ಜಿಲ್ಲೆ

೧೦೯ ಕೆಜಿ ಮಾದಕ ವಸ್ತುಗಳ ನಾಶ

೧೦೯ ಕೆಜಿ ಮಾದಕ ವಸ್ತುಗಳ ನಾಶ
ಬೆಳಗಾವಿ: ನಗರದ ಕಮೀಷನರೇಟ್ ವ್ಯಾಪ್ತಿಯಲ್ಲಿ  ಕಳೆದ ಹಲವು ತಿಂಗಳಿನಲ್ಲಿ ದಾಖಲಾಗಿದ್ದ  ೩೬ ಪ್ರಕರಣದಲ್ಲಿ ಜಪ್ತಿ ಮಾಡಿದ್ದ ,ಮಾದಕ ಪದಾರ್ಥಗಳಾದ ಗಾಂಜಾ, ಚರಸ್, ಮೇಥಾಂಪೇಟಮೈನ್ ಡ್ರಗ್ಸ್ ಸೇರಿ ಒಟ್ಟು ೩೬.೪೮ ಲಕ್ಷ ರೂ. ಮೌಲ್ಯದ ೧೦೯ ಕೆಜಿ ೮೦೯ ಗ್ರಾಂ ವಿವಿಧ ಮಾದಕ ವಸ್ತುಗಳನ್ನು  ಜಿಲ್ಲೆಯ ಸವದತ್ತಿ ತಾಲೂಕಿನ ಹಾರೋಗೊಪ್ಪ  ಗ್ರಾಮದಲ್ಲಿರುವ  ದಿ,ಬೆಳಗಾವಿ ಗ್ರೀನ್ ಎನ್ವಿರಾನ್‌ಮೆಂಟ್ ಮಾನೇಜಮೇಂಟ್ ಪ್ರೈವೇಟ್.ಲಿ ದಲ್ಲಿ  ಬುಧವಾರ ನಾಶಪಡಿಸಿದರು. ಈ ವೇಳೆ ಡ್ರಗ್ಸ್  ಡಿಸ್ಪೋಸಲ್ ಕಮಿಟಿ, ಉಪ ಪೊಲೀಸ್ ಆಯುಕ್ತರು, ಅಪರಾಧ ಮತ್ತು ಸಂಚಾರಿ ವಿಭಾಗದ ಅಧಿಕಾರಿಗಳು, ವಾಯು ಮಾಲಿನ್ಯ ನಿಯಂತ್ರಣ, ಉಪ ಔಷಧಿ ನಿಯಂತ್ರಕ ಅಧಿಕಾರಿಗಳು ಇದ್ದರು.