮನಗೌಡ, ವೆಂಕೋಬ ಬಿರಾದಾರ, ದಾನಪ್ಪ ಲಕ್ಷ್ಮೀಪುರ, ಶರಣಬಸಪ್ಪ, ಎಂ. ಪಟೇಲ್, ಎಂ.ಡಿ. ಯುಸೂಫ್, ರಜಾಕ್‌ಸಾಬ್, ರಮೇಶ, ಹಂಪಯ್ಯ, ಅಬೀದ್, ಹಣಮಂತ ಬಿಲ್ಲುವ, ಭಾಗನಾಥ, ವಿಶ್ವನಾಥ, ಚನ್ನಬಸಪ್ಪ ವೆಂಕಟೇಶ, ಗಣೇಶ, ಉಮೇಶ, ದೇವಪ್ಪ ಇತರರಿದ್ದರು.