ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿಯನ್ನು ಔರಾದ್ ತಾಲೂಕಿನ ಸುಂಕನಾಳ ಕ್ರಾಸ್ ಬಳಿ ಚಿಂತಾಕಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪಿಎಸ್‌ಐ ಸಿದ್ದಲಿಂಗ ಶೆಟ್ಟಿ, ಆಹಾರ ನಿರೀಕ್ಷಕಿ ಪ್ರೇಮಲತಾ, ತಿರುಪತಿ ಇತರರಿದ್ದರು. 
ಜಿಲ್ಲೆ

೧೦೧ ಕ್ವಿಂಟಾಲ್ ಪಡಿತರ ಅಕ್ಕಿ ಜಪ್ತಿ

ಔರಾದ್: ಕಾಳಸಂತೆಯಲ್ಲಿ ಮಾರಲು ಅನ್ಯ ರಾಜ್ಯಕ್ಕೆ ಟೆಂಪೋದಲ್ಲಿ ಸಾಗಿಸುತ್ತಿದ್ದ ೩.೪೫ ಲಕ್ಷ ಮೌಲ್ಯದ ೧೦೧ ಕ್ವಿಂಟಾಲ್ (೨೦೩ ಚೀಲ) ಪಡಿತರ ಅಕ್ಕಿಯನ್ನು ಸುಂಕನಾಳ ಕ್ರಾಸ್ ಬಳಿ ಬುಧವಾರ ವಶಪಡಿಸಿಕೊಳ್ಳಲಾಗಿದೆ.

ಎಸ್‌ಪಿ ಪ್ರದೀಪ್ ಗುಂಟಿ, ಹೆಚ್ಚುವರಿ ಎಸ್‌ಪಿ ಮಹೇಶ ಮೇಘಣ್ಣನವರ, ಡಿವೈಎಸ್‌ಪಿ ಶಿವಾನಂದ ಪವಾಡಶೆಟ್ಟಿ, ಸಿಪಿಐ ರಘುವೀರಸಿಂಗ್ ಠಾಕೂರ್ ಮಾರ್ಗದರ್ಶನದಲ್ಲಿ ಪಿಎಸ್‌ಐ ಸಿದ್ದಲಿಂಗ ಶೆಟ್ಟಿ ಹಾಗೂ ಆಹಾರ ನಿರೀಕ್ಷಕಿ ಪ್ರೇಮಲತಾ ಮತ್ತು ಸಿಬ್ಬಂದಿ ವಡಗಾಂವ(ದೇ)ದಿಂದ ಚಿಂತಾಕಿ ಕಡೆ ಹೋಗುತ್ತಿದ್ದ ಟೆಂಪೋ ಸುಂಕನಾಳ ಕ್ರಾಸ್ ಬಳಿ ತಡೆದು ಪರಿಶೀಲಿಸಿದಾಗ ಪಡಿತರ ಅಕ್ಕಿ ಇರುವುದನ್ನು ಕಂಡು ವಶಕ್ಕೆ ಪಡೆದಿದ್ದಾರೆ.